ಪವರ್ ಫಲಾಫಲ

ಗುರುವಾರ , ಜೂನ್ 27, 2019
29 °C

ಪವರ್ ಫಲಾಫಲ

Published:
Updated:

ಉತ್ತರಾಷಾಢದ ಇದೇ 23ರಂದು ದಿಲ್ಲಿಯನ್ನು ಪ್ರಧಾನಿಯೆಂಬ ಪವರ್ ಪುರುಷ ಪ್ರವೇಶಿಸಲಿದ್ದಾನೆ. ಆತನ ಲಕ್ಷಣಗಳ ಆಧಾರದ ಮೇಲೆ ದೇಶದ ಮುಂದಿನ ಶುಭಾಶುಭ ಗೋಚಾರ ಫಲಗಳು ಸಂಭವಿಸಲಿವೆ.

ಪವರ್ ಪುರುಷನು ಬಿಳೀ ಬಟ್ಟೆಯನ್ನು ಧರಿಸಿದ್ದು ಬಲಗೈಯ್ಯಲ್ಲಿ ಕಮಲವನ್ನು, ಎಡಗೈಯ್ಯಲ್ಲಿ ಅಭಯ ಹಸ್ತವನ್ನು ತೋರುತ್ತಾನೆ. ಮೂರನೇ ಕೈಯ್ಯಲ್ಲಿ ಎಕೆ 56 ಗನ್ ಇರುವುದರಿಂದ ಉಗ್ರ ನಾಶ. ನಾಲ್ಕನೇ ಕೈಯ್ಯಲ್ಲಿ ಚಮಚ ಇರುವುದರಿಂದ ಸಾಡೆಸಾತಿಗಳ ಕಾಟ ಅಪಾರ. ಪವರ್ ಪುರುಷನ ಪಕ್ಷದವರಿಗೆ ಗೌರವ-ಸಮ್ಮಾನಗಳು ಲಭ್ಯವು. ಹಣ, ಉಳ್ಳವರ ಕಡೆಗೇ ಹರಿಯುವುದರಿಂದ ಐ.ಟಿ ಕುಲದೇವತಾ ಪ್ರಾರ್ಥನೆ ಸೂಕ್ತ. ಅಪ್ರಜ್ಞಾ, ಬರಟ್ಟಿ, ಅಜಮೀರು, ಪಿಟೀಲು, ರಗಡೆಗಳ ಬಾಯಿಬೀಗ ಹರಕೆಯಿಂದ ಭವಿಷ್ಯದಲ್ಲಿ ಗುರುಬಲ ಸಿದ್ಧಿಯಾಗಲಿದೆ. ಚೋರ ಚೌಕೀದಾರ ಮತ್ತು ಭ್ರಷ್ಟಾಚಾರಿ ನಂ.1 ಆಪಾದನೆಗಳು ನಕಾರಾತ್ಮಕ ಪ್ರಭಾವ ಹೊಂದಿದ್ದು, ಭವಿಷ್ಯದಲ್ಲಿ ನಿಷ್ಠುರ ಮಾತು, ಜಗಳ ಸಲ್ಲದು. ರಾಮ ಜಪ, ಗಾಂಧಿ ಮಂತ್ರಗಳ ಪಾರಾಯಣ ಒಳ್ಳೆಯದು.

ಅಷ್ಟಮ ಶನಿಯ ಕಾರಣದಿಂದಾಗಿ ವಿರೋಧಿ ಗಣಕೂಟಗಳು ಪರಸ್ಪರ ಹೊಂದುವುದಿಲ್ಲ. ಇದರಿಂದ ಅಧಿಕಾರ ಅಲಭ್ಯ. ತೆನೆ, ತಮಿಳೆಲೆ, ಅಂಧ್ರದ ನೇಗಿಲು, ಪೊರಕೆ, ಕತ್ತಿ-ಕುಡುಗೋಲು, ಕಾರು, ಬಾಣಗಳು ಒಟ್ಟಾಗಿರದೆ ಪರಸ್ಪರ ಕೊಯ್ದಾಟದಲ್ಲಿ ಮಗ್ನವಾಗುವ ಕಾರಣ, ಭವಿಷ್ಯದಲ್ಲಿ ವಿಶ್ರಾಂತಿ ಲಭ್ಯವು. ಅಂತಿಮದಲ್ಲಿ ಶೂನ್ಯ ಸಂಪಾದನೆಯು.

ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಭಿನ್ನ ಬಾಂಬನ್ನು ಇಡುವ ಪ್ರಯತ್ನ ಸದಾ ನಡೆಯುವುದು. ಕಮಲದ ಸುವಾಸನೆಗೆ ಮರುಳಾಗುವವರನ್ನು ಹಿಡಿದಿಡಲು ಆಗಾಗ ಪ್ರತಿಭಾ ಪುರಸ್ಕಾರ ನೀಡುತ್ತಾ, ರೆಸಾರ್ಟು ವಾಸ ಮತ್ತು ಎಣ್ಣೆ ಸ್ನಾನ ಮಾಡಿಸುವುದು ಒಳ್ಳೆಯದು.

ಬಕರ ರಾಶಿಯ ಜನರ, ರೈತರ ಸ್ಥಿತಿ ಅಧೋಗತಿಯು. ಮಳೆ ಬಾರದೇ ಗುಳೇ ಯೋಗವು. ಪವರ್ ಪುರುಷ ನಡೆಯುತ್ತಾ ಹೋಗುವುದರಿಂದ ಡೀಸೆಲ್, ಪೆಟ್ರೋಲ್ ಬೆಲೆ ತೇಜಿಯಾಗಲಿದೆ. ತರಕಾರಿ, ದಿನಸಿಗೆ ತತ್ವಾರವು. ಕೈ ಮತ್ತು ಕಮಲಗಳು ಅಕೌಂಟಿಗೆ ಹಣ ಹಾಕಲೆಂದು ಕುಬೇರ ಮಂತ್ರ ಜಪಿಸುವುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !