‘ಅಲ್ಲ ಕಲಾ’ ನಾನೇನೂ ಸೋತಿಲ್ಲ. ನನ್ನ ಸೋಲಿಸ್ಯವರೆ ಅಷ್ಟೀಯೆ. ಅದುಕ್ಕೇ ನಾನು ಬಿಲ್ಕುಲ್ ರಾಜೀನಾಮೆ ಕೊಡ
ಕ್ಕುಲ್ಲ ಅಂದ್ರೆ ಕೊಡಕ್ಕುಲ್ಲ’ ಅಂತ ಪವರ್ ಮೆಸೇಜ್ ಬುಡ್ತಾ ಕೂತಿತ್ತಲ್ಲ ಬಂಗಾಳಕ್ಕ ಏನಾತ್ರೋ?’ ಅಂತಂದ್ರು ತುರೇಮಣೆ.

‘ಬಂಗಾಳಕ್ಕನಿಗೆ ಎಲ್ಲಾರೂ ಹೇಳಾತಂತೆ. ‘ಕೂತವನದ್ದೇ ಕುರ್ಚಿ ಅಂತ ಡಿಕೇಶಿಯಣ್ಣ ಹೇಳ್ಯದೆ’ ಅಂತ ಅಕ್ಕ ರಂಪ ಮಾಡ್ತಾ ಅದಂತೆ ಕಯಾ’ ಅಂದ ತಿಪ್ಪಣ್ಣ.

‘ಇದೇನು ಕಂಡೆ. ಕೇರಳದ ಗುಮ್ಮ ಯಾರು ಅಂತ ಇನ್ನೂ ತೀರ್ಮಾನಾಗಿಲ್ವಂತೆ. ‘ಏನೂ ತೀರ್ಮಾನ ತಗಳದೇ ಇರೋದೇ ನಮ್ಮ ತೀರ್ಮಾನ’ ಅಂದದಂತೆ ರಾವುಲಣ್ಣ’ ನಾನು ಹೇಳಿದೆ.

‘ತಮಿಳಣ್ಣ ಬಹುಮತ ಬೇಕಾಗ್ಯದೆ ಅಂತ ಸುಮಾರು ಶಾಸಕ ಬಾಂಬುಗಳನ್ನ ಮಗ್ಗುಲಗೇ ಮಡಿಕಂದವ್ನಲ್ಲ. ಅವೆಲ್ಲಾ ಯಾವಾಗ ಸಿಡೀತವೋ ಕಾಣೆ. ಡಿಎಂಕೆ, ಎಐಎಡಿಎಂಕೆ ಲ್ಯಾಂಡುಮೈನುಗಳ ಭಯ ಬ್ಯಾರೆ ಅದೆ ಕಯ್ಯಾ ತಮಿಳಣ್ಣನಿಗೆ’ ಯಂಟಪ್ಪಣ್ಣ ಯೋಚನೆಗೆ ಬಿತ್ತು.

‘ತಮಿಳಣ್ಣನೂ ಎಲ್ಲಾ ಸಮಸ್ಯೇನೂ ತೀರಿಸಕ್ಕೆ ಡ್ಯೂಪ್ ಮಡಿಕತ್ತನೇನೋ’ ತಿಪ್ಪಣ್ಣ ಜೋಕು ಮಾಡಿದ.

‘ಸುಮ್ಮಗಿರ್ರೋ ಪಾಪ, ಆಯಪ್ಪನಿಗೆ ಈಗ ಅಧಿಕಾರದ ಮುಂಗೋಳಿ ಕೂಗ್ತಾ ಅದೆ. ಮೋದಿ ಮಾರಾಜರ ಥರಾ ಬುದುವಂತರನ್ನ ಕ್ಯಾಬಿನೆಟ್ಟಿಗೆ ತಂಗಂಡವ್ನಂತೆ’ ಸುದ್ದಿ ಸ್ಫೋಟಿಸಿದೆ.

‘ಮಾಡಿಕ್ಯಲಿ ಬುಡ್ರೋ. ತಮಿಳಣ್ಣನೂ ಸಿದ್ದಣ್ಣನ ಥರ ಗ್ಯಾರಂಟಿ ಕೊಡ್ತೀನಿ ಅಂತ ಹೇಳ್ಯವುನಲ್ಲ, ಅದಕ್ಕೆಲ್ಲಾ ಕಾಸು ಎಲ್ಲಿಂದ ತಂದಾನು?’ ತುರೇಮಣೆ ವಿಶ್ಲೇಷಣೆ ಮಾಡಿದರು.

‘ಅಲ್ಲೂವೆ ಹತ್ತು ಲಕ್ಷ ಕೋಟಿ ಸಾಲ ಅದುಗಿಕ್ಯಂದು ಕೂತದೆ. ಅದುನ್ನೆಲ್ಲಾ ತೀರಿಸಬೇಕು. ಯಂಗೂ ಕರ್ನಾಟಕಕ್ಕಿಂತಾ ತಮಿಳುನಾಡು ಭ್ರಷ್ಟಾಚಾರದೇಲಿ ಮೇಲದಂತೆ. ಯಾವ್ಯಾವುದಕ್ಕೆ ಎಷ್ಟೆಷ್ಟು ಟ್ಯಾಕ್ಸು ಜಡಿದು ಗ್ಯಾರಂಟಿಗೆ ಕಾಸು ರೆಡಿ ಮಾಡಿಕ್ಯಬಕು ಅಂತ ಸಿದ್ದಣ್ಣ–ತಮಿಳಣ್ಣ ಇಬ್ಬರೂ ಸೇರಿ ಸಿದ್ಧಸೂತ್ರ ತಯಾರು ಮಾಡಿಕ್ಯತ್ತರೆ ಬುಡಿ’ ಅಂತ ನಾನು ವಿಶಲ್ ಪೋಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.