‘ಪದ್ದು, ಮೋದಿ ಮತ್ತೆ ವರ್ಕ್ ಫ್ರಂ ಹೋಂ ಶುರು ಮಾಡಿ ಅಂತ ಹೇಳಿದ್ದಾರಲ್ಲ, ದೇಶಕ್ಕೋಸ್ಕರ ಅಳಿಲುಸೇವೆ ಸಲ್ಲಿಸೋ ಅವಕಾಶ ಸಿಕ್ತು ಕಣೆ’ ಎಂದ ಪರ್ಮೇಶಿ.

‘ಸಾಕ್, ಸುಮ್ನಿರ್ರೀ! ನೀವು, ನಿಮ್ಮಗ ಧಿಮ್ಮಲೆ ರಂಗ ಅಂತ ಲ್ಯಾಪ್ಟಾಪು, ಮೊಬೈಲು ಹಿಡ್ಕಂಡು ಮನೇಲಿ ಕೂತ್ಬಿಡಿ, ನಾನಿಲ್ಲಿ ನಿಮಗೆ ಅನ್ನ ಬೇಸ್ಕಂಡು ಪತಿಸುತರ ಸೇವೆ ಮಾಡ್ಕಂಡು ಬಿದ್ದಿರ್ತೀನಿ’.

‘ಹಾಗಲ್ವೇ! ಹೆಂಡತಿ ಮುಖ ಎಷ್ಟೊತ್ತು ನೋಡ್ತಿ? ಅಂತ ಒಬ್ರು ಕೇಳಿದ್ರು. ನಾನು ವನಜ ಮಿಸ್ನ, ನಮ್ ಪ್ರಾಜೆಕ್ಟ್ ಲೀಡರ್ ಮಿಸ್ ಲಿಲ್ಲೀನ ಮಿಸ್ ಮಾಡ್ಕಂಡು ಇಲ್ ಕೂತಿರ್ತೀನಿ ಅಂದ್ರೆ ಅದು ದೇಶಕ್ಕೋಸ್ಕರ ತಾನೆ? ನೀನು ಎಣ್ಣೆ ಹಾಕಕ್ಕೆ ಬಿಟ್ರೆ ಇನ್ನೂ ದೊಡ್ಡ ರೀತೀಲಿ ದೇಶೋದ್ಧಾರ ಆಗುತ್ತೆ’.

‘ಎಣ್ಣೆಗೂ ದೇಶಕ್ಕೂ ಏನ್ರೀ ಸಂಬಂಧ?’

‘ನಮ್ ರಾಜ್ಯದಲ್ಲಿ ಏಪ್ರಿಲ್ನಲ್ಲಿ ಜನ 3,688 ಕೋಟಿ ರೂಪಾಯಿ ಎಣ್ಣೆ ಕುಡಿದವ್ರೆ! ಎಣ್ಣೆ ಕುಡ್ಕೊಂಡ್ ಡ್ರೈವ್ ಮಾಡೋ ಹಾಗಿಲ್ಲ, ಹಾಗಾಗಿ ಇಂಧನ ಉಳಿಯುತ್ತಲ್ಲ’.

‘ನಿಮ್ ತಲೆ! ಮೋದಿ ಮಾಮಂದು ಒಂದೋ ಎರಡೋ ಟಿಪ್ಸ್ ಸರಿ, ಸಲಹೇನೂ ಪ್ಯಾಕೇಜ್ ತರ ಕೊಡಕ್ಕೆ ಅದೇನು ಗ್ಯಾರಂಟಿ ಸ್ಕೀಮಾ? ವಿದೇಶಿ ವಿನಿಮಯ ಮಿತಿಮೀರುದ್ರೆ ಸಂಸಾರ ಅಯೋಮಯ ಆಗೋಗುತ್ತೆ ಅಷ್ಟೇ! ಹೊಸ ಚಿನ್ನ ಕೊಳ್ಳೋದು ಬೇಡ, ಇರೋದನ್ನೇ ಹೊಸದು ಮಾಡ್ಕೊಂಡು ಆಚೆನಾದ್ರೂ ಹೋಗೋದು ಬೇಡ್ವಾ?’ ಕೊಂಕು ತೆಗೆದರು ಪದ್ದಮ್ಮ.

‘ಅಯ್ಯೋ ನಿನ್ನ, ಇರೋದು ಹೊಸಾದು ಮಾಡ್ಕೊಳೋದು ಅಂದ್ರೆ ನಿನ್ ಒಡವೆ ಕರಗುಸ್ತೀಯಾ?’

‘ನಂದ್ಯಾಕೆ ಕರಗುಸ್ಲಿ? ಸ್ವದೇಶಿ ವಿನಿಮಯ! ಅತ್ತೇದು, ನಿಮ್ದು ಒಡವೆ ಕರಗಿಸೋದು. ಮುಂದಿನ ವರ್ಷ ನೀವು ಹೊಸ ಚಿನ್ನ ಕೊಂಡ್ಕೊಳ್ಳಿ. ಮೋದಿ ಹೇಳಿರೋದು ಚಿನ್ನ ಕೊಳ್ಳಬೇಡಿ ಅಂತ, ಚಿನ್ನ ಕೀಳಬೇಡಿ ಅಂತ ಹೇಳಿಲ್ವಲ್ಲ?’

ಪರ್ಮೇಶಿ ಬಾಯ್ ಬಿಟ್ಕೊಂಡು ಪದ್ದಮ್ಮನನ್ನೇ ನೋಡುತ್ತಾ ಕುಳಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.