‘ಅಬ್ಬಾ! ಎರಡು ದೊಡ್ಡಾನೆಗಳು ಸೇರಿದ್ರೆ ಎಂಥಾ ದೊಡ್ಡ ಮರಾನೂ ಮಕಾಡೆ ಮಲಗಿಸಿ, ಹೊತ್ತೊಯ್ಯತಾವೆ!’ ಎನ್ನುತ್ತ ಬೆಕ್ಕಣ್ಣ ಮೂಗಿನ ಮೇಲೆ ಬೆರಳಿಟ್ಟಿತು.

‘ಯಾವ ದೊಡ್ಡಾನೆಗಳು? ಯಾವ ಮರ?’ ನಾನು ಕುತೂಹಲದಿಂದ ಕೇಳಿದೆ.

‘ಥೋ... ನೀ ಸುದ್ದೀನೆ ಓದಂಗಿಲ್ಲ. ನಾನು ಮೋದಿ ಸೇರಿದ್ರೆ ಎಂಥಾ ಘನಂದಾರಿ ಕೆಲಸಾನೂ ಮಾಡಿ ಮುಗಿಸತೇವು ಅಂತ ಟ್ರಂಪಣ್ಣ ಹೇಳ್ಯಾನೆ. ಇಬ್ಬರೂ ಸೇರಿ ಯುದ್ಧ ನಿಲ್ಲಿಸತಾರೆ. ಈ ಸಲ ನೊಬೆಲ್ ಶಾಂತಿ ಕಪ್ ಇಬ್ಬರಿಗೂ ಸೇರಿ ಕೊಡಬೌದು’ ಹೆಮ್ಮೆಯಿಂದ ಹೇಳಿತು.

‘ಕೊಲ್ಲಿ ಯುದ್ಧ ಬಗೆಹರಿಸಕ್ಕೆ ಪಾಕ್ ಮಧ್ಯಸ್ಥಿಕೆಯಲ್ಲಿ ಸಭೆ ಮಾಡ್ತಾರಂತೆ. ಶಾಂತಿ ಕಪ್ ಪಾಕಿಸ್ತಾನಕ್ಕೆ ಕೊಟ್ಟರೂ ಕೊಡಬೌದು’ ಅಂತ ಇನ್ನೊಂದು ಸುದ್ದಿ ತೋರಿಸಿದೆ.

‘ಆ ಮಾತುಕತಿವಳಗೆ ಟ್ರಂಪಣ್ಣನೂ ಇಲ್ಲ, ಇಸ್ರೇಲೂ ಇಲ್ಲ... ಇರಾನೂ ಇಲ್ಲ. ಯುದ್ಧ ಮಾಡ್ತಾ ಇರೋರನ್ನೇ ಬಿಟ್ಟು, ಅಕ್ಕಪಕ್ಕದೋರನ್ನ ಸೇರಿಸ್ಕಂಡು ಅವರೇನು ಮಧ್ಯಸ್ಥಿಕೆ ಮಾಡತಾರೆ?’ ಬೆಕ್ಕಣ್ಣ ಉಡಾಫೆಯಿಂದ ಹೇಳಿತು.

‘ಟ್ರಂಪಣ್ಣ, ಮೋದಿಮಾಮಾರು ಫೋನಿನಾಗೆ ಮಾತಾಡೂವಾಗ ಇಲಾನ್ ಮಸ್ಕಣ್ಣನೂ ಇದ್ದನಂತ. ಹಂಗಾರೆ ಕಪ್ ಮೂರು ಜನರಿಗೆ ಹಂಚತಾರೇನೋ!’ ನಾನು ರಾಗವೆಳೆದೆ.

‘ಎಲ್ಲಾ ಬರೇ ಗಾಳಿಸುದ್ದಿ. ಟ್ರಂಪಣ್ಣ–ಮೋದಿಮಾಮಾ ಇಬ್ಬರೇ ಮಾತಾಡ್ಯಾರೆ’ ಬೆಕ್ಕಣ್ಣ ಗುರುಗುಟ್ಟಿತು.

‘ಆ ಕಪ್ ಸುದ್ದಿ ಬಿಡೂಣು. ನಮ್ಮಲ್ಲಿ ಉಪಚುನಾವಣೆಗಳಲ್ಲಿ ಮತದಾರಪ್ರಭು ಯಾರ ಕೈಗೆ
ಕಪ್ ಕೊಡ್ತಾನೋ ನೋಡೂಣು’ ಎಂದು ಮಾತು ಬದಲಿಸಿದೆ.

‘ಇಲ್ಲಿ ಕಪ್ ಯಾರಿಗೆ ಸಿಗತೈತೋ ಗೊತ್ತಿಲ್ಲ. ಆದ್ರ ಅಸ್ಸಾಂ ವಳಗೆ ಮಾತ್ರ ‘ಮಿಯಾ’ಗಳ ಬೆನ್ನುಮೂಳೆ ಮುರೀತೀನಿ ಅಂತ ಅಲ್ಲಿ ಸಿಎಮ್ಮು ಹಿಮಂತಣ್ಣ ಗುಡುಗ್ಯಾನೆ. ಅಲ್ಲಿ ಕಪ್ ಈ ಸಲನೂ ಕಮಲಕ್ಕನ ಮನಿಯವ್ರಿದ್ದೇ!’ ಬೆಕ್ಕಣ್ಣ ವಾದಿಸಿತು.

‘ಐಪಿಎಲ್ ಕಪ್ ಈ ಸಲನೂ ಆರ್ಸಿಬಿಗೇ ಸಿಗಬೌದಾ?’

‘ಅದನ್ನು ಪಿಚ್ ಅನ್ನೋ ಅದೃಷ್ಟದೇವತೆ ನಿರ್ಧರಿಸತಾಳೆ!’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.