‘ರೀ, ಊರು ಉದ್ಧಾರ ಆಗಬೇಕೂಂದ್ರೆ ಏನು ಮಾಡಬೇಕು?’ ಸುಮಿ ಕೇಳಿದಳು.

‘ಆ ಊರಿಗೆ ಬೆಂಗಳೂರು ಅಂತ ಹೆಸರಿಟ್ಟರೆ ಸಾಕು ಉದ್ಧಾರ, ಅಭಿವೃದ್ಧಿ ಆಗುವುದಂತೆ, ಕೆಟ್ಟು ಪಟ್ಟಣ ಸೇರು ಅಂತಾರಲ್ಲಾ ಹಾಗೆ!’ ಅಂದ ಶಂಕ್ರಿ.

‘ತುಮಕೂರನ್ನು ಬೆಂಗಳೂರಿಗೆ ಸೇರಿಸಿ ಬೆಂಗಳೂರು ಉತ್ತರ ಜಿಲ್ಲೆ ಮಾಡಿ, ತುಮಕೂರಿಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯೂ ಕೊಡಿಸಿ ವಿದೇಶಿ ಹೂಡಿಕೆದಾರರ ಗಮನ ಸೆಳೆದು ತುಮಕೂರಿಗೆ ಸೆಳೆಯುತ್ತೇವೆ. ಆಗ ತುಮಕೂರು ಜಿಲ್ಲೆಯ ರೈತರ ಜಮೀನಿಗೆ ಒಳ್ಳೆ ಬೆಲೆ ಸಿಗುತ್ತದೆ, ರೈತರ ಲೈಫ್ಸ್ಟೈಲ್ ಸುಧಾರಿಸುತ್ತದೆ ಅಂತ ಹೋಂ ಮಿನಿಸ್ಟರ್ ಹೇಳ್ತಿದ್ದಾರೆ’.

‘ಒಳ್ಳೆಯ ಬೆಲೆ ಕೇಳಲು ರೈತರು ತಮ್ಮ ಜಮೀನನ್ನು ಮಾರಾಟಕ್ಕಿಟ್ಟಿಲ್ಲ, ಜಮೀನಿನ ಬೆಲೆಗಿಂತ ಜಮೀನಿನಲ್ಲಿ ರೈತರು ಬೆಳೆಯುವ ಬೆಳೆಯ ಬೆಲೆ ಹೆಚ್ಚಾಗಬೇಕು ಅಲ್ವಾ?’

‘ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡಿದಂತೆ ತುಮಕೂರನ್ನು ಬೆಂಗಳೂರು ಉತ್ತರ ಮಾಡಿದರೆ ಹೂಡಿಕೆದಾರರು ತುಮಕೂರಿನಲ್ಲೂ ಹೂಡಿಕೆ ಮಾಡ್ತಾರಂತೆ’.

‘ತುಮಕೂರು ಮಾತ್ರ ಯಾಕೆ ಉದ್ಧಾರ ಆಗಬೇಕು, ಬೆಂಗಳೂರಿನ ನೆರೆ ಜಿಲ್ಲೆಗಳನ್ನೂ ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ನೈರುತ್ಯ, ವಾಯವ್ಯ ಅಂತ ಮಾಡಬಹುದು’.

‘ಕರ್ನಾಟಕವನ್ನು ಬೆಂಗಳೂರು ರಾಜ್ಯ ಅಂತ ಹೆಸರು ಬದಲಾಯಿಸಿದರೆ ಹೂಡಿಕೆದಾರರು ಬಂಡವಾಳ ಹಾಕಿ ವ್ಯವಹಾರ ಮಾಡಿಕೊಳ್ಳಲು ಸುಲಭವಾಗುತ್ತದೆ ಅಲ್ವೇನ್ರೀ?’

‘ಬಂಡವಾಳಗಾರರು ಬಯಸಿದರೆ ಊರಿನ ಹೆಸರಿನ ಜೊತೆಗೆ ಊರಿನ ರಸ್ತೆ, ವೃತ್ತ, ಬೆಟ್ಟಗುಡ್ಡಗಳ ಹೆಸರನ್ನೂ ಬದಲಾಯಿಸಲು ನಾವು ತಯಾರಿರಬೇಕು’.

‘ಹೌದು, ರೈತರು ಬರೀ ಅನ್ನದಾತರು. ಹೂಡಿಕೆದಾರರು– ಚಿನ್ನದಾತರು, ಅವರ ಅಭಿವೃದ್ಧಿ ಕಾರ್ಯಕ್ಕೆ ಬೆಟ್ಟಗುಡ್ಡ ಒಡೆದು ಬಟಾಬಯಲು ಮಾಡಿಕೊಡಲೂ ನಾವು ಸಿದ್ಧರಿರಬೇಕು, ಯಾಕೆಂದರೆ ಊರು ಉದ್ಧಾರ ಆಗಬೇಕಲ್ವಾ?!’ ಎಂದು ಶಂಕ್ರಿ ನಕ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.