ಬೆಕ್ಕಣ್ಣ ಸಣ್ಣ ಜಿರಲೆಯೊಂದನ್ನು ಹಿಡಿಯುವ ಸನ್ನಾಹದಲ್ಲಿ ಇತ್ತು. ಜಿರಲೆ ತಪ್ಪಿಸಿಕೊಂಡಿತು.

‘ಎಷ್ಟ್ ಸಲ ಹೇಳೀನಿ ನಿನಗ... ಹಿಟ್ ಸ್ಪ್ರೇ ತಂದು ಎಲ್ಲಾ ಕಡಿಗಿ ಹಾಕು ಅಂತ. ಹಿಂಗೆ ಬಿಟ್ಟರೆ ಮನಿ ತುಂಬ ಅವೇ ತುಂಬತಾವು’ ಎಂದು ಬೆಕ್ಕಣ್ಣ ರೇಗಿತು.

‘ಏನು ಮಾಡಿದರೂ ಒಂದೆರಡು ಇದ್ದೇ ಇರತಾವು. ಅಡಗಿ ಮನ್ಯಾಗೆ ಎಲ್ಲಾನೂ ಸರಿಯಾಗಿ ಮುಚ್ಚಿಟ್ಟರೆ ಆತು ಬಿಡು’ ಎಂದು ಸಮಾಧಾನಿಸಿದೆ.

‘ಜಿರಲೆಗಳು ವ್ಯವಸ್ಥೆಯ ಮ್ಯಾಲೆ ದಾಳಿ ಮಾಡುವ ಪರಾವಲಂಬಿಗಳು...’ ಎನ್ನುತ್ತ ಪೇಪರಿನಲ್ಲಿದ್ದ ಮುಖ್ಯ ನ್ಯಾಯಮೂರ್ತಿಯವರ ಹೇಳಿಕೆ ತೋರಿಸಿತು.

‘ಆ ಪರಾವಲಂಬಿ ಜಿರಲೆಗಳೇ ಹೆಂಗೆ ಡಿಜಿಟಲ್ ಪಾರ್ಟಿ ಕಟ್ಟಿಕೊಂಡಾರೆ ನೋಡು! ನಿಮ್ ಮೋದಿಮಾಮಾನಿಗಿಂತ ಜಿರಲೆ ಜನತಾ ಪಾರ್ಟಿಗೆ ಫಾಲೋವರ್ಸ್ ಜಾಸ್ತಿ ಅಗ್ಯಾರೆ’ ನಾನು ಕಿಚಾಯಿಸಿದೆ.

‘ಅದೆಲ್ಲ ಅಲ್ಗಾರಿದಮ್ ಆಧಾರಿತ ಡಿಜಿಟಲ್ ಪ್ರಾಪಗಾಂಡ ಅನ್ನೂದು ಮರೀಬ್ಯಾಡ’ ಎಂದು ಬುದ್ಧಿವಾದ ಹೇಳಿದ ಬೆಕ್ಕಣ್ಣ, ‘ಹಂಗಾರೆ ನೀನೂ ಜಿರಲೇನಾ?’ ಎಂದು ಪ್ರಶ್ನಿಸಿತು.

‘ನಾ ಕೆಲಸ ಮಾಡತೀನಿ, ಹಿಂಗಾಗಿ ನಿರುದ್ಯೋಗಿ ಜಿರಲೆ ಅಲ್ಲ. ಆದ್ರ ಸಾವಿರಾರು ಜಿರಲೆಗಳು ಎತ್ತಿದ ಪ್ರಶ್ನೆ ನಂದೂ ಹೌದು’ ಎಂದೆ.

‘ಪ್ರಶ್ನೆ ಸರಿಯಿದ್ದರೆ ಅದನ್ನ ಕೇಳೂ ವಿಧಾನನೂ ಸರಿಯಿರಬಕು. ಹಿಂಗೆಲ್ಲ ಡಿಜಿಟಲ್ ಪ್ರಾಪಗಾಂಡ ಮಾಡಬಾರದು’ ಎಂದು ಬೆಕ್ಕಣ್ಣ ಗುರುಗುಟ್ಟಿತು.

‘ಮತ್ತ ನಮ್ ಯುವಮಂದಿ ಯಾರಿಗೆ, ಯಾವ ವಿಧಾನದಾಗೆ ಪ್ರಶ್ನೆ ಕೇಳಬಕು? ಪ್ರಶ್ನೆ ಕೇಳಕ್ಕೆ ಮೋದಿಮಾಮಾರು ಸಿಗಂಗೇ ಇಲ್ಲ. ನಾರ್ವೆದಾಗೆ ಯುವ ಪತ್ರಕರ್ತೆ ಪ್ರಶ್ನಿಸಿದ್ದಕ್ಕೆ ಮೋದಿಮಾಮಾರು ಎಷ್ಟ್ ಗರಂ ಆದ್ರು’ ಎಂದೆ.

‘ಆಕಿ ಯಾರು ನಮ್ ಮೋದಿಮಾಮಾರಿಗೆ ಪ್ರಶ್ನೆ ಕೇಳಕ್ಕೆ?! ಥತ್... ಎಲ್ಲ ಜಿರಲೆಗಳೇ. ಖರೇ ಅಂದ್ರೆ ಮೆಲೊಡಿ ಚಾಕೊಲೇಟ್ ತಿಂದರೆ ಅದ್ರಾಗೆ ಸಕಲ ಪ್ರಶ್ನೆಗಳಿಗೂ ಉತ್ತರ ಸಿಗತೈತಿ!’ ಎಂದ ಬೆಕ್ಕಣ್ಣ ಈವರೆಗಿನ ವಾಗ್ವಾದವನ್ನೇ ಬದಿಗಿಟ್ಟು, ಮೆಲೊಡಿ ಬಾಯಿಗಿಟ್ಟುಕೊಂಡು ಚಪ್ಪರಿಸಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.