‘ಕೇಳ್ರಲಾ, ಶಿಮ್ಲಾದಲ್ಲಿ ಭೂಕುಸಿತಾದುದ್ದು ‘ಆ್ಯಕ್ಟ್ ಆಫ್ ಗಾಡ್’ ಕಾರಣಕ್ಕಂತೆ. ‘ದೇವರು ಮಾಡಿದ್ದಕ್ಕೆ ನಾವ್ಯಾಕೆ ಪರಿಹಾರ ಕೊಡನ’ ಅಂದ್ರಂತೆ ಹೆದ್ದಾರಿ ಪ್ರಾಧಿಕಾರದೋರು’ ಯಂಟಪ್ಪಣ್ಣ ಹೇಳಿತು.

‘ಅಣೈ ಆ್ಯಕ್ಟ್ ಆಫ್ ಗಾಡ್ ಅಂದ್ರೇನು?’ ವಿವರಣೆ ಕೇಳಿದೆ.

‘ಕೈ ಮೀರಿ ಆಗೋ ಅನಾಹುತಕ್ಕೆಲ್ಲಾ ಆ್ಯಕ್ಟ್ ಆಫ್ ಗಾಡ್, ದೇವರ ಆಟ, ಅಂದ್ರೆ ದೈವ ನಿಯಾಮಕ ಅಂತಾರೆ’ ತುರೇಮಣೆ ವಿಶ್ಲೇಷಿಸಿದರು.

‘ಯಾವುದೋ ಒಂದು ಮಕ. ವರ್ಕಿಂಗ್ ವೀಸಾದೋರು ಇನ್ನು ಅರವತ್ತು ದಿನ ಕಳೆದ ಮ್ಯಾಲೆ ವಾಪಾಸ್ ಊರಿಗೆ ಹೊಂಟೋಯ್ತಿರಬೇಕು’ ಅಂತ ಟ್ರಂಪಣ್ಣ ಜುಲಾಬು ಕೊಟ್ಟವ್ನೆ, ಅವನೇ ಈಗ ಹೊರ್ಮುಜ್ ಸಂಧೀಲಿ ಸಿಗೇಬಿದ್ದಿರದೂ ದೇವರ ಆಟ ಅಂತೀಯಾ?’ ಯಂಟಪ್ಪಣ್ಣ ಕೇಳಿತು.

‘ಡಿಕೆಗೆ, ಸಿದ್ದಣ್ಣನಿಗೆ ಕೈ ದೇವರುಗಳು ಮಂಗ್ಳಾರ ಬರ್ರಿ ಅಂತ ಬುಲಾವ್ ಕೊಟ್ಟವ್ರೆ. ರಾಗಾ, ಸೋಗಾ ದೇವರುಗಳು ಸೀಟು ಕತೆಗೆ ಸೋಬಾನ ಹಾಡಿ ಈವತ್ತನ್ನ ಆಟ ಮುಗಿಸ್ತಾರಾ? ಪ್ರಾರ್ಥನೆ, ಪ್ರಯತ್ನ ಫಲ ಕೊಟ್ಟಿರಬಕು’ ತುರೇಮಣೆಗೆ ಕೇಳಿದೆ.

‘ಡೀಕೆ, ನನ್ನೇನು ಕರೆದಿಲ್ಲ. ದೆಲ್ಲಿಗೆ ನಾನೋಗಕುಲ್ಲ ಅಂದದಲ್ಲಾಮ ಇದು ಯಾವ ದೇವರ ಆಟವೋ’ ತಿಪ್ಪಣ್ಣ ವಿಷಯವನ್ನು ಮತ್ತಷ್ಟು ಜಗ್ಗಿದ.

‘ಅವರ ಕತೆ ಇದ್ದುದ್ದೇ ಬುಡಿ. ಸೋಮಾರಿ ರಾಜಕಾರಣಿಗಳು, ಲಂಚಕೋರರು, ಭೂಗಳ್ಳರು ಜನಗಳನ್ನ ದೇವರು ಅಂತ ಉಬ್ಬಿಸಿ ಅವರ ಬ್ಯಾಳೆ ಬೇಯಿಸ್ಕತಾವ್ರೆ ಕಪ್ಪಾ. ಈಗ ಜನ ಕೈಗೆ ಕಿತ್ತೋಗಿರ ಕೆರ ತಗಂದು ಇವರಿಗೆಲ್ಲಾ ರುಬ್ಬಿದ್ರೆ ಅದೂ ಒಂದು ನಮೂನೆ ಆ್ಯಕ್ಟ್ ಆಫ್ ಗಾಡ್ ಅಂದ್ರೆ ದೇವರ ಆಟ ಆತದೆ’ ತುರೇಮಣೆ ಹೊಸಾ ವ್ಯಾಖ್ಯಾನ ಕೊಟ್ಟರು.

‘ಅಂದ್ರೆ ನೀನೇಳದು ಮತದಾರ ದೇವರುಗಳೇ ವ್ಯವಸ್ಥೆಯ ಕುತ್ತಿಗೆಗೆ ಕವೆಗೋಲು ಹಾಕ್ಕ್ಯಂದು ತಿರುವಕ್ಕೆ ಶುರುಹಚ್ಕಬೇಕು ಅಂತ ಅಲ್ಲವಾ?’ ನಾನು ದೇವರ ಆಟಕ್ಕೆ ಡಿಕ್ರಿ ಮಾಡಿದೆ. ಎಲ್ಲರೂ ದೇವರ ಆಟಕ್ಕೆ ಬೆರಗಾಗುವಂತೆ ಮಕ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.