ಮಹಾರಾಜರ ಒಡ್ಡೋಲಗ ನಡೆದಿತ್ತು.

ದೂತ ಬಂದು, ‘ಮಹಾರಾಜರಿಗೆ ನಮೋ ನಮಃ...’ ಎಂದು ನಮಸ್ಕರಿಸಿದ.

‘ದೂತರೆ, ಏನು ಸಂದೇಶ ತಂದಿದ್ದೀರಿ?’ ಮಹಾರಾಜರು ಕೇಳಿದರು.

‘ಪ್ರಭು, ಬಂಗಾಳ ಸಂಸ್ಥಾನ ಗೆದ್ದ ನಿಮ್ಮ ಶೌರ್ಯ, ಪರಾಕ್ರಮವನ್ನು ಪ್ರಜೆಗಳು ಹಾಡಿ ಹೊಗಳುತ್ತಿದ್ದಾರೆ. ಎಲ್ಲೆಡೆ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ’.

‘ಹೌದೆ? ಸಂತೋಷವಾಯಿತು’ ವಿಜಯದ ನಗೆ ನಕ್ಕರು.

‘ಹಸ್ತ ಸಂಸ್ಥಾನದ ಕುರ್ಚಿಗಳು ಅಲ್ಲಾಡುತ್ತಿವೆ ಎಂಬ ತಮ್ಮ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಪ್ರಭು’.

‘ಹೌದೆ?’

‘ಹೌದು ಪ್ರಭು, ಕಂಡೋರ ಕುರ್ಚಿ ವಿಷಯದಲ್ಲಿ ಕಡ್ಡಿ ಆಡಿಸಬೇಡಿ, ನಮ್ಮ ಕುರ್ಚಿ ಅಲ್ಲಾಡಿದರೆ ನಾವೇ ಮೊಳೆ ಹೊಡೆದು ಟೈಟ್ ಮಾಡಿಕೊಳ್ಳುತ್ತೇವೆ. ನಮಗೂ ಕುರ್ಚಿಭದ್ರ ಹಿತಾಸಕ್ತಿಯಿದೆ ಎಂದು ಹಸ್ತಪ್ರತಿಗಳು ಕೆರಳಿ ಕೆಂಡವಾಗಿದ್ದಾರೆ’.

‘ಅವರು ಕೆರಳಲಿ, ನರಳಲಿ ಎನ್ನುವ ಕಾರಣಕ್ಕೆ ಅಲ್ಲವೆ ತಾವು ಅಂತಹ ಹೇಳಿಕೆ ನೀಡಿರುವುದು! ಹಹ್ಹಹ್ಹಾ’.

‘ತಾವು ಹಾಗೂ ಮಹಾಮಂತ್ರಿಗಳು ಇತ್ತೀಚೆಗೆ ದಕ್ಷಿಣ ಭಾರತ ಪ್ರವಾಸ ಕೈಗೊಳ್ಳುವುದು ಹೆಚ್ಚಾಗಿದೆ. ಕೇವಲ ಯಾತ್ರೆಯೋ ಅಥವಾ ಸಾಮ್ರಾಜ್ಯ ವಿಸ್ತರಿಸುವ ದಂಡೆಯಾತ್ರೆಯೋ ಎಂದು ಗೊತ್ತಾಗದೆ ವಿರೋಧಿಗಳು ನಡುಗಿಹೋಗಿದ್ದಾರೆ ಪ್ರಭು’.

‘ಹಹ್ಹಹ್ಹಾ...’ ಪ್ರಭುಗಳು ಮತ್ತೊಮ್ಮೆ ನಕ್ಕರು.

‘ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳನ್ನು ಸದೆಬಡಿದು ಏಕ ಭಾರತ, ಏಕ ಪಕ್ಷ ಆಡಳಿತದ ಹುನ್ನಾರ ನಡೆಸಿದ್ದೀರಂತೆ...’

‘ಒಂದು ದೇಶ, ಒಂದು ಆಡಳಿತ, ಒಂದು ಧರ್ಮ, ಒಂದು ಭಾಷೆ ಇದ್ದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ದೂತರೇ...’

‘ಏಕಚಕ್ರಾಧಿಪತಿ ಆಡಳಿತವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲವೆ? ಹೀಗಾದರೆ ಪ್ರಜಾಪ್ರಭುತ್ವ ಹೋಗಿ ರಾಜಪ್ರಭುತ್ವದ ಮರುಸ್ಥಾಪನೆ ಆಗೋದಿಲ್ವೆ ಪ್ರಭು? ಹಾಗಂತ ನಾನು ಹೇಳುತ್ತಿಲ್ಲ, ನಮಗೆ ಆಗದವರು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ...’

ಪ್ರಭುಗಳು ಸಿಟ್ಟಾದರು. ‘ಅಧಿಕಪ್ರಸಂಗಿ, ತೊಲಗು ಇಲ್ಲಿಂದ...’ ಎಂದು ರೇಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.