ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍‍ಪತ್ರಿಕೆ ಓದಿ ಪ್ರವಾಸ ಮಾಡಿ

Last Updated 31 ಜನವರಿ 2020, 20:00 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ ಟ್ರೋಫಿ ಸಿಕ್ಕಿದಾಗ ಏನನಿಸಿತು?

ನಮಗೆ ಆ ಖುಷಿಯನ್ನು ವಿವರಿಸಲು ಸಾಧ್ಯವಿಲ್ಲ. ಸಾವಿವಾರು ವಿದ್ಯಾರ್ಥಿಗಳ ಬಿರುಸಿನ ಪೈಪೋಟಿಯ ಬಳಿಕ ಗೆದ್ದುಬಂದ ಬಲಿಷ್ಠ 11 ತಂಡಗಳ ಸವಾಲು ಎದುರಿಸಿ ಗೆದ್ದುದರಿಂದ ಆಗಿರುವ ಖುಷಿಗೆ ಮಿತಿ ಇಲ್ಲ. ಕೊನೆಯ ಸುತ್ತಿನಲ್ಲಿ ಉಡುಪಿ ತಂಡದೊಂದಿಗೆ ಅಂಕ ಟೈ ಆದಾಗ ಒಂದಿಷ್ಟು ನರ್ವಸ್‌ ಆಗಿದ್ದೂ ಸುಳ್ಳಲ್ಲ.

ಇದೇ ಮೊದಲ ಪ್ರಯತ್ನವೇ, ಹಿಂದೆಯೂ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಿರಾ?

‘ಕಿಸಾ ಕ್ವಿಜ್‌’, ‘ದಿ ಹಿಂದೂ ಕ್ವಿಜ್‌’ ಸಹಿತ ಹಲವು ಕ್ವಿಜ್‌ಗಳಲ್ಲಿ ಪಾಲ್ಗೊಂಡಿದ್ದೇವೆ. ಹಲವು ಕಡೆ ಪ್ರಶಸ್ತಿಗಳು ಲಭಿಸಿವೆ. ಆದರೆ ‘ಪ್ರಜಾವಾಣಿ ಕ್ವಿಜ್‌’ ಮರೆಯುವುದು ಸಾಧ್ಯವಿಲ್ಲ. ಇಲ್ಲಿನ ಪ್ರಶ್ನೆಗಳ ಗುಣಮಟ್ಟ ಅತ್ಯುತ್ತಮವಾಗಿತ್ತು.

ಶಾಲೆಯಲ್ಲಿ ಹೇಗಿದೆ ಪ್ರೋತ್ಸಾಹ?

ನಾವು ಓದುತ್ತಿರುವ ಕ್ರೈಸ್ಟ್‌ ಅಕಾಡೆಮಿ ಐಸಿಎಸ್‌ಇ ಶಾಲೆ ಇರುವುದು ಬೆಂಗಳೂರಿನಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಬೀಗೂರುಕೊಪ್ಪದಲ್ಲಿ. ಜ್ಞಾನ ವೃದ್ಧಿಗೆ ಅಲ್ಲಿ ಸದಾ ಉತ್ತೇಜನ ಇದ್ದೇ ಇದೆ. ನಮ್ಮಲ್ಲಿ ಕಲಿಯುವ ಹಂಬಲಪ್ರಬಲವಾಗಿದ್ದರೆ ಕ್ವಿಜ್‌ನಂತಹ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವುದು ಕಷ್ಟವಲ್ಲ.

ಕ್ವಿಜ್‌ಗೆ ಯಾವ ರೀತಿ ತಯಾರಿ ಮಾಡಿಕೊಂಡಿರಿ?

ವಿಶೇಷ ತಯಾರಿ ಏನೂ ಇರಲಿಲ್ಲ, ನಿಜವಾಗಿಯೂ ಹೇಳಬೇಕೆಂದರೆ ನಾವು ಹೆಸರು ನೋಂದಣಿ ಮಾಡಿಸಿದ್ದೇ ಒಂದು ದಿನ ಮೊದಲು. ವಾರದ ಹಿಂದೆ ಕ್ವಿಜ್‌ ಬಗ್ಗೆ ಸ್ನೇಹಿತರೊಬ್ಬರಿಂದ ಗೊತ್ತಾಯಿತು. ಕನ್ನಡ ಪತ್ರಿಕೆಯು ಕ್ವಿಜ್‌ ಹಮ್ಮಿಕೊಂಡಿದ್ದರಿಂದ ಕನ್ನಡದ ಸಾಹಿತ್ಯ, ಕಲೆ, ಸಂಸ್ಕೃತಿ ಕುರಿತು ಒಂದಿಷ್ಟು ಅಧ್ಯಯನ ನಡೆಸಿದೆವು. ಕೇವಲ ಕ್ವಿಜ್‌ಗೆಂದುಅಲ್ಲ, ಈ ನೆಲದಲ್ಲಿ ಹುಟ್ಟಿದ ಬಳಿಕ ನಮಗೆ ಇವೆಲ್ಲವೂ ತಿಳಿದಿರಬೇಕು ಅಲ್ಲವೇ?

ಮುಂದೆ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವವರಿಗೆ ಏನು ಸಲಹೆ ನೀಡುತ್ತೀರಿ?

ಪತ್ರಿಕೆಗಳನ್ನು ಓದಿ, ಪ್ರವಾಸ ಮಾಡಿ. ಇದರಿಂದ ಸಿಗುವ ಅನುಭವವನ್ನು ವಿವರಿಸಲು ಸಾಧ್ಯವಿಲ್ಲ. ಲೋಕವನ್ನು ತೆರೆದ ಕಣ್ಣಿನಿಂದ ನೋಡುವ ಮತ್ತು ಗ್ರಹಿಸುವ ಗುಣ ಬೆಳೆದಾಗ ಜೀವನಕ್ಕೆ ಅದು ಬಹುದೊಡ್ಡ ಪಾಠವಾಗಿ
ಬಿಡುತ್ತದೆ, ಜ್ಞಾನ ಸಂಪಾದನೆಯೂ ಆಗುತ್ತದೆ.

-ಎಂ.ಜಿ.ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT