ರಕ್ತಾಕ್ಷಿ ಮಾಂತ್ರಿಕರು! ಇಲ್ಲಿ ಶತ್ರು ನಾಶ, ವಶೀಕರಣ, ದಾಂಪತ್ಯ ಕಲಹ, ಮಾಟ–ಮಂತ್ರ... ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಲಾಗುವುದು... ಎನ್ನುವ ಬೋರ್ಡ್ ನೋಡಿದ ದುಬ್ಬೀರ, ಮಾಂತ್ರಿಕನ ಕಚೇರಿ ಒಳಹೊಕ್ಕ.

ದುಬ್ಬೀರನನ್ನು ನೋಡುತ್ತಲೇ ಮಾಂತ್ರಿಕರು ಹೇಳಿದರು, ‘ನಿಮ್ಮಲ್ಲೇನೋ ಸಮಸ್ಯೆ ಇದೆ..!’

‘ಅದ್ಕೇ ಸ್ವಾಮಿ ಬಂದಿರೋದು, ಸಮಸ್ಯೆ ಇರೋದು ನಂಗಲ್ಲ, ನಮ್ ಟಗರಿಗೆ...’ ಎಂದ ದುಬ್ಬೀರ.

‘ಏನು? ಟಗರಿಗಾ? ಏನ್ ಹೇಳ್ತಿದೀರಿ ನೀವು?’

‘ಹೌದು ಸ್ವಾಮಿ, ನಮ್ ಟಗರು ಯಾಕೋ ಮೊದ್ಲು ಇದ್ದಂಗಿಲ್ಲ... ಗುದ್ದಲ್ಲ, ಗುಮ್ಮಲ್ಲ. ಯಾಕೋ ಮಂಕಾಗಿ ಬುಟ್ಟದೆ, ಯಾರೋ ಮಾಟ ಮಾಡ್ಸಿರಬೇಕು ಅನ್ಸುತ್ತೆ...’

‘ಹೌದಾ? ಮೊದ್ಲು ನಿಮ್ ಟಗರು ಹೆಂಗಿತ್ತು?’

‘ಬಲೇ ಜೋರಿತ್ತು ಸ್ವಾಮಿ. ಗೌಡ್ರ ಹಟ್ಟೀನೆ ಒದ್ಕಂಡ್ ಬಂದಿತ್ತು. ಎದುರಾಳಿ ಯಾರೇ ಇರ್ಲಿ, ಎಗರಿ ಎಗರಿ ಡಿಚ್ಚಿ ಹೊಡೀತಿತ್ತು. ಸಿಟ್ಟು ಬಂದ್ರೆ ‘ಏಯ್, ಹೊಡೀರಿ ಕಪಾಳಕ್ಕೆ’ ಅಂತಿತ್ತು... ಈಗ ಏನೂ ಮಾತಾಡ್ತಿಲ್ಲ, ಸೈಲೆಂಟಾಗಿಬುಟ್ಟದೆ...’ ದುಬ್ಬೀರ ಎಲ್ಲ ಬಿಡಿಸಿ ಹೇಳಿದ.

ಮಾಂತ್ರಿಕರು ಕವಡೆ ಹಾಕಿದರು, ಏನೂ ಗೊತ್ತಾಗಲಿಲ್ಲ. ಅಂಜನ ಹಾಕಿ ನೋಡಿದರು, ಏನೂ ಕಾಣಲಿಲ್ಲ. ‘ಫಟ್ ಸ್ವಾಹ’ ಎಂದರು, ಯಾವುದೂ ಪಿಟಿಕ್ಕನ್ನಲಿಲ್ಲ. ಮಾಂತ್ರಿಕರು ಕಣ್ಣು ಮುಚ್ಚಿ ಆಕಾಶ ನೋಡಿ ಹೇಳಿದರು: ‘ನಿಮ್ಮ ಟಗರಿಗೆ ಯಾರೋ ದಿಗ್ಬಂಧನ ಹಾಕ್ಸಿದಾರೆ, ಯಾವುದೋ ‘ಮೇಲಿನ’ ಶಕ್ತಿ ಅವರನ್ನ ನಿಯಂತ್ರಿಸ್ತಾ ಇದೆ...’

‘ಹೌದಾ ಸ್ವಾಮಿ, ಮತ್ತೆ ಅದಕ್ಕೆ ಪರಿಹಾರ ಏನು?’

ಮಾಂತ್ರಿಕರು ಗಾಳಿಯಲ್ಲಿ ಕೈಯಾಡಿಸಿ ‘ಫಟ್’ ಅಂತ ಎರಡು ನಿಂಬೆಹಣ್ಣು ಸೃಷ್ಟಿಸಿದರು. ದುಬ್ಬೀರನಿಗೆ ಆಶ್ಚರ್ಯ!

‘ಈ ನಿಂಬೆಹಣ್ಣನ್ನ ನಿಮ್ಮ ಟಗರಿಗೆ ಕೊಡಿ, ನಿಂಬೆಹಣ್ಣು ಅಂದ್ರೆ ಅದಕ್ಕೆ ಇಷ್ಟಾನಾ?’ ಮಾಂತ್ರಿಕರು ಕೇಳಿದರು.

‘ಬಾಳ ಇಷ್ಟ ಸ್ವಾಮಿ, ನಾಟಿ ಕೋಳಿ ಸಾರು ಮಾಡಿದಾಗೆಲ್ಲ ನಿಂಬೆಹಣ್ಣನ್ನ ಅದ್ಕೆ ಹಿಂಡಿಕೊಳ್ಳುತ್ತಲೇ ಇರುತ್ತೆ...’ ಎಂದ ದುಬ್ಬೀರ. ಮಾಂತ್ರಿಕನಿಗೆ ಅರ್ಥವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.