2026ರ ವಿಕ್ರಮ ಸಂವತ್ಸರದಲ್ಲಿ ದೇಶದ ಜನಸಾಮಾನ್ಯರಿಗೆ ಬೇವು ಹೆಚ್ಚು. ಪಂಚಾಂಗದ ಪ್ರಕಾರ ಗುರುವು ಅರಸನಾಗಿದ್ದು, ಮಂಗಳನು ಮಂತ್ರಿಯಾಗಿರಲಿದ್ದಾನೆ. ಚುನಾವಣೆ ದಿಸೆಯಿಂದ ಪ್ರಧಾನಿಗೆ, ಸಿಎಂಗಳಿಗೆ ಅಗ್ನಿಪರೀಕ್ಷೆ.

ಕೊಲ್ಲಿ ಕಾಳಗದಿಂದ ಎಲ್ಲೆಡೆ ವಾರ್ಮೋಡಗಳು ಕವಿದು ಕೊಲ್ಲಾಟ ಹೆಚ್ಚಲಿದೆ. ಜಗತ್ತಿನ ಆರ್ಥಿಕ ಸ್ಥಿತಿಗೆ ಟ್ರಂಪೇಚರ್ ಬಾಧೆ. ಬಾಂಬುವಂತರ ಕಾಳಗಕ್ಕೆ ಕೊರಿಯಾದ ಕಿಮ್ಮಣ್ಣನ ಪ್ರವೇಶದ ಕ್ಲೈಮ್ಯಾಕ್ಸ್. ಜನತೆಗೆ ಗ್ಯಾಸ್ಫೋಟನ ಕಾಯಿಲೆ ಕಾಡಲಿದೆ. ಹೋಟೆಲು ನಂಬಿದವರಿಗೆ ತತ್ವಾರವು. ಇರಾನು ದೇವತೆಯ ಅಭಯದಿಂದ ಭಾರತೀಯ ನೌಕೆಗಳ ಬಿಡುಗಡೆ. ಮನೆ ಮನೆಯಲ್ಲೂ ಸೌದೆ ಒಲೆಯಿಂದ ಕಣ್ಣುರಿ, ಹಿಡಿ ಶಾಪ. ಕಣ್ಣೀರಮಳೆ ಸಂಭವವು. ಶನಿ ನೀಚ ರಾಶಿಯಲ್ಲಿರುವುದರಿಂದ ಬಡಜನತೆಗೆ ದುರ್ಭಿಕ್ಷದ ಭಯ ಮತ್ತು ಸಂಕಟ.

ಊರು ಹೊತ್ತಿ ಉರಿಯುತ್ತಿದ್ದರೂ ರಾಜಕಾರಣಿಗಳು ಹೌತಣಕೂಟ ಮತ್ತು ರೆಸಾರ್ಟ್ ಸಂಭ್ರಮದಲ್ಲಿ ಮುಳುಗೇಳುವರು. ಚುನಾವಣೆ ಘೋಷಣೆಯಿಂದ ಹಿರಿ, ಕಿರಿ, ಮರಿ, ನರಿ ರಾಜಕಾರಣಿಗಳಿಗೆ ಸಂತಸವು. ಪಕ್ಷದ ಟಿಕೇಟಿಗೆ ತಲ್ಲಣ. ಕುಟುಂಬ ರಾಜಕಾರಣ ಮತ್ತು ಕುದುರೆ ವ್ಯಾಪಾರದಿಂದ ಮಾನಹಾನಿ. ಮಂತ್ರಿ ಸ್ಥಾನಕ್ಕೆ ರೊಟೇಶನ್ ಪದ್ಧತಿ ಬೇಡಿಕೆ. ಮುದಿ ರಾಜಕಾರಣಿಗಳು ವಾನಪ್ರಸ್ಥದ ನಿರ್ಧಾರದಿಂದ ಹಿಂದೆ ಸರಿಯುವರು.

ಕುರ್ಚಿ ಕದನಕ್ಕೆ ಕ್ಲೈಮ್ಯಾಕ್ಸ್ ಸಂಭವ. ಸಂಸದರು ಮತ್ತು ಶಾಸಕರು ತಮ್ಮ ಕರ್ತವ್ಯವನ್ನೇ ಮರೆತು ಬೈದಾಟದಲ್ಲೇ ಇರುವುದರಿಂದ ಇವರಿಗೆಲ್ಲಾ ಉಚಿತ ಬೈಯ್ಯೋಗ್ಯಾಸ್ ಕೊಡಲು ರಾಜ್ಯ ಸರ್ಕಾರ ಚಿಂತಿಸಲಿದೆ. ಬಾಯಿದ್ದವರಿಗೆ ಬೆಲ್ಲ ಎನ್ನುವುದು ಸತ್ಯವಾಗಲಿದೆ.

ಅಧಿಕಾರಿ ವರ್ಗವು ಸಿಗ್ಗಿಲ್ಲದೇ ಕಾಸು ಮಾಡಲು ಮುಂದಾಗಿ ಲೋಕಾಯುಕ್ತರ ಬಲೆಗೆ ಬೀಳಲಿರುವುದರಿಂದ ಲೋಕಾಯುಕ್ತರಿಗೆ ಬಿಡುವಿಲ್ಲದ ಬೇಟೆ. ಐಪಿಎಲ್ ಕದನಕ್ಕೆ ಕ್ಷಣಗಣನೆ ಆರಂಭವು. ಆರ್ಸಿಬಿ ಖರೀದಿಗೆ ವಿದೇಶಿ ಬಂಡವಾಳ ಸಾಧ್ಯತೆ. ಆದರೂ, ಅಭಿಮಾನಿಗಳಿಂದ ಈ ಬಾರಿಯೂ ಕಪ್ ನಮ್ದೇ ಎಂಬ ರೋಷವಾಕ್ಯ.

ಸರ್ವ ಜೆನ್–ಝೀಗಳಿಗೂ, ಶ್ರಮಜೀವಿಗಳಿಗೂ, ಉಂಡಾಡಿಗರಿಗೂ ಯಶಸ್ಸು ಪ್ರಾಪ್ತಿರಸ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.