ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟನ ಎತ್ಗಂಡು ಬಂದು...!

Last Updated 23 ಜೂನ್ 2019, 20:05 IST
ಅಕ್ಷರ ಗಾತ್ರ

ಗೌಡರ ಗುಡುಗುಗಳು,ಸಿದ್ದು ಗುದ್ದುಗಳು, ತೆನೆ ಕೈಬಿಟ್ಟರೆ ಉ.ಮು.ಮಂ. ಕುರ್ಚಿಗೂ ಸಂಚಕಾರ... ಹೀಗೆ ಹತ್ತಾರು ಕುದಿಸಂಕಟದಲ್ಲಿ ಮಲಗಿದ್ದರು ಪಾಪದ ಪರಮೇಶಣ್ಣ. ಯಾರೋ ಕರೆದಂತೆ ಅನ್ನಿಸಿ ಕಿಟಕಿಯತ್ತ ನೋಡಿದರೆ, ಮಾಸಿದ ಸೀರೆಯ ಬಡಕಲು ಹೆಂಗಸು ಕಂಡಳು. ‘ಜನತಾ ದರ್ಶನ ಯಾದಗಿರಿಯಲ್ಲಿ... ಇಲ್ಲಲ್ಲ...’ ಬೆಂಗಾವಲಿನವರು ಹಚಾ ಎಂದಟ್ಟಲು ನೋಡಿದರು. ಬಡಪೆಟ್ಟಿಗೆ ಹೆಂಗಸು ಕದಲಲಿಲ್ಲ. ಪರಮೇಶಣ್ಣನೇ ಎದ್ದು ಬಂದು ವಿಚಾರಿಸಿದರು.

‘ನಾನಣ್ಣೋ... ಶರಾವತಿ’ ಎನ್ನುತ್ತ, ತನ್ನ ಸಹಜ ಹರಿವಿಗೆ ತಡೆಯೊಡ್ಡಿಬೆಂದಕಾಳೂರಿನತ್ತ ತಿರುಗಿಸಿದರೆ ಏನೆಲ್ಲ ಅನಾಹುತಗಳಾಗಲಿವೆ,ಇಡೀ ಯೋಜನೆಯೇ ಎಷ್ಟು ಅವೈಜ್ಞಾನಿಕ ಎಂದೆಲ್ಲ ಹೆಂಗಸು ಗೊಳೋ ಎಂದು ಅತ್ತಳು. ನೋಡೋಣ ಎಂದವಳನ್ನು ಸಾಗಹಾಕಿದ ಪರಮೇಶಣ್ಣ ಮುಖ್ಯ ನೀರಾವರಿ ಎಂಜಿನಿಯರ್‌ಗೆ ಫೋನಾಯಿಸಿದರು.

‘ಎತ್ತಿನಹೊಳೇನಇತ್ತಕಡೆತಿರುಗಿಸಿದಂಗೆ
ಈ ಶರಾವತಿನೂ ಎಳ್ಕಂಡು ಬರಣ ಅಂದ್ರೆ ಇದೇನ್ರೀ ವಳ್ಳೆ ಗೋಳಾಟ... ಆ ಪಶ್ಚಿಮಘಟ್ಟನೇ ಕಿತ್ಕಂಡು ಬಂದು ಬೆಂಗಳೂರಿನಾಗೆ ಮಡಗಿದರೆ ಹೆಂಗೆ...? ಸಮುದ್ರ ಸೇರಿ ಸುಮ್ಮನೆ ವೇಸ್ಟ್ ಆಗೋಎಲ್ಲಾನದೀನೀರೂ ನಮಗೇ ಸಿಗತೈತೆ...’

‘ಸಮುದ್ರಕ್ಕೆ ನೀರೇ ಸೇರದಿದ್ರೆ ಮಳೆ ಹೇಗೆ ಬರುತ್ತೆ ಸಾರ್’ ಎಂಜಿನಿಯರ್‌ ತಡಬಡಾಯಿಸಿದರು.

‘ಬೆಂಗಳೂರಿನಾಗೆ ಚರಂಡಿ ಸೇರ ಮಳೆ ನೀರು,ಬಚ್ಚಲನೀರನ್ನದೊಡ್ಡ ಪೈಪಿನಾಗೆತಗಂಡುಹೋಗಿಸಮುದ್ರಕ್ಕೆ ಬಿಟ್ಟರೆ ಆಯಿತಲ್ಲ... ಅತ್ತಾಗೆ ಸಮುದ್ರಕ್ಕೂ ನೀರು,ಇತ್ತಾಗೆ ನಮಗೂ ನೀರು. ಮಳೆಬೇಕಂದ್ರೆಮೋಡ ಬಿತ್ತನೆ ಮಾಡಾಕಿಲ್ಲವಾ. ಈಗಮುಚ್ಕಂಡುಮೂರು ಡಿಪಿಆರ್ ಮಾಡುಸ್ರಿ. ಪಶ್ಚಿಮಘಟ್ಟನ ಎತ್ಕಂಡು ಬಂದು ಇಲ್ಲಿ ಮಡಗದು ಒಂದು ಡಿಪಿಆರ್. ಎಲ್ಲ ಹಳ್ಳಿಗೂ ನದೀಮೂಲದ ನೀರು ಕೊಡಲು ಘಟ್ಟದಾಗೆ ತೂತು ಕೊರೆದು 20 ಸಾವಿರ ಹೊಸ ನದಿ ಹುಟ್ಟುಹಾಕಕೆ ಇನ್ನೊಂದು ಡಿಪಿಆರ್. ಇಲ್ಲಿಯ ಮಳೆನೀರು, ಚರಂಡಿ ನೀರನ್ನ ಅರಬ್ಬಿ ಸಮುದ್ರಕ್ಕೆ ಬಿಸಾಕಾಕೆಮೂರನೇ ಡಿಪಿಆರ್‌...ವಾರದಲ್ಲಿ ಮುಗಿಸಿಬಿಡ್ರಿ’ ಪರಮೇಶಣ್ಣ ಗುಡುಗಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT