ಪ್ರಜಾವಾಣಿ ಚರ್ಚೆ | ವೇತನ ಹೆಚ್ಚಳದಿಂದ ಪುನಶ್ಚೇತನ: ಮಂಜುನಾಥ ಬಿ.ಆರ್.
ಮಂಜುನಾಥ ಬಿ.ಆರ್.
Published : 29 ಮೇ 2026, 23:30 IST
Last Updated : 29 ಮೇ 2026, 23:30 IST
ADVERTISEMENT
ಫಾಲೋ ಮಾಡಿ
Comments
ಆರೂ ಮುಕ್ಕಾಲು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಅಂದಾಜು ಒಂದೂಮುಕ್ಕಾಲು ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಹೊಸದಾಗಿ ರೂಪಿಸಿರುವ ಕಾರ್ಮಿಕ ಕನಿಷ್ಠ ವೇತನದ ಮಾದರಿಯ ಪ್ರಕಾರ ಕಾರ್ಮಿಕರ ಆದಾಯ ಹೆಚ್ಚಿದರೆ ಒಟ್ಟು ₹43,000 ಕೋಟಿ ಕರ್ನಾಟಕದ ಬಡವರ ಜೇಬನ್ನು ಸೇರುತ್ತದೆ. ಕರ್ನಾಟಕವು ಗ್ಯಾರಂಟಿ ಯೋಜನೆಗಳ ಮೂಲಕ ಖರ್ಚು ಮಾಡುತ್ತಿರುವ ಹಣ ₹53,000 ಕೋಟಿ ಅಷ್ಟೇ. ಹೀಗಿರುವಾಗ ಸರ್ಕಾರ ಇಂತಹ ನ್ಯಾಯಯುತ ಆದಾಯವನ್ನು ಕಲ್ಪಿಸುವ ಮೂಲಕ ರಾಜ್ಯದ ಆರ್ಥಿಕತೆಗೆ ಪುನಶ್ಚೇತನ ಒದಗಿಸಬಹುದು.