ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಕಿತ್ತುಕೊಂಡು ಅಹಮದಾಬಾದ್ಗೆ ನೀಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಮವು, ಆಟದ ಹಿತಾಸಕ್ತಿಯ ಮೇಲೆ ರಾಜಕೀಯ ಹಾಗೂ ವಾಣಿಜ್ಯಾತ್ಮಕ ಲೆಕ್ಕಾಚಾರಗಳು ಮೇಲುಗೈ ಸಾಧಿಸಿರುವುದರ ಸಂಕೇತ. ಇದು, ರಾಜ್ಯದ ಕ್ರೀಡಾಭಿಮಾನಿಗಳಿಗೆ ನಿರಾಶೆ ತರುವ ಹಾಗೂ ಕ್ರಿಕೆಟ್ ಬೆಳವಣಿಗೆಗೆ ಹಿನ್ನಡೆ ಉಂಟುಮಾಡುವ ಬೆಳವಣಿಗೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಮುಖ ಪಂದ್ಯ ಕೈತಪ್ಪಿರುವುದರಿಂದ ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ’ (ಕೆಎಸ್ಸಿಎ) ಆರ್ಥಿಕ ನಷ್ಟವನ್ನೂ ಅನುಭವಿಸಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರಾಗಿರುವ ಜಯ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ತವರಿನ ಮೇಲೆ ಬಿಸಿಸಿಐಗೆ ವಿಶೇಷ ಪ್ರೀತಿ ಇರುವುದು ಗುಟ್ಟೇನಲ್ಲ. ಕಳೆದ ಐದು ವರ್ಷಗಳಲ್ಲಿ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಗಳ ಐದು ಫೈನಲ್ ಪಂದ್ಯಗಳ ಆತಿಥ್ಯ ಅಹಮದಾಬಾದ್ಗೆ ದೊರೆತಿದೆ. ಅದರಲ್ಲಿ 2022, 2023 ಹಾಗೂ 2025ರ ಐಪಿಎಲ್ ಫೈನಲ್ಗಳು ಸೇರಿವೆ. 2023ರ ಐಸಿಸಿ ಏಕದಿನ ಮತ್ತು 2026ರ ಐಸಿಸಿ ಟಿ20 ಟೂರ್ನಿಯ ಫೈನಲ್ ಪಂದ್ಯಗಳೂ ಅಲ್ಲಿ ನಡೆದಿವೆ. ಇದೀಗ ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿ ಸುತ್ತಿನ ಹಣಾಹಣಿ ನಡೆಯಲಿದೆ. 2021ರಲ್ಲಿ ಮೊಟೇರಾದಲ್ಲಿ ನವೀಕೃತ ಕ್ರೀಡಾಂಗಣ ಉದ್ಘಾಟನೆಯಾದ ನಂತರ ಪ್ರಮುಖ ಪಂದ್ಯಗಳನ್ನು ಅಲ್ಲಿ ಆಯೋಜಿಸುವ ಪರಿಪಾಠ ಆರಂಭ ವಾಗಿದೆ. ಇದರಿಂದ, ಭಾರತದ ಕ್ರಿಕೆಟ್ನ ‘ಪಂಚಪೀಠ’ಗಳೆಂದು ಪ್ರಸಿದ್ಧವಾಗಿರುವ ಕೋಲ್ಕತ್ತ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ನಗರಗಳ ಕ್ರೀಡಾಂಗಣಗಳು ದೊಡ್ಡಮಟ್ಟದ ಪಂದ್ಯಗಳ ಆಯೋಜನೆಯಿಂದ ವಂಚಿತವಾಗುತ್ತಿವೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಪ್ರತಿವರ್ಷವೂ ಬೇರೆ ಬೇರೆ ತಾಣಗಳಲ್ಲಿ ಫೈನಲ್ ಹಾಗೂ ಪ್ಲೇ ಆಫ್ ಪಂದ್ಯಗಳ ಆಯೋಜನೆ ನಡೆಸಲಾಗುತ್ತಿತ್ತು. ಆಯಾ ವರ್ಷದ ಚಾಂಪಿ ಯನ್ ತಂಡದ ತವರಿಗೆ ಉದ್ಘಾಟನೆ ಮತ್ತು ಫೈನಲ್ ಪಂದ್ಯಗಳನ್ನು ನಡೆಸುವ ಅವಕಾಶ ಸಾಮಾನ್ಯವಾಗಿ ದೊರೆಯು ತ್ತಿತ್ತು. ಕಳೆದ ಆವೃತ್ತಿಯಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ಗೆಲುವು ಸಾಧಿಸಿದ್ದರಿಂದಾಗಿ, ಬೆಂಗಳೂರಿಗೆ ಈ ಬಾರಿಯ ಫೈನಲ್ ನಡೆಸುವ ಅವಕಾಶ ಸಿಗಲಿದೆ ಎಂದು ಟೂರ್ನಿಯ ಆರಂಭಕ್ಕೂ ಮೊದಲು ಕೆಎಸ್ಸಿಎ ಪದಾಧಿಕಾರಿಗಳು ಹೇಳಿದ್ದರು. ಪ್ಲೇ ಆಫ್ ಹಂತದ ಪಂದ್ಯಗಳ ಆತಿಥ್ಯವೂ ಬೆಂಗಳೂರಿಗೆ ಸಿಗುವ ಸಾಧ್ಯತೆ ಇತ್ತು. ಆದರೆ, ಇದ್ದಕ್ಕಿದ್ದಂತೆ ಪ್ಲೇ ಆಫ್ ಪಂದ್ಯಗಳ ಅವಕಾಶವನ್ನು ಧರ್ಮಶಾಲಾ ಹಾಗೂ ಮುಲ್ಲನಪುರಗಳಿಗೆ ನೀಡಲಾಗಿದೆ.

ಬೆಂಗಳೂರಿನಿಂದ ಫೈನಲ್ ಸ್ಥಳಾಂತರಕ್ಕೆ ಬಿಸಿಸಿಐ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ಶಾಸಕರು ಮತ್ತು ಸಂಸದರಿಗೆ ಉಚಿತ ಪಾಸ್ಗಳನ್ನು ನೀಡುವುದು ನಷ್ಟದ ಬಾಬ್ತು ಎನ್ನುವ ನಿಲುವಿಗೆ ಮಂಡಳಿ ಬಂದಿರುವುದು ಪಂದ್ಯದ ಸ್ಥಳಾಂತರಕ್ಕೆ ಕಾರಣಗಳಲ್ಲೊಂದು ಎನ್ನಲಾಗುತ್ತಿದೆ. ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವಿಗೀಡಾಗಿದ್ದರು. ಆ ದುರಂತವೂ ಪ್ರಮುಖ ಪಂದ್ಯದಿಂದ ಚಿನ್ನಸ್ವಾಮಿ ಕ್ರೀಡಾಂಗಣ ವಂಚಿತವಾಗಲು ಕಾರಣವಾಗಿರಬಹುದು. ಆದರೆ, ಕೆಎಸ್ಸಿಎ ಪದಾಧಿಕಾರಿಗಳು ಈ ಕಾರಣಗಳನ್ನು ಒಪ್ಪುವುದಿಲ್ಲ. ಐಪಿಎಲ್, ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ತಾವು ಸನ್ನದ್ಧರಾಗಿರುವುದಾಗಿ ಹೇಳುತ್ತಾರೆ. ಬಿಸಿಸಿಐ ಮಾರ್ಗಸೂಚಿಗೆ ಅನುಗುಣವಾಗಿ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ ಎಂದೂ ಕೆಎಸ್ಸಿಎ ಹೇಳುತ್ತಿದೆ. ಕಾರಣ ಏನೇ ಇದ್ದರೂ, ಪ್ರಮುಖ ಪಂದ್ಯಗಳು ಬೆಂಗಳೂರಿಗೆ ತಪ್ಪದಂತೆ ಬಿಸಿಸಿಐ ಮನವೊಲಿಸುವಲ್ಲಿ ‘ಕೆಎಸ್ಸಿಎ’ ವಿಫಲವಾಗಿರುವುದು ಸ್ಪಷ್ಟ. ಆರ್ಸಿಬಿ ಗೆಲುವಿನ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಘಟನೆಯು ರಾಜ್ಯದ ಕ್ರಿಕೆಟ್ಗೆ ಕಂಟಕವಾಗಿ ಪರಿಣಮಿಸಿತ್ತು. ಆ ದುರಂತದ ನೆನಪು ಮಾಸುವ ಮುನ್ನವೇ, ಇತ್ತೀಚೆಗೆ ಐಪಿಎಲ್ ಪಂದ್ಯ ನಡೆದ ದಿನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 200ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿದ್ದವು. ಆ ಪ್ರಕರಣವೂ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿಸಿರಬಹುದು. ಉಚಿತ ಟಿಕೆಟ್ಗಳಿಗೆ ಪಟ್ಟು ಹಿಡಿದ ಶಾಸಕರ ವರ್ತನೆಯೂ ಬೆಂಗಳೂರಿನ ಕ್ರೀಡಾವರ್ಚಸ್ಸಿಗೆ ತಕ್ಕುದಾಗಿರಲಿಲ್ಲ. ಐಪಿಎಲ್ ಫೈನಲ್ ಪಂದ್ಯ ಕೈತಪ್ಪಿರುವುದರ ಬಗ್ಗೆ ಬಿಸಿಸಿಐ ಮುಂದೆ ಬೇಸರ ವ್ಯಕ್ತಪಡಿಸಿರುವುದಾಗಿ ಕೆಎಸ್ಸಿಎ ಹೇಳಿದೆ. ಅದರಿಂದ ಉಪಯೋಗವಿಲ್ಲ. ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ತನಗಾಗಿರುವ ನಷ್ಟಕ್ಕೆ ರಾಜ್ಯ ಸಂಸ್ಥೆಯು ಬಿಸಿಸಿಐ ಎದುರು ಗಟ್ಟಿಧ್ವನಿಯಿಂದ ಪ್ರತಿಭಟಿಸಬೇಕು. ಅನ್ಯಾಯ ಮರುಕಳಿಸದಂತೆ ಎಚ್ಚರ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.