ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುಮಲ್ಲೇಶ್ವರಕ್ಕೆ ಪ್ರವಾಸಿಗರ ಲಗ್ಗೆ

Last Updated 18 ಜೂನ್ 2018, 10:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಾಡಿನ ಸುಂದರ ಪ್ರವಾಸಿ ತಾಣಗಳಲ್ಲೊಂದಾದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಭಾನುವಾರ ಹೆಚ್ಚಿನ ಪ್ರವಾಸಿಗರು ಬಂದಿದ್ದರು.

ಸ್ಥಳೀಯರು ಸೇರಿ ಅಕ್ಕಪಕ್ಕದ ಜಿಲ್ಲೆಯವರು ರಜಾ ದಿನಗಳಲ್ಲಿ ಇಲ್ಲಿಗೆ ಬಂದು ಹೋಗುವುದು ಸಾಮಾನ್ಯ. ಹಿರಿಯರು– ಕಿರಿಯರು ಎನ್ನದೇ ಕುಟುಂಬದವರೆಲ್ಲ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದರು. ಅಲ್ಲದೆ, ಇಲ್ಲಿರುವ ವಿವಿಧ ರೀತಿಯ ಪ್ರಾಣಿ, ಪಕ್ಷಿಗಳನ್ನು ನೋಡಿ ಆನಂದಿಸಿದರು.

ಬೆಳಿಗ್ಗೆಯಿಂದಲೇ ಜನಸಂದಣಿ ಹೆಚ್ಚಿದ್ದ ಕಾರಣ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಟಿಕೆಟ್ ಕೌಂಟರ್ ಬಳಿ ಹೆಚ್ಚು ಮಂದಿ ಇದ್ದ ಕಾರಣ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು.

‘ಬೆಳಿಗ್ಗೆಯಿಂದ ಸಂಜೆವರೆಗೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ಭಾನುವಾರ ಇಷ್ಟು ಸಂಖ್ಯೆಯಲ್ಲಿ ಜನ ಸೇರುವುದಿಲ್ಲ. ಆದರೆ, ರಂಜಾನ್‌ ಹಬ್ಬಾದ ಮರುದಿನ ಸಾಮಾನ್ಯವಾಗಿ ಹೆಚ್ಚು ಮಂದಿ ಬರುತ್ತಾರೆ’ ಎನ್ನುತ್ತಾರೆ ಆರ್‌ಎಫ್‌ಒ ವಸಂತಕುಮಾರ್.

‘ಕೋಟೆ ನೋಡಲು ಬರುವಷ್ಟು ಮಂದಿ ಆಡುಮಲ್ಲೇಶ್ವರಕ್ಕೆ ಬರುವುದಿಲ್ಲ. ಅನೇಕ ಜಿಲ್ಲೆಯವರಿಗೆ ಇಲ್ಲೊಂದು ಸುಂದರ ಕಿರು ಮೃಗಾಲಯವಿದೆ ಎಂಬ ಮಾಹಿತಿಯೇ ಇಲ್ಲ. ಅದಕ್ಕಾಗಿ ನಾವು ವಿವಿಧೆಡೆ ನಾಮಫಲಕಗಳನ್ನು ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೋಟೆಯಷ್ಟೇ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

‘ಆಡುಮಲ್ಲೇಶ್ವರಕ್ಕೆ ನಗರಸಾರಿಗೆ ಬಸ್ ಸಂಚಾರಕ್ಕೆ ಭಾನುವಾರದಿಂದ ಚಾಲನೆ ದೊರೆತಿದ್ದು, ಮೊದಲ ದಿನ ತಕ್ಕಮಟ್ಟಿಗೆ ಸ್ಪಂದನೆ ದೊರೆತಿದೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ಘಟಕದ ವ್ಯವಸ್ಥಾಪಕ ಕೃಷ್ಣಪ್ರಸಾದ್.

‘ಬೆಳಿಗ್ಗೆ 11ಕ್ಕೆ ಹೊರಟ ಮೊದಲ ಬಸ್‌ ಸಂಚಾರದಲ್ಲಿ ಹೆಚ್ಚು ಪ್ರಯಾಣಿಕರಿರಲಿಲ್ಲ. ಎರಡು ಮತ್ತು ಮೂರನೇ ಟ್ರಿಪ್‌ನಲ್ಲಿ ಬಸ್ ಹತ್ತಲು ಜನ ಮುಂದಾದರು. ಮೂರು ವಾರಗಳಲ್ಲಿ ಯಾವ ರೀತಿ ಸ್ಪಂದನೆ ದೊರೆಯಲಿದೆ ಎಂಬ ಮಾಹಿತಿ ತಿಳಿಯಲಿದೆ’ ಎನ್ನುತ್ತಾರೆ ಅವರು.

‘ನಾಗರಿಕರ ಒತ್ತಾಯದ ಮೇರೆಗೆ ಈಗ ನಗರಸಾರಿಗೆ ಸೌಲಭ್ಯ ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಸ್ಪಂದನೆಗೆ ತಕ್ಕಂತೆ ಹೆಚ್ಚಿನ ಬಸ್‌ಗಳನ್ನು ಸಂಚಾರಕ್ಕೆ ಬಿಡಲು ತೀರ್ಮಾನಿಸಲಾಗಿದ್ದು, ಹೆಚ್ಚು ಮಂದಿ ಪ್ರಯಾಣಿಸಿದರೆ, ಅನುಮತಿ ಪಡೆದು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT