ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆ ಶುದ್ಧಿಯಾಗಿದೆ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

‘ಗಂಗಾನದಿಯ ಶುದ್ಧೀಕರಣ ಯೋಜನೆ ಕಾರ್ಯಗತವಾಗಿಲ್ಲ’ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ನಾನು ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದು, ಪ್ರತಿ ತಿಂಗಳ ಹುಣ್ಣಿಮೆಯಂದು ಗಂಗಾಸ್ನಾನಕ್ಕೆ ಹೋಗುತ್ತೇನೆ. 2014ರಲ್ಲಿ ನಾನು ಕಾಶಿಗೆ ಹೋಗಿ ಮೂರು ದಿನ ಅಲ್ಲಿ ವಾಸವಿದ್ದೆ. ಅಂದಿನ ಹಾಗೂ ಇಂದಿನ ಗಂಗೆಗೆ ಭಾರಿ ಅಂತರವಿದೆ.

ಗಂಗಾತೀರದ ಬಹಳಷ್ಟು ಸ್ನಾನಘಟ್ಟಗಳಿಗೆ ಈಗ ಕೊಳಚೆ ನೀರು ಸೇರುತ್ತಿಲ್ಲ. ಅದನ್ನು ಶುದ್ಧೀಕರಿಸಲು ಬಹುದೊಡ್ಡ ಯಂತ್ರಗಳ ವ್ಯವಸ್ಥೆಯೊಂದು ಕೇದಾರಘಾಟ್ ಹಾಗೂ ಮಣಿಕರ್ಣಿಕ ಘಾಟ್‍ಗಳಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿತವಾಗಿದೆ. ಗಂಗಾತೀರದಿಂದ 200 ಮೀಟರ್‌ವರೆಗಿನ ಜಾಗದಲ್ಲಿನ ಕಟ್ಟಡಗಳ ವಿಸ್ತರಣೆ ಹಾಗೂ ಹೊಸ ಕಟ್ಟಡಗಳ ನಿರ್ಮಾಣವನ್ನು ನಿಷೇಧಿಸಲಾಗಿದೆ. ಸ್ನಾನಘಟ್ಟಗಳ ಸುತ್ತಮುತ್ತ ಕಸದ ತೊಟ್ಟಿಗಳನ್ನು ಇರಿಸಲಾಗಿದ್ದು, ‘ನಮಾಮಿ ಗಂಗೆ’ ಎಂಬ ಸಮವಸ್ತ್ರ ತೊಟ್ಟ ನೂರಾರು ಮಂದಿ ಅಲ್ಲಿ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಅಸೀಘಾಟನ್ನು ಅಭಿವೃದ್ಧಿಪಡಿಸಲಾಗಿದ್ದು ಅಲ್ಲಿನ ಅರ್ಧಚಂದ್ರಾಕೃತಿಯ ಮೆಟ್ಟಿಲುಗಳ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹರಿಶ್ಚಂದ್ರಘಾಟ್‍ನಲ್ಲಿ ಶವಸಂಸ್ಕಾರ ನಡೆಸುವವರು ₹ 1200 ಜಮೆ ಮಾಡಿ ಕಟ್ಟಿಗೆಗಳನ್ನು ಪಡೆದು ಶವವನ್ನು 3 ಬಾರಿ ಗಂಗೆಯಲ್ಲಿ ಮುಳುಗಿಸಿ ಹೊರಗಡೆ ತಂದು ದಹನ ಮಾಡಬೇಕಾಗುತ್ತಿದೆ.

ಬಟ್ಟೆ ಒಗೆಯುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು, ಯಾತ್ರಿಕರು ಸಾಬೂನು, ಶಾಂಪೂ, ಪೇಸ್ಟ್ ಬಳಸದಂತೆ ಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದೇ ಮುಂತಾದವು ಅಲ್ಲಿ ಆಗಬೇಕಾಗಿರುವ ಕೆಲಸಗಳು.

ಟಿ.ಪಿ. ಸುಭಾಷಿಣಿ, ವಾರಾಣಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT