ಬುಧವಾರ, ಜುಲೈ 6, 2022
22 °C

ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಪ್ರಿಯ ಓದುಗರೇ,‘ಪ್ರಜಾವಾಣಿ’ ಪಾಲಿಗೆ ಇದೊಂದು ಅತ್ಯಂತ ಮಹತ್ವದ ದಿನ. ಏಕೆಂದರೆ, ಸದಾ ಕಾಲದೊಂದಿಗೆ ಹೆಜ್ಜೆ ಹಾಕುವ ಈ ನಿಮ್ಮ ಹೆಮ್ಮೆಯ ಪತ್ರಿಕೆಯು ಇಂದಿನ ತಂತ್ರಜ್ಞಾನ ಯುಗದ ಅಗತ್ಯಕ್ಕೆ ತಕ್ಕಂತೆ ಮೊಬೈಲ್‌ ಆ್ಯಪ್‌ಅನ್ನು ಬಿಡುಗಡೆ ಮಾಡಿರುವ ಸಂದರ್ಭ ಇದು. ಅತ್ಯಾಕರ್ಷಕವಾದ ಹಾಗೂ ಅಷ್ಟೇ ಹೊಸತನದಿಂದ ಕೂಡಿದ ಹಾದಿಯಲ್ಲಿ ಕರೆದೊಯ್ದು ಸುದ್ದಿಯ ವನದಲ್ಲಿ ಸುತ್ತು ಹಾಕಿಸುವ ಈ ಆ್ಯಪ್‌, ಆನ್‌ಲೈನ್‌ನ ಅತ್ಯಂತ ವಿಶ್ವಾಸಾರ್ಹ ಮಾಹಿತಿ ತಾಣವೂ ಆಗಿದೆ. ಸುಳ್ಳು ಸುದ್ದಿಗಳ ಸಂತೆಯ ನಡುವೆ ಸತ್ಯ ಸಂಗತಿಗಳನ್ನಷ್ಟೇ ನಿಮಗಿದು ಮೊಗೆ–ಮೊಗೆದು ಕೊಡಲಿದೆ.

ಹೌದು, ನಮಗೆಲ್ಲರಿಗೂ ತುಂಬಾ ಅಸಾಧಾರಣವಾದ ಹಾಗೂ ಅಷ್ಟೇ ಕ್ಲಿಷ್ಟಮಯವಾದ ಸಂದರ್ಭ ಈಗಿನದು. ಕೊರೊನಾ ವೈರಸ್‌ನಿಂದ ಶುರುವಾದ ಸಂಕಷ್ಟಗಳ ಸರಮಾಲೆಯಿಂದ ಇನ್ನೂ ಯಾವ ವಲಯವೂ ಮುಕ್ತವಾಗಿಲ್ಲ. ಹಲವು ಕಂಪನಿಗಳು ತಮ್ಮ ಹೊಸ ಯೋಜನೆಗಳನ್ನು ಮುಂದಕ್ಕೆ ಹಾಕುತ್ತಿರುವ ಇಲ್ಲವೆ ಕೈಬಿಡುತ್ತಿರುವ ಅಥವಾ ಕಾರ್ಯಚಟುವಟಿಕೆಗಳನ್ನೇ ಮೊಟಕುಗೊಳಿಸುತ್ತಿರುವ ಇಂತಹ ಸಂದರ್ಭದಲ್ಲೂ ನಾವು ಆ್ಯಪ್‌ ಬಿಡುಗಡೆ ಮಾಡಿದ್ದೇವೆ. ಒಳ್ಳೆಯ ಸಮಯವೇ ಆಗಿರಲಿ, ಪ್ರತಿಕೂಲ ಸನ್ನಿವೇಶವೇ ಆಗಿರಲಿ, ಸದಾ ನಮ್ಮ ಜತೆಗಿರುವ ಓದುಗರೆಡೆಗೆ ನಾವು ಹೊಂದಿರುವ ಬದ್ಧತೆಯ ಪ್ರತೀಕ ಇದಾಗಿದೆ.

‘ಪ್ರಜಾವಾಣಿ’ಯ ಈ ಹೊಸ ಆ್ಯಪ್‌ ಓದುಗಸ್ನೇಹಿಯಾಗಿದೆ. ಕಣ್ಣಿಗೆ ಹಿತವಾಗಿದೆ. ಅಲ್ಲದೆ, ಆ್ಯಪ್‌ ಬಳಸುವ ವ್ಯಕ್ತಿಯ ಆದ್ಯತೆಗಳಿಗೆ ತಕ್ಕಂತೆ ನಿರಂತರ ಸುದ್ದಿ ಮಾಹಿತಿಯನ್ನು ಪಡೆಯಲು ಅನುವಾಗುವಂತೆ ಭಿನ್ನ ಆಯ್ಕೆಗಳನ್ನು ಸಹ ಹೊಂದಿದೆ. ‘ಪ್ರಜಾವಾಣಿ’ ಮತ್ತು ಓದುಗರ ನಡುವಿನ ಬಾಂಧವ್ಯವನ್ನು ಈ ಆ್ಯಪ್‌ ಇನ್ನಷ್ಟು ಗಟ್ಟಿಗೊಳಿಸಲಿದೆ ಎನ್ನುವ ವಿಶ್ವಾಸ ನಮ್ಮದಾಗಿದೆ. ಹಾಂ, ನಿಮ್ಮ ಅನಿಸಿಕೆಯನ್ನು ತಿಳಿದುಕೊಳ್ಳಲು ನಾವು ಕಾತುರರಾಗಿದ್ದೇವೆ, ಮತ್ತೆ. ಆ್ಯಪ್‌ ಬಳಕೆ ಕುರಿತ ನಿಮ್ಮ ಅನುಭವವನ್ನು ಹಂಚಿಕೊಳ್ಳಿರಿ.
–ಸಂಪಾದಕ

Prajavani App

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು