ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವಿಶೇಷ ಎಕ್ಸೈಸ್ ಸುಂಕದಲ್ಲಿ ಲೀಟರ್ಗೆ ₹10ರಷ್ಟು ಕಡಿತ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸದ್ಯದ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಿವಾರ್ಯವಾದ ಕ್ರಮವಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ತಲೆದೋರಿರುವ ಕಚ್ಚಾ ತೈಲದ ಬಿಕ್ಕಟ್ಟು ಹಾಗೂ ಹೊರ್ಮುಜ್ ಜಲಸಂಧಿಯಲ್ಲಿನ ಉಸಿರುಗಟ್ಟಿಸುವಿಕೆಯ ಪರಿಸ್ಥಿತಿಯು ಇಂಧನ ಬೆಲೆಗಳ ಮರು ಮೌಲ್ಯಮಾಪನದ ಅಗತ್ಯವನ್ನು ಸೃಷ್ಟಿಸಿದ್ದವು. ಸರ್ಕಾರದ ನಿರ್ಧಾರದಿಂದಾಗಿ ಈ ಮೊದಲು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿದ್ದ ₹13ರ ವಿಶೇಷ ಹೆಚ್ಚುವರಿ ಎಕ್ಸೈಸ್ ಸುಂಕ ಪ್ರಸ್ತುತ ₹3ಕ್ಕೆ ಇಳಿಕೆಯಾಗಿದೆ. ಪ್ರತಿ ಲೀಟರ್ ಡೀಸೆಲ್ ಮೇಲೆ ಇದ್ದ ₹10 ಎಕ್ಸೈಸ್ ಸುಂಕ ಶೂನ್ಯಕ್ಕಿಳಿದಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ 116 ಡಾಲರ್ಗೆ ಏರಿಕೆಗೊಂಡು, ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಶೇ 30ರಿಂದ 50ರಷ್ಟು ಏರಿಕೆಯಾಗಿದೆ. ಅದರಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಅಪಾರ ಒತ್ತಡಕ್ಕೊಳಗಾಗಿದ್ದವು. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಅವು ಪ್ರತಿ ಲೀಟರ್ ಪೆಟ್ರೋಲ್ಗೆ ಸುಮಾರು ₹24 ಹಾಗೂ ಡೀಸೆಲ್ಗೆ ₹30ರಷ್ಟು ನಷ್ಟ ಅನುಭವಿಸುತ್ತಿವೆ. ಈ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಶೇಷ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು.

ವಿಶೇಷ ಎಕ್ಸೈಸ್ ಸುಂಕದ ಪರಿಷ್ಕರಣೆಯ ಕ್ರಮವು ‘ಒಎಂಸಿ’ಗಳಿಗೆ ಆಗುತ್ತಿರುವ ಭಾಗಶಃ ನಷ್ಟವನ್ನು ಸರಿದೂಗಿಸಿಕೊಳ್ಳಲು ನೆರವಾಗಲಿದೆ. ಆದರೆ, ನಷ್ಟ ಸಂಪೂರ್ಣವಾಗಿ ಭರ್ತಿಯಾಗದ ಕಾರಣದಿಂದಾಗಿ ಸುಂಕ ಪರಿಷ್ಕರಣೆಯ ಲಾಭವನ್ನು ‘ಒಎಂಸಿ’ಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯಿಲ್ಲ. ಈಗ ಈ ಹೊರೆ ಸರ್ಕಾರಕ್ಕೆ ವರ್ಗಾವಣೆಯಾಗಿದೆ. ಪೆಟ್ರೋಲಿಯಂ ವಲಯದಿಂದ ಬರುವ ಆದಾಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನದ ಗಣನೀಯ ಮೂಲವಾಗಿದೆ. ತೆರಿಗೆ, ಲಾಭಾಂಶ ಮತ್ತು ರಾಯಧನ ಸೇರಿದಂತೆ 2024–25ರ ಸಾಲಿನಲ್ಲಿ ಒಟ್ಟು ₹7.4 ಲಕ್ಷ ಕೋಟಿ ವರಮಾನ ಸರ್ಕಾರಗಳಿಗೆ ಸಂದಾಯವಾಗಿದ್ದು, ಅದರಲ್ಲಿ ಕೇಂದ್ರಕ್ಕೆ ₹4.15 ಲಕ್ಷ ಕೋಟಿ ಹಾಗೂ ರಾಜ್ಯಗಳಿಗೆ ₹3.25 ಲಕ್ಷ ಕೋಟಿ ದೊರೆತಿದೆ. ಪ್ರಸಕ್ತ ಯುದ್ಧದ ಬಿಕ್ಕಟ್ಟಿನಿಂದ ₹1 ಲಕ್ಷ ಕೋಟಿಗಿಂತಲೂ ಹೆಚ್ಚಿನ ನಿವ್ವಳ ವರಮಾನ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಈಗ ಆಗಿರುವ ಸುಂಕದ ಪರಿಷ್ಕರಣೆಯು ಮುಂದುವರಿಯುವುದಿಲ್ಲ ಎನ್ನುವ ಖಚಿತತೆ ಸದ್ಯದ ಸಂದರ್ಭದಲ್ಲಿ ಇಲ್ಲ. 2026–27ರಲ್ಲಿ ಪೆಟ್ರೋಲ್ ಮತ್ತು ಹೈ–ಸ್ಪೀಡ್ ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಸುಂಕದಿಂದ ₹1.69 ಲಕ್ಷ ಕೋಟಿ ಗಳಿಕೆಯನ್ನು ನಿರೀಕ್ಷಿಸಲಾಗಿದೆ. ಆದರೆ, ಬದಲಾದ ಸಂದರ್ಭದಲ್ಲಿ ಆದಾಯದ ಕೊರತೆ ಗಣನೀಯವಾಗಿರಲಿದೆ ಹಾಗೂ ಅದು ಬಜೆಟ್ ಲೆಕ್ಕಾಚಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಯುದ್ಧ ಕೊನೆಗೊಳ್ಳುವ ಸಾಧ್ಯತೆಗಳು ಅಸ್ಪಷ್ಟವಾಗಿರುವುದರಿಂದ ಕಚ್ಚಾ ತೈಲದ ಸರಬರಾಜು ಮತ್ತು ಸಾಗಣೆಯಲ್ಲಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದರಿಂದ ಕಚ್ಚಾ ತೈಲದ ಬೆಲೆ ಇನ್ನೂ ಹೆಚ್ಚಾಗಬಹುದು ಹಾಗೂ ಅದನ್ನು ಸರಿದೂಗಿಸಲು ಬೆಲೆ ಹೊಂದಾಣಿಕೆಯ ಮತ್ತಷ್ಟು ಕಸರತ್ತು ಅನಿವಾರ್ಯ ಆಗಬಹುದು. ರಫ್ತನ್ನು ನಿರುತ್ಸಾಹಗೊಳಿಸುವ ಹಾಗೂ ಸ್ಥಳೀಯ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಸರ್ಕಾರ ಡೀಸೆಲ್ ರಫ್ತಿನ ಮೇಲೆ ತೆರಿಗೆ ವಿಧಿಸಿದೆ. ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತಕ್ಕೆ, ಇಂಧನ ಬೆಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸೀಮಿತ ಆಯ್ಕೆಗಳಿವೆ. ಕೆಲವು ದೇಶಗಳು ಈಗಾಗಲೇ ರೇಷನಿಂಗ್ ಜಾರಿಗೊಳಿಸಿವೆ ಹಾಗೂ ಕೆಲಸದ ವೇಳಾಪಟ್ಟಿಗಳಲ್ಲಿ ಬದಲಾವಣೆಗಳನ್ನು ತಂದಿವೆ. ಭಾರತದಲ್ಲಿ ಇಂಧನದ ರೇಷನಿಂಗ್ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮಾರಾಟ ದರ ಬದಲಾಗದೆ ಉಳಿದಿದೆ. ಚುನಾವಣೆ ಬಳಿಕವಷ್ಟೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.