ರಾಜ್ಯಗಳಿಗೆ ಅನುದಾನ ನೀಡುವುದರಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಂದರ್ಭಗಳಲ್ಲಿ ದೂರಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ ವರದಿ (ಸಿಎಜಿ) ಬೇರೆಯದೇ ಕಥೆಯನ್ನು ಹೇಳುತ್ತಿದೆ. ‘ಜಲಜೀವನ್ ಮಿಷನ್’ (ಜೆಜೆಎಂ) ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯ ಪಾತ್ರವಹಿಸುವುದರಿಂದ, ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಗಮನಹರಿಸಬೇಕಾಗಿದೆ. ನೀರು ಆಯ್ಕೆಗೆ ಸಂಬಂಧಿಸಿದ ಈ ಯೋಜನೆಯು ಕಲ್ಯಾಣ ಕಾರ್ಯಕ್ರಮವಾಗಿರದೆ, ಮೂಲಭೂತ ಹಕ್ಕಾಗಿದೆ. ಹಾಗಾಗಿಯೇ, ಪ್ರತಿ ಮನೆಗೂ ನಳದ ನೀರಿನ ಸಂಪರ್ಕ ಕಲ್ಪಿಸುವ ‘ಜೆಜೆಎಂ’ನ ಸಾರ್ವತ್ರಿಕ ಯೋಜನೆಯು ಮೂಲಸೌಕರ್ಯ ಕಲ್ಪಿಸುವ ಗುರಿಯಷ್ಟೇ ಆಗಿರದೆ, ಸಾಮಾಜಿಕ ಒಪ್ಪಂದದ ಬದ್ಧತೆಯಾಗಿದೆ. 2019 ಮತ್ತು 2024ರ ನಡುವಿನ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ₹24,819 ಕೋಟಿಯಲ್ಲಿ, ರಾಜ್ಯ ಪಡೆದುಕೊಂಡಿರುವುದು ಶೇ 45ರಷ್ಟು ಮೊತ್ತವನ್ನು ಮಾತ್ರ. ಅನುದಾನವನ್ನು ಬಳಕೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಸರಿಯಾದ ಸಮಯಕ್ಕೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದೇ ಪೂರ್ಣ ಅನುದಾನ ದೊರೆಯದಿರಲು ಕಾರಣ. ಆಡಳಿತ ಯಂತ್ರದಲ್ಲಿನ ಈ ಸಮಸ್ಯೆಯು ಪಕ್ಷಾತೀತ ಎನ್ನುವುದು ಗಮನಾರ್ಹ.

ಅನುದಾನದ ಅಸಮರ್ಪಕ ಬಳಕೆಯ ಪರಿಣಾಮಗಳು ಕಣ್ಣಿಗೆ ಕಾಣಿಸುವಂತಿವೆ. 2024ರ ಕೊನೆಯ ವೇಳೆಗೆ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ತನ್ನ ಗುರಿಯಲ್ಲಿ ಶೇ 66ರಷ್ಟನ್ನು ಸಾಧಿಸಲಷ್ಟೇ ರಾಜ್ಯ ಯಶಸ್ವಿಯಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬ, ಭೂಮಿಯನ್ನು ಸ್ವಾಧೀನಕ್ಕೆ ಪಡೆಯದೆ ಮಂಜೂರು ಮಾಡಿದ ಯೋಜನೆಗಳು ಹಾಗೂ ಖರ್ಚು ಮಾಡಿದ ನಂತರವೂ ಅಪೂರ್ಣವಾಗಿ ಉಳಿದಿರುವ ಕೆಲಸಗಳು ವ್ಯವಸ್ಥೆಯ ವೈಫಲ್ಯಕ್ಕೆ ನಿದರ್ಶನದಂತಿವೆ. ಸುಸ್ಥಿರತೆ ಮತ್ತು ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಉಳಿದಿವೆ. ಅಂತರ್ಜಲದ ಮೇಲಿನ ರಾಜ್ಯದ ಅವಲಂಬನೆ ಮುಂದು ವರಿದಿದೆ. ಆದರೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆಯ ವೆಚ್ಚವು ಲೆಕ್ಕಪರಿಶೋಧನಾ ಅವಧಿಯಲ್ಲಿ ತೀವ್ರವಾಗಿ ಕುಸಿದಿದೆ. ಅಪೂರ್ಣ ಕಾಮಗಾರಿಗಳ ನಡುವೆಯೂ ಗ್ರಾಮಗಳಲ್ಲಿ ಯೋಜನೆಯು ಸಂಪೂರ್ಣವಾಗಿ ಅನುಷ್ಠಾನಗೊಂಡಿದೆ ಎನ್ನುವ ಘೋಷಿತ ವರದಿಗಳು ಯೋಜನೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಕುಗ್ಗಿಸುವಂತಿವೆ. 3,100ಕ್ಕೂ ಹೆಚ್ಚಿನ ಹಳ್ಳಿಗಳಿಗೆ ರಾಸಾಯನಿಕಗಳು ಬೆರೆತು ಕಲುಷಿತಗೊಂಡ ನೀರಿನ ಸರಬರಾಜು ಆಗುತ್ತಿದೆ ಎನ್ನುವ ಇತ್ತೀಚಿನ ವರದಿಗಳು ಸಿಎಜಿಯ ವರದಿಯನ್ನು ಬಲಪಡಿಸುವಂತಿವೆ. ಪರೀಕ್ಷೆಗೆ ಒಳಗಾದ ಸುಮಾರು ಶೇ 10ರಷ್ಟು ಮಾದರಿಗಳಲ್ಲಿ ಮಾಲಿನ್ಯಕಾರಕ ಅಂಶಗಳು ಪತ್ತೆಯಾಗಿವೆ. ಇಂಥ ಪರೀಕ್ಷೆಗಳು ರೋಗ ಹರಡಿದ ನಂತರ ನಡೆಯುತ್ತವೆಯೇ ಹೊರತು, ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯಾಗಿ ಅಲ್ಲ ಎನ್ನುವುದು ಸಾರ್ವಜನಿಕ ಆರೋಗ್ಯದ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಯನ್ನು ಬಹಿರಂಗಪಡಿಸುತ್ತದೆ.

ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ, ಜಲಜೀವನ್ ಮಿಷನ್ ಯೋಜನೆಯ ಇಲ್ಲಿಯವರೆಗಿನ ಅನುಷ್ಠಾನದಿಂದ ಅನೇಕ ಸಕಾರಾತ್ಮಕ ಬೆಳವಣಿಗೆಗಳು ಆಗಿರುವುದನ್ನೂ ಗಮನಿಸಬೇಕು. ಮನೆಗಳಿಗೆ ನಳದ ಸಂಪರ್ಕದಿಂದಾಗಿ ಗ್ರಾಮೀಣ ಮಹಿಳೆಯರ ದೈನಂದಿನ ಶ್ರಮವು ಸ್ವಲ್ಪವಾದರೂ ಹಗುರವಾಗಿದೆ. ಶಾಲೆಯಿಂದ ಹೊರಗುಳಿಯುವ ಬಾಲಕಿಯರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ವಿದ್ಯಮಾನಗಳು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಸಾಮಾಜಿಕವಾಗಿ ಏನೆಲ್ಲ ಯಶಸ್ಸು ಸಾಧ್ಯವಾಗಬಹುದು ಎನ್ನುವುದನ್ನು ಸೂಚಿಸುವಂತೆಯೇ, ಕಳಪೆ ನಿರ್ವಹಣೆಯಿಂದಾಗಿ ಏನೆಲ್ಲ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದರ ಸಂಕೇತವೂ ಆಗಿವೆ. ‘ಜೆಜೆಎಂ’ ಯೋಜನೆಯ ಅನುಷ್ಠಾನದಲ್ಲಿನ ವೈಫಲ್ಯವು ಆರ್ಥಿಕ ಶಿಸ್ತಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಹೆಚ್ಚು ಹಣ ಖರ್ಚು ಮಾಡುವುದರಲ್ಲಿ (‘ಮಾರ್ಚ್ ರಶ್’) ರಾಜ್ಯದ ದಾಖಲೆ ಉತ್ತಮವಾಗಿದೆ. ಶೇ 40ರಷ್ಟು ಬಂಡವಾಳ ವೆಚ್ಚವನ್ನು ಮಾರ್ಚ್ ತಿಂಗಳವರೆಗೂ ಮುಂದೂಡುವುದು ತರಾತುರಿಯ ವೆಚ್ಚವನ್ನು ಪ್ರೋತ್ಸಾಹಿಸುವಂತಿದೆ. ಈ ನೀತಿಯಲ್ಲಿ ತುರ್ತು ತಿದ್ದುಪಡಿ ಆಗಬೇಕಾಗಿದೆ. ಫಲಿತಾಂಶ ಆಧರಿಸಿದ ಬಜೆಟ್ ಅನ್ನು ಸರ್ಕಾರ ಸಾಂಸ್ಥೀಕರಣಗೊಳಿಸಬೇಕಾಗಿದೆ. ಹಾಗೆಯೇ ವೆಚ್ಚದ ಬದಲಾಗಿ ನಿಗದಿತ ಮಾನದಂಡಗಳಿಗೆ ನಿಲುಕುವಂತೆ ಅನುದಾನಗಳನ್ನು ಹೊಂದಾಣಿಕೆ ಮಾಡಬೇಕಾಗಿದೆ. ಲಭ್ಯ ಅನುದಾನದ ಸಮರ್ಪಕ ಬಳಕೆ ಮಾಡಿಕೊಂಡಾಗಷ್ಟೇ, ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ತಾರತಮ್ಯ ಕುರಿತ ರಾಜ್ಯ ಸರ್ಕಾರದ ದೂರುಗಳಿಗೆ ಬಲ ಬರುತ್ತದೆ. ಕುಡಿಯುವ ನೀರಿನಂತಹ ಮೂಲಸೌಕರ್ಯದ ವಿಷಯದಲ್ಲಿನ ವೈಫಲ್ಯಕ್ಕೆ ಯಾವುದೇ ನೆಪ ಸಮರ್ಥನೆ ಆಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.