ಸಂಪುಟದಿಂದ ಕೈಬಿಡಿ!

5

ಸಂಪುಟದಿಂದ ಕೈಬಿಡಿ!

Published:
Updated:

ಬೆಳಗಾವಿಯ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ. ಅದು ಈಡೇರುವವರೆಗೂ ಸಚಿವ ಸಂಪುಟದ ಸಭೆಗೆ ಹೋಗುವುದಿಲ್ಲ’ (ಪ್ರ.ವಾ., ಅ. 7) ಎಂದಿದ್ದಾರೆ. ಸಚಿವರೊಬ್ಬರು ಆಡಬಹುದಾದ ಅತ್ಯಂತ ಬೇಜವಾಬ್ದಾರಿಯ ಮಾತುಗಳಿವು.

ಜನರು ಇವರನ್ನು ಆಯ್ಕೆ ಮಾಡಿದ್ದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲಿಕ್ಕೆಯೇ ವಿನಾ ದೇವರನ್ನು ಸಂಪ್ರೀತಗೊಳಿಸಲಿಕ್ಕಲ್ಲ ಎಂಬುದನ್ನು ಸಚಿವರು ಮೊದಲು ಅರಿತುಕೊಳ್ಳಬೇಕು.

ಜನಸೇವೆಗಿಂತ ಹರಕೆ ತೀರಿಸುವುದೇ ಮುಖ್ಯವಾಗಿದ್ದರೆ, ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಗುಡಿಯಲ್ಲಿ ಭಜನೆ ಮಾಡುತ್ತಾ ಕುಳಿತುಕೊಳ್ಳಲಿ. ಎಲ್ಲವನ್ನೂ ದೇವರೇ ಮಾಡುವುದಾದರೆ ಅವರೇಕೆ ಮತದಾರರ ಮುಂದೆ ಕೈ ಮುಗಿದು ಚುನಾವಣೆಯಲ್ಲಿ ಗೆದ್ದು ಬರಬೇಕಿತ್ತು? ಇಂಥ ನಿಷ್ಕ್ರಿಯ ಮಂತ್ರಿಯನ್ನಿಟ್ಟುಕೊಂಡು ಸರ್ಕಾರ ಸಾಧಿಸುವುದಾದರೂ ಏನನ್ನು? ಮುಖ್ಯಮಂತ್ರಿಯೇ ಮುಂದಾಗಿ, ಜಾರಕಿಹೊಳಿ ಅವರನ್ನು ಮಂತ್ರಿ ಮಂಡಳದಿಂದ ಕೈ ಬಿಟ್ಟು ಕ್ರಿಯಾಶೀಲ ವ್ಯಕ್ತಿಗೆ ಅವಕಾಶ ಮಾಡಿಕೊಡಲಿ.

ದಾದುಗೌಡಾ ಪಾಟೀಲ, ಇಂಡಿ, ವಿಜಯಪುರ

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !