ಮಿತವ್ಯಯಕ್ಕೆ ಸಂಬಂಧಿಸಿದಂತೆ ವಿವಿಧ ಕ್ರಮಗಳನ್ನು ಅನುಸರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಈ ಮೂಲಕ, ಇಂಧನ ಮತ್ತು ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿಯನ್ನು ಪರೋಕ್ಷವಾಗಿ ಘೋಷಿಸಿದ್ದಾರೆ. ವಿದೇಶಿ ವಿನಿಮಯದ ಹೊರ ಹರಿವಿಗೆ ಕಾರಣವಾಗುವ ಸರಕುಗಳ ಆಮದನ್ನು ಕಡಿತಗೊಳಿಸುವ ಅವರ ಸಲಹೆಯ ಬಗ್ಗೆ ಸಾರ್ವತ್ರಿಕ ಸಮ್ಮತಿ ಇದೆ. ಆದರೆ, ಆ ಕರೆಯ ಹಿಂದಿನ ನೈತಿಕತೆ ಮತ್ತು ಸಮಯ ಪ್ರಶ್ನೆಗಳಿಗೆ ಕಾರಣವಾಗಿದೆ. ತೈಲದ ಬಿಕ್ಕಟ್ಟು ಈ ವಾರದ ಬೆಳವಣಿಗೆಯೇನಲ್ಲ. ಕಚ್ಚಾತೈಲ, ಎಲ್ಪಿಜಿ, ರಸಗೊಬ್ಬರ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನ ಮೇಲೆ ಪರಿಣಾಮ ಬೀರಿರುವ ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಎರಡು ತಿಂಗಳ ಹಿಂದೆಯೇ ಆರಂಭವಾಗಿದೆ. ಇದರ ಪರಿಣಾಮವನ್ನು ಸಂಘರ್ಷದ ಆರಂಭದ ದಿನದಿಂದಲೂ ದೇಶ ಅನುಭವಿಸುತ್ತಿದೆ. ಆದರೆ, ವಾಣಿಜ್ಯ ಎಲ್ಪಿಜಿ ಹೊರತುಪಡಿಸಿ ಯಾವುದೇ ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ಸರ್ಕಾರ ಹೆಚ್ಚು ಮಾಡಲಿಲ್ಲ. ಬೆಲೆ ಏರಿಸದಿರುವ ಸರ್ಕಾರದ ನಿಲುವಿಗೆ ಕೆಲವು ರಾಜ್ಯಗಳಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳೇ ಕಾರಣವಾಗಿದ್ದುದು ಸ್ಪಷ್ಟ. ದೇಶದ ಹಿತಾಸಕ್ತಿಯ ಮೇಲೆ ರಾಜಕೀಯ ಮೇಲುಗೈ ಸಾಧಿಸಿದ್ದು ದುರದೃಷ್ಟಕರ. ಇತ್ತೀಚಿನ ವಾರಗಳಲ್ಲಿ ನರೇಂದ್ರ ಮೋದಿ ಅವರು ನೂರಾರು ವಾಹನಗಳೊಂದಿಗೆ ರೋಡ್ ಶೋಗಳನ್ನು ನಡೆಸಿದ್ದಾರೆ. ಮಿತವ್ಯಯದ ಕರೆ ನೀಡಿದ ನಂತರವೂ ಒಂದು ರೋಡ್ ಶೋ ನಡೆಸಿದ್ದಾರೆ. ಈ ಕಾರಣದಿಂದಲೂ ಅವರ ಕರೆ ಪ್ರಶ್ನಾರ್ಹ.
ನೈತಿಕತೆಯ ಕೊರತೆ ಹಾಗೂ ವಿರೋಧಾಭಾಸದ ನಿಲುವನ್ನು ಅವರ ಕರೆ ಒಳಗೊಂಡಿದೆ.

ಕಚೇರಿಯ ಕೆಲಸಗಳನ್ನು ಮನೆಯಿಂದಲೇ ನಿರ್ವಹಿಸುವಂತೆ (ವರ್ಕ್ ಫ್ರಂಹೋಂ), ಸಾರ್ವಜನಿಕ ವಾಹನಗಳನ್ನು ಬಳಸುವಂತೆ, ಅನಗತ್ಯವಾದ ವಿದೇಶಿ ಪ್ರವಾಸಗಳನ್ನು ಹಾಗೂ ಚಿನ್ನದ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನಾಗರಿಕರನ್ನು ಕೇಳಿಕೊಂಡಿದ್ದಾರೆ. ‘ನಾಗರಿಕ ಸತ್ಯಾಗ್ರಹ’ದ ರೂಪದಲ್ಲಿ ಈ ಕರೆ ಆಕರ್ಷಕವಾಗಿದೆ. ಆದರೆ, ರಾಜಕಾರಣ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅಪ್ರಿಯ ಪ್ರಶ್ನೆಗಳನ್ನು ಮಿತವ್ಯಯದ ಕರೆ ಮರೆಮಾಚುವಂತಿದೆ. ಇಂಧನದ ಲಭ್ಯತೆ ಹಾಗೂ ಆರ್ಥಿಕತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಇಲ್ಲಿಯವರೆಗೂ ಕೇಂದ್ರ ಸರ್ಕಾರ ಭರವಸೆ ನೀಡಿಕೊಂಡೇ ಬಂದಿದೆ. ಶೇ 70ರಷ್ಟು ಕಚ್ಚಾತೈಲದ ಸರಬರಾಜು ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿಲ್ಲ ಮತ್ತು ಇಂಧನ ಪೂರೈಕೆ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿಕೊಂಡು ಬಂದಿದೆ. ಈಗ ಇದ್ದಕ್ಕಿದ್ದಂತೆ ಪ್ರಧಾನಿ ಅವರು ನೀಡಿರುವ ಕರೆ, ಸರ್ಕಾರ ನಿರೀಕ್ಷಿಸದ ಅಥವಾ ಮುನ್ಸೂಚನೆ ನೀಡಲು ವಿಫಲವಾದ ಬಿಕ್ಕಟ್ಟಿಗೆ ಜನರನ್ನು ಸಿದ್ಧಗೊಳಿಸುವ ಪ್ರಯತ್ನದಂತೆ ಕಾಣಿಸುತ್ತಿದೆ. ತಮ್ಮ ಕರೆಗೆ ಬೆಂಬಲದ ರೂಪದಲ್ಲಿ ಸಾಂಕ್ರಾಮಿಕ ಪಿಡುಗಿನ ಪರಿಸ್ಥಿತಿಯನ್ನು ಅವರು ಉಲ್ಲೇಖಿಸಿದ್ದಾರೆ. ಪ್ರಧಾನಿ ನೀಡಿರುವ ಕೆಲವು ಸಲಹೆಗಳು ಜನಜೀವನ ಮತ್ತು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಈ ಬಾರಿಯ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಮುಂಗಾರಿನ ಕೊರತೆಯ ಜೊತೆಗೆ, ಪ್ರಧಾನಿ ಸಲಹೆಯಂತೆ ರಸಗೊಬ್ಬರ ಬಳಕೆಯನ್ನೂ ಕಡಿಮೆ ಮಾಡಿದರೆ ಕೃಷಿ ಇಳುವರಿ ಗಂಭೀರ ಪ್ರಮಾಣದಲ್ಲಿ ಕುಸಿಯುತ್ತದೆ. ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ಈಗಾಗಲೇ ಅಸ್ತಿತ್ವದಲ್ಲಿದೆ; ಬಹುಶಃ ಅದನ್ನು ಮತ್ತಷ್ಟು ವಿಸ್ತರಿಸುವುದು ಸಾಧ್ಯವಾಗದಿರಬಹುದು. ರೂಪಾಯಿಯಂತೂ ಯುದ್ಧಕ್ಕೆ ಮೊದಲೇ ದುರ್ಬಲಗೊಳ್ಳಲು ಆರಂಭಿಸಿತ್ತು, ಆ ಕುಸಿತಕ್ಕೆ ಬೇರೆ ಕಾರಣಗಳೂ ಇದ್ದವು.

ಸರಕು ಮತ್ತು ಸೇವೆಯ ಬಳಕೆ ಹೆಚ್ಚಾಗುವುದಕ್ಕೂ ಆರ್ಥಿಕತೆ ಗಟ್ಟಿಯಾಗಿರುವುದಕ್ಕೂ ಸಂಬಂಧ ಇರುವ ಸಮಯದಲ್ಲಿ, ಮಿತವ್ಯಯದ ಕರೆಯನ್ನು ಪ್ರಧಾನಿ ಜನರಿಗೆ ನೀಡಿದ್ದಾರೆ. ಬಳಕೆಯಲ್ಲಿನ ಇಳಿಕೆಯು ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಆರ್ಥಿಕತೆಯಲ್ಲಿ ಸಮಸ್ಯೆ ಇದೆ ಎನ್ನುವುದನ್ನು ನಿರಾಕರಿಸಿ, ಸಮಸ್ಯೆ ಬೆಳೆಯುವುದಕ್ಕೆ ಅನುವು ಮಾಡಿಕೊಟ್ಟು, ಈಗ ಸಮಸ್ಯೆಯಿದೆ ಎಂದು ಸರ್ಕಾರ ಹೇಳುತ್ತಿದೆ ಹಾಗೂ ಅದನ್ನು ಪರಿಹರಿಸಲು ಜನರಿಗೆ ಕರೆ ನೀಡುತ್ತಿದೆ. ನೈತಿಕತೆ ಒತ್ತಟ್ಟಿಗಿರಲಿ, ಇದು ಜವಾಬ್ದಾರಿಯುತ ನಡವಳಿಕೆಯೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.