ಇಂಧನ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಮಿತವ್ಯಯದ ವಿವಿಧ ಕ್ರಮಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಬೆಲೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ನ ಮಾರಾಟ ಬೆಲೆಯಲ್ಲಿ ಲೀಟರ್ಗೆ ತಲಾ ₹3ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ, ನಾಲ್ಕು ವರ್ಷಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುವಾದ ನಂತರದಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗಿರುವ ಹೆಚ್ಚಳದ ಹೊರೆಯನ್ನು ಸರಿದೂಗಿಸಿಕೊಳ್ಳಲು ದೇಶದ ಮಾರುಕಟ್ಟೆಯಲ್ಲಿ ಈ ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳಿಗೆ ಕಚ್ಚಾತೈಲದ ಬೆಲೆ ಏರಿಕೆಯಿಂದ ಆಗುವ ನಷ್ಟವನ್ನು ತುಸುಮಟ್ಟಿಗೆ ತಗ್ಗಿಸುವ ಉದ್ದೇಶದಿಂದ ಪೆಟ್ರೋಲ್, ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರವು ಮಾರ್ಚ್ನಲ್ಲಿ ₹10ರಷ್ಟು ತಗ್ಗಿಸಿದೆ. ಈ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎನ್ನುವಂತೆ ಕಾಣಿಸುತ್ತಿದ್ದರೂ, ಪಶ್ಚಿಮ ಬಂಗಾಳ ಹಾಗೂ ಇತರ ಕೆಲವು ವಿಧಾನಸಭೆಗಳಿಗೆ ನಡೆದ ಚುನಾವಣೆಯು ಬೆಲೆ ಹೆಚ್ಚಳವನ್ನು ಮುಂದೂಡುವಂತೆ ಮಾಡಿತ್ತು ಎನ್ನುವುದನ್ನು ಗಮನಿಸಬೇಕು. ಅಂದರೆ, ಬೆಲೆ ಏರಿಕೆಯು ಹಣಕಾಸಿಗೆ ಎಷ್ಟರಮಟ್ಟಿಗೆ ಸಂಬಂಧಿಸಿದೆಯೋ ಅಷ್ಟೇ ಪ್ರಮಾಣದಲ್ಲಿ ರಾಜಕಾರಣದ ಜೊತೆಗೂ ಬೆಸೆದುಕೊಂಡಿದೆ. ಇಂಧನ ಬೆಲೆ ಏರಿಕೆಯಿಂದ ಆಗುವ ಆರ್ಥಿಕ ಆಘಾತದ ಪರಿಣಾಮ ಕಡಿಮೆ ಇರಬೇಕು ಎಂದಾದರೆ, ಬೆಲೆ ಹೆಚ್ಚಳವು ಸರಿಯಾದ ಸಮಯಕ್ಕೆ ಆಗಬೇಕು; ನಿರ್ಧಾರಗಳು ಪಾರದರ್ಶಕವಾಗಿ ಆಗಬೇಕು.

ಕಂಪನಿಗಳಿಗೆ ಆಗುತ್ತಿರುವ ನಷ್ಟವು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಲಾಗಿದೆ. ಕಚ್ಚಾತೈಲದ ಬೆಲೆಯು ಬ್ಯಾರಲ್ ಒಂದಕ್ಕೆ 100 ಡಾಲರ್ ಮಟ್ಟದಲ್ಲಿ ಇದ್ದಾಗ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಪ್ರತಿನಿತ್ಯ ಒಟ್ಟು ₹1,000 ಕೋಟಿ ನಷ್ಟ ಅನುಭವಿಸುತ್ತಿದ್ದವು ಎಂದು ಅಂದಾಜಿಸಲಾಗಿತ್ತು. ಈಗ ಆಗಿರುವ ಏರಿಕೆಯು ಕಂಪನಿಗಳಿಗೆ ಆಗುತ್ತಿರುವ ನಷ್ಟವನ್ನು ಪೂರ್ತಿಯಾಗಿ ಭರಿಸುವುದಿಲ್ಲ ಎನ್ನಲಾಗಿದೆ. ಅಂದರೆ, ಮುಂದಿನ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗಲೂಬಹುದು. ಯುದ್ಧವು ತಕ್ಷಣಕ್ಕೆ ಕೊನೆಗೊಂಡರೂ, ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆ ವ್ಯವಸ್ಥೆಯು ಮುಂದಿನ ಕೆಲವು ತಿಂಗಳುಗಳವರೆಗೆ ಅಸ್ಥಿರವಾಗಿರುವ ಸಾಧ್ಯತೆ ಇದೆ. ಹೀಗಾಗಿ ಇಂಧನ ಬೆಲೆಯು ಈ ವರ್ಷದುದ್ದಕ್ಕೂ ಹೆಚ್ಚಿನ ಮಟ್ಟದಲ್ಲಿ ಉಳಿಯಬಹುದು. ರಷ್ಯಾದಿಂದ ಭಾರತವು ಇಂಧನ ಆಮದು ಮಾಡಿಕೊಳ್ಳುವ ಸಾಧ್ಯತೆ ಈಗ ಅಮೆರಿಕ ರೂಪಿಸುವ ನೀತಿಗಳು, ಅದು ಹೇರುವ ಒತ್ತಡವನ್ನು ಆಧರಿಸಿದೆ. ಹಾಗಾಗಿ, ಅಲ್ಲಿಂದ ಇಂಧನ ಸಿಗುವ ಬಗ್ಗೆ ಖಾತರಿ ಇಲ್ಲ.

ಇಂಧನ ಬೆಲೆ ಏರಿಕೆಯ ಪರಿಣಾಮವು ದೇಶದ ಅರ್ಥ ವ್ಯವಸ್ಥೆಯ ಎಲ್ಲ ಕ್ಷೇತ್ರಗಳನ್ನೂ ಪ್ರಭಾವಿಸಲಿದೆ, ಇದುವರೆಗೆ ನಿಯಂತ್ರಣದಲ್ಲಿ ಇದ್ದ ಹಣದುಬ್ಬರ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಗಲಿದೆ. ಹಾಗೆ ನೋಡಿದರೆ, ಇಂಧನ ಬೆಲೆ ಏರಿಕೆಯ ಪರಿಣಾಮವು ಈಗಾಗಲೇ ಕಾಣಿಸಿಕೊಂಡಿದೆ. ಎಲ್ಲ ವಲಯಗಳಲ್ಲಿಯೂ ತಯಾರಿಕಾ ವೆಚ್ಚವು ಜಾಸ್ತಿ ಆಗಿದೆ. ವಿವಿಧೆಡೆ ಸಾರಿಗೆ ಕ್ಷೇತ್ರಗಳ ಕಂಪನಿಗಳು ಪ್ರಯಾಣ ವೆಚ್ಚವನ್ನು ಹೆಚ್ಚು ಮಾಡಿವೆ. ಹಲವು ಉದ್ಯಮಗಳು ಬೆಲೆ ಹೆಚ್ಚಳದ ಪರಿಣಾಮವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಆರಂಭಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಲೆಕ್ಕ ಹಾಕುವಾಗ ಇಂಧನಕ್ಕೆ ಗಣನೀಯ ಪ್ರಾತಿನಿಧ್ಯ ಇರುತ್ತದೆಯಾದ ಕಾರಣದಿಂದಾಗಿ, ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಜಾಸ್ತಿ ಆಗಬಹುದು. ವಾರ್ಷಿಕ ಹಣದುಬ್ಬರ ಪ್ರಮಾಣವು ಇಂಧನ ಬೆಲೆ ಏರಿಕೆಯ ಕಾರಣದಿಂದಾಗಿ ಶೇ 0.25ರಷ್ಟು ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ. ಆ ರೀತಿ ಆದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಆರ್ಬಿಐ ನಿಗದಿ ಮಾಡಿಕೊಂಡಿರುವ ಮಟ್ಟಕ್ಕಿಂತ ಜಾಸ್ತಿ ಆಗಬಹುದು. ಆಗ ಆರ್ಬಿಐ ಬಡ್ಡಿ ದರವನ್ನು ಹೆಚ್ಚಿಸಲೂಬಹುದು. ಅಂಕಿ–ಅಂಶಗಳನ್ನು ಬದಿಗಿರಿಸಿ ನೋಡಿದರೂ, ಬೆಲೆ ಏರಿಕೆಯು ಜನಸಾಮಾನ್ಯರ ನಿತ್ಯದ ವೆಚ್ಚಗಳ ಮೇಲೆ ಪರಿಣಾಮ ಬೀರುವುದು ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.