ದೇಶದಲ್ಲಿ ಹಠಾತ್ತನೆ ಹೊರಹೊಮ್ಮಿರುವ ‘ಆನ್ಲೈನ್ ಗಣತಂತ್ರ’ದ ರಾಷ್ಟ್ರೀಯ ಪ್ರಾಣಿಯಾಗಿ ಜಿರಲೆ ಹೊರಹೊಮ್ಮಿದೆ. ದೇಶದ ಅಸ್ಮಿತೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುವ ಹುಲಿ, ನವಿಲು ಸೇರಿದಂತೆ ವಿಶಿಷ್ಟ ವರ್ಚಸ್ಸು ಹಾಗೂ ಘನತೆ ಹೊಂದಿರುವ ಪ್ರಾಣಿಗಳನ್ನು ಜಿರಲೆ ಹಿಂದಿಕ್ಕಿದೆ. ದೇಶದ ಸುಪ್ರೀಂ ಕೋರ್ಟ್ ನ್ಯಾಯ ಮತ್ತು ವಿವೇಕದ ಅತ್ಯುನ್ನತ ಪೀಠವಾಗಿದ್ದು, ಆ ಪೀಠದ ಒಂದು ವಿಶ್ಲೇಷಣೆಯು ದೇಶದ ದೊಡ್ಡ ಸಂಖ್ಯೆಯ ನಾಗರಿಕರ ಸಂಚಲನಕ್ಕೆ ಕಾರಣವಾಗಿರುವುದು ಹಾಗೂ ಒಂದು ಕೀಟದ ಹೆಸರಿನಲ್ಲಿ ಅವರು ತಮ್ಮನ್ನು ಗುರ್ತಿಸಿಕೊಳ್ಳುವಂತಾದುದು ಅಚ್ಚರಿಯ ವಿದ್ಯಮಾನವೇನಲ್ಲ. ತನ್ನ ರಾಜಕಾರಣದ ಕೇಂದ್ರದಲ್ಲಿ ಹಸುವನ್ನು ಹೊಂದಿರುವ ವಿಶ್ವದ ಬಹು ದೊಡ್ಡ ಸಂಘಟನೆಗಿಂತಲೂ ಜಿರಲೆಯ ಹೆಸರಿನ ಸಂಘಟನೆ ಹೆಚ್ಚಿನ ಜನರ ಗಮನವನ್ನು ಸೆಳೆದಿದೆ. ಕಡೆಗಣನೆಗೆ ಒಳಗಾದ ಅಸಂಖ್ಯ ಜನರು ಒಂದು ‘ಮೀಮ್’ನಲ್ಲಿ ತಮ್ಮ ಧ್ವನಿಯನ್ನು ಕಂಡುಕೊಂಡಿದ್ದರೆ, ತಪfಪು ಅವರದ್ದಲ್ಲ; ಜಿರಲೆ ಅಥವಾ ಪರಾವಲಂಬಿ ಗುಂಪುಗಳದ್ದೂ ಅಲ್ಲ. ಮುಖದಲ್ಲಿ ಮಂದಹಾಸ ಮೂಡಿಸುವಂತಿರುವ ಈ ಪದಗಳನ್ನು ನಿಷೇಧಿಸುವುದು ಇಲ್ಲವೇ ಬಂಧಿಸುವುದು ಸಾಧ್ಯವಿಲ್ಲ, ಇ.ಡಿ.ಯಿಂದಲೂ.
.ಸಂಪಾದಕೀಯ Podcast: ಯುವಜನರ ಆನ್ಲೈನ್ ಸಂಚಲನ, ಸಮಕಾಲೀನ ರಾಜಕಾರಣಕ್ಕೆ ಎಚ್ಚರಿಕೆ.
ಕ್ಷುಲ್ಲಕ ಎಂದು ಭಾವಿಸಲಾದ ಜಿರಲೆಗಳನ್ನು ಕಂಡು ಯಾರಾದರೂ ಯಾಕಾಗಿ ಹೆದರಬೇಕು? ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಜಿರಲೆಯನ್ನು ಚಿಹ್ನೆಯಾಗಿಸಿಕೊಂಡಿರುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿರುವುದು ಹಾಸ್ಯಾಸ್ಪದವೂ ಅಪಾಯಕಾರಿ ಬೆಳವಣಿಗೆಯೂ ಆಗಿದೆ. ಆನ್ಲೈನ್ ಎನ್ನುವುದು ಏಕಕಾಲದಲ್ಲಿ ವಾಸ್ತವವೂ ಅವಾಸ್ತವವೂ ಆಗಿದೆ. ಅನುಭವ ವೇದ್ಯವಾಗುವ ವಾಸ್ತವ ಸಾಕಷ್ಟಿದ್ದರೂ, ನಾವು ನಿರ್ಲಕ್ಷಿಸಬಹುದಾದ ಅವಾಸ್ತವ ಸಂಗತಿಗಳೂ ಆನ್ಲೈನ್ನಲ್ಲಿ ಸಾಕಷ್ಟಿವೆ. ವಿಚಿತ್ರವಾಗಿಯೂ ತಮಾಷೆಯಾಗಿಯೂ ರೂಪುಗೊಂಡಿರುವ ಪರಿಕಲ್ಪನೆಯನ್ನು ಕಾನೂನಿನ ಮೂಲಕ ಹತ್ತಿಕ್ಕಲು ಪ್ರಯತ್ನಿ ಸುವುದು ನಗೆಪಾಟಲಿನ ವಿಷಯವೇ ಆಗಿದೆ. ಈ ಪ್ರಯತ್ನ ಅಸಹಿಷ್ಣುತೆ, ದಮನಕಾರಿ ಪ್ರವೃತ್ತಿ ಮತ್ತು ಅವಿವೇಕದ ದಿಕ್ಕಿನತ್ತ ಸರ್ಕಾರ ಸಾಗುತ್ತಿರುವ ಅಪಾಯದ ಸೂಚನೆಯಾಗಿದೆ. ತಕ್ಷಣವೇ ಪ್ರತಿಕ್ರಿಯಿಸುವ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯದ ಕಾಳಜಿಗಳು ಹಾಗೂ ಆತಂಕಕ್ಕೆ ದಿಢೀರ್ ಸಂಕೇತದ ರೂಪದಲ್ಲಿ ಜಿರಲೆ ಒದಗಿ ಬಂದಿದೆ. ಆದರೆ, ಈ ಸಂಕೇತ ಸರ್ಕಾರ ವನ್ನು ಬುಡಮೇಲು ಮಾಡಲು ಹೊರಟಿರುವ ‘ಜೆನ್ ಝಿ’ ಅಲೆ ಎಂದು ಯೋಚಿಸು ವುದು ಅತಿರೇಕದ ಪ್ರತಿಕ್ರಿಯೆಯೇ ಆಗುತ್ತದೆ. ಮೀಮ್ ಅಭಿವ್ಯಕ್ತಿಯನ್ನು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಎದುರಾದ ಆತಂಕ ಎಂದು ಭಾವಿಸುವ ಸಂಸ್ಥೆಗಳು ತಮ್ಮ ಘನತೆಯನ್ನು ತಾವೇ ಕುಗ್ಗಿಸಿಕೊಂಡಿವೆ. ವಿನೋದ ಅಥವಾ ವ್ಯಂಗ್ಯವನ್ನು ‘ರಾಷ್ಟ್ರವಿರೋಧಿ’ ಕೃತ್ಯ ಎಂದು ಸರ್ಕಾರ ಭಾವಿಸುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ನಡೆಯಾಗಿದೆ.

ಕೋಟ್ಯಂತರ ಜನರ ಗಮನಸೆಳೆದಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಒಂದು ಪಕ್ಷ ಎಂದು ಕರೆಯುವುದು ಸಾಧ್ಯವಿಲ್ಲ. ಹಾಗೆಯೇ ಒಂದು ಆಂದೋಲನದ ರೂಪದಲ್ಲಿಯೂ ಅದನ್ನು ನೋಡುವುದು ಸಾಧ್ಯವಿಲ್ಲ. ಈ ಬೆಳವಣಿಗೆ ವರ್ತಮಾನದ ರಾಜಕಾರಣವನ್ನು ವಿರೋಧಿಸುವ ಒಂದು ಮನಃಸ್ಥಿತಿ ಆಗಿರಬಹುದು ಹಾಗೆಯೇ ಈ ವಿರೋಧ ಆಡಳಿತ ಪಕ್ಷಕ್ಕೆ ಸೀಮಿತವಾದುದೂ ಅಲ್ಲ. ಅಸ್ತವ್ಯಸ್ತವೂ ಅರಾಜಕವೂ ಆಗಿರಬಹುದಾದ, ಯಾವುದೇ ಸಿದ್ಧಾಂತದ ಬದ್ಧತೆಯಿಲ್ಲದ, ಮೀಮ್ ಸಂಸ್ಕೃತಿ ಪ್ರಧಾನವಾದ ಈ ಅಭಿವ್ಯಕ್ತಿಯು ವ್ಯವಸ್ಥೆಯನ್ನು ವಿರೋಧಿಸುವ ಸ್ವಭಾವ ಹೊಂದಿದೆ. ಸರ್ಕಾರದ ವಿರುದ್ಧ ಆಂದೋಲನ ರೂಪಿಸುವ ಇಂಥ ಬೆಳವಣಿಗೆಗಳನ್ನು ದೇಶ ಈ ಮೊದಲೂ ಕಂಡಿದೆ. ಜಯಪ್ರಕಾಶ್ ನಾರಾಯಣ್ ಹಾಗೂ ಅಣ್ಣಾ ಹಜಾರೆ ಅವರ ಚಳವಳಿಗಳಿಗೆ ಇಂಥ ಮನೋಭಾವವೇ ಚೈತನ್ಯ ತುಂಬಿತ್ತು. ಆದರೆ, ಆ ಆಂದೋಲನಗಳು ನಾಯಕತ್ವ, ಸಂಘಟನೆ ಹಾಗೂ ಗುರಿ ಹೊಂದಿದ್ದವು. ಪ್ರಸಕ್ತ ಆನ್ಲೈನ್ ಸಮೂಹವು ವ್ಯಾಕರಣವಿಲ್ಲದ ಘೋಷಣೆಗಳನ್ನೂ, ಸ್ವಷ್ಟ ವ್ಯಾಖ್ಯಾನವಿಲ್ಲದ ಪರಿಕಲ್ಪನೆಗಳನ್ನೂ ಹೊಂದಿದೆ. ಇಂಥ ಗುಂಪನ್ನು ಹತ್ತಿಕ್ಕಲು ಪ್ರಯತ್ನಿಸುವುದು ಅದರ ಅಸ್ತಿತ್ವವನ್ನು ಸಮರ್ಥಿಸುವ ಹಾಗೂ ಆ ಗುಂಪಿನ ಮಾನ್ಯತೆಯನ್ನು ದೃಢಗೊಳಿಸುವ ಪ್ರಯತ್ನವಾಗಿದೆ. ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ನಾಶ ಮಾಡುವುದು ಕಷ್ಟ. ಅವು ಭೂಗತವಾಗಿ ಪ್ರವಹಿಸುತ್ತವೆ, ರೂಪಾಂತರಗೊಳ್ಳುತ್ತವೆ ಹಾಗೂ ಜಿರಲೆಗಳಂತೆ ಬದುಕುಳಿಯುತ್ತವೆ. ಇತಿಹಾಸಕ್ಕೆ ಜೋತುಬಿದ್ದವರಿಗೆ ಹಾಗೂ ಭವಿಷ್ಯವೆನ್ನುವುದು ಗತದ ಮರುಕಳಿಕೆ ಮಾತ್ರ ಎಂದು ನಂಬುವವರಿಗೆ ಈ ‘ಕೀಟ ದಂಗೆ’ಯು ಒಂದು ಎಚ್ಚರಿಕೆಯಾಗಿದೆ. ಬೇರೆ ಭವಿಷ್ಯಗಳೂ, ಸಾಧ್ಯತೆಗಳೂ, ಪರಿಕಲ್ಪನೆಗಳೂ ಇವೆ ಎನ್ನುವುದನ್ನು ಈ ವಿದ್ಯಮಾನ ಸೂಚಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.