ಆಡಳಿತ ಭಾಷೆ

ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಪ್ರಸಕ್ತ ಆಡಳಿತ ವರ್ಷಕ್ಕೆ ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳಿಗಾಗಿ ₹15 ಲಕ್ಷಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೆರಳಚ್ಚು ಯಂತ್ರಗಳನ್ನು ಕೊಳ್ಳುವುದು, ಕನ್ನಡದಲ್ಲೇ ಪತ್ರ ವ್ಯವಹಾರ, ಬರವಣಿಗೆ ನಡೆಸುವ ನೌಕರರಿಗೆ ಪೋತ್ಸಾಹಧನ ನೀಡುವುದು, ಕಾನೂನು ಪುಸ್ತಕ, ಸೇವಾ ನಿಯಮಗಳ ಅನುವಾದ, ಕನ್ನಡ ಪುರೋಭಿವೃದ್ಧಿ ಕುರಿತ ಗ್ರಂಥ ರಚನೆಗೆ ಬಹುಮಾನ ಈ ಮೊದಲಾದ ಕಾರ್ಯಗಳಿಗೆ ಈ ಹಣ ವಿನಿಯೋಗವಾಗುವುದು. ಭಾಷಾ ಬೆಳವಣಿಗೆ ದೃಷ್ಟಿಯಿಂದ ಈ ಹಲವು ಪ್ರೋತ್ಸಾಹಕ ಕ್ರಮಗಳು ಅಗತ್ಯವೇ ಆದರೂ ಆಡಳಿತಗಾರರ ಮನಃ ಪರಿವರ್ತನೆಗೆ ಈ ಎಲ್ಲವೂ ಎಷ್ಟು ಸಹಕಾರಿ ಎಂಬುದು ವಿಚಾರಾರ್ಹ.

ಅಭಿಮಾನ ಹಣಕೊಟ್ಟು ಕೊಳ್ಳುವ ವಸ್ತುವಲ್ಲ. ಮಹಾರಾಷ್ಟ್ರದಲ್ಲಾಗಲಿ, ತಮಿಳುನಾಡಿನಲ್ಲಾಗಲಿ, ಬಹುಮಾನ, ಬಡ್ತಿ ಆಸೆ ತೋರಿಸಿ ಆಯಾ ರಾಜ್ಯ ಭಾಷೆಗಳನ್ನು ಆಡಳಿತ ಭಾಷೆಗಳಾಗಿ ಮಾಡಲಿಲ್ಲ. ಕನ್ನಡದಲ್ಲೇ ವ್ಯವಹಾರ ನಡೆಸುವುದು ಈ ರಾಜ್ಯದ ಅಧಿಕಾರಿಗಳ ಕರ್ತವ್ಯ. ವಾಸ್ತವವಾಗಿ ಕನ್ನಡದಲ್ಲಿ ವ್ಯವಹರಿಸುವವರಿಗೆ ಬಹುಮಾನ ಕೊಡುವುದಲ್ಲ, ಕನ್ನಡ ಬಳಸದವರಿಗೆ ಎಚ್ಚರಿಕೆ ನೀಡುವುದು ಸೂಕ್ತ ಕ್ರಮ. ಆಡಳಿತದಲ್ಲಿ ಬಳಸುವ ಪದಗಳೆಲ್ಲ ಕನ್ನಡದಲ್ಲೇ ಇರಬೇಕೆಂಬ ಹಠ ಸಹ ಕೈ ಬಿಡಬೇಕಾದುದೇ. ಇನ್ಸ್ಪೆಕ್ಟರ್, ಪೊಲೀಸ್ ಮೊದಲಾದ ಪದಗಳನ್ನು ಪರಿವೀಕ್ಷಕ, ಆರಕ್ಷಕ ಎಂದು ಕ್ಲಿಷ್ಟಗೊಳಿಸುವುದು ಸಹ ಆಗಬೇಕಾದ ಕೆಲಸಕ್ಕೆ ಕಾಲ್ತೊಡಕು. ಇಂಥ ಒಳಕೆಯಲ್ಲಿರುವ ಸಾಮಾನ್ಯ ಪದಗಳನ್ನು ಹೀಗೆಯೇ ಬಳಸಿದರೆ, ಕನ್ನಡದ ಪಾವಿತ್ರ್ಯಕ್ಕೆ ಕುಂದು ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.