ಶಿಸ್ತಿನ ಅಭಿವೃದ್ಧಿ

ಸಾಕಷ್ಟು ದೀರ್ಘಕಾಲ ಮಾರುವವರು ಪ್ರಧಾನವಾಗಿದ್ದ ಭಾರತದ ಮಾರುಕಟ್ಟೆ, ಈಗ ಕೊಳ್ಳುವವರು ಪ್ರಧಾನವಾದ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಕಾರಣ ಕಳೆದ ಕೆಲವು ತಿಂಗಳಿಂದ ಸರ್ಕಾರ ಕೈಗೊಂಡ ಕಟ್ಟುನಿಟ್ಟಾದ ಆರ್ಥಿಕ ಕ್ರಮಗಳು. ಈ ಪರಿಸ್ಥಿತಿ ಉಳಿದುಕೊಂಡು ಬರಬೇಕಾದರೆ ಕೃಷಿಯಂತೆ ಕೈಗಾರಿಕಾ ಉತ್ಪನ್ನ ಹೆಚ್ಚುತ್ತಾ ಹೋಗುವುದು ಅತ್ಯಗತ್ಯ. ಈ ಉದ್ದೇಶ ಸಾಧನೆಗಾಗಿಯೇ ಈ ವರ್ಷದ ಆಯವ್ಯಯದಲ್ಲಿ ಕೈಗಾರಿಕೆಗಳಿಗೆ ಸಾಕಷ್ಟು ರಿಯಾಯಿತಿಗಳನ್ನು ತೋರಿ ಉತ್ತೇಜಿಸಲಾಯಿತ್ತು. ಆದರೂ ಕೂಡ ಕೈಗಾರಿಕಾ ಕ್ಷೇತ್ರ ಇಂದು ಹಿಂಜರಿತವನ್ನು ಎದುರಿಸುತ್ತಿದ್ದು ಸರ್ಕಾರ ಮತ್ತಷ್ಟು ನೆರವಿಗೆ ಬರಬೇಕೆಂಬ ಒತ್ತಾಯ ಈಚೆಗೆ ದೆಹಲಿಯಲ್ಲಿ ನಡೆದ ಭಾರತ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಫೆಡರೇಶನ್ ಸಭೆಯಲ್ಲಿ ವ್ಯಾಪಕವಾಗಿ ಕಂಡುಬಂದಿತು.

ಸಾಲದ ಮೇಲಿನ ನಿಯಂತ್ರಣ ಸಡಿಲಿಸಬೇಕೆಂಬ ವಾಣಿಜ್ಯೋದ್ಯಮಿಗಳ ಹೇಳಿಕೆ ಹಣ ದುಬ್ಬರ ತಡೆದಿರುವ ಸಾಧನೆಯನ್ನೇ ನಿರರ್ಥಕಗೊಳಿಸಬಹುದೆಂಬ ಸರ್ಕಾರಕ್ಕಿದರೆ ಅದು ಸ್ವಾಭಾವಿಕವೇ. ಆದರೂ ನಿಜವಾಗಿಯೂ ಬಿಕ್ಕಟ್ಟು ಎದುರಿಸುತ್ತಿದ್ದ ಉತ್ಪನ್ನ ಮತ್ತು ಕಾರ್ಮಿಕರ ಉದ್ಯೋಗದ ಪ್ರಶ್ನೆ ಅಡಕವಾಗಿದ್ದರೆ ಅಂತಹ ಸಂದರ್ಭಗಳಲ್ಲಿ ಸಾಲದ ಹತೋಟಿಯನ್ನು ಸಡಿಲಗೊಳಿಸುವುದು ಅನಿವಾರ್ಯವಾಗುತ್ತದೆ. ಇದು ದುರುಪಯೋಗವಾದರೆ ಮತ್ತೆ ಅನಿಷ್ಟಪರಂಪರೆ ಆರಂಭವಾಗುತ್ತದೆ. ಈ ದೃಷ್ಟಿಯಿಂದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ರವರು ‘ಸ್ವಯಂ ಪ್ರೇರಣೆಯಿಂದ ಅಭಿವೃದ್ಧಿ ಶಿಸ್ತಿನ್ನು ಕಾಪಾಡಿಕೊಂಡು ಬಂದಿದ್ದರೆ ನಮ್ಮ ಆರ್ಥಿಕ ಬೆಳವಣಿಗೆ ಇನ್ನೂ ಹೆಚ್ಚಿನ ಮಟ್ಟದ್ದಾಗಿರುತ್ತಿತ್ತು’ ಎಂದಿರುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.