ಅಧಿಕಾರಿಗಳ ‘ದರ್ಬಾರು’

ಗ್ರಾಮಾಂತರ ಜನತೆಯ ಸಂಕಷ್ಟಗಳ ನಿವಾರಣೆಯಾಗದೆ ಯಾವ ಯೋಜನೆಯೂ ಅಪೂರ್ಣ ಮತ್ತು ಅನುಪಯುಕ್ತ. ಆದರೆ ಎಲ್ಲ ಆಡಳಿತ ಹಾಗೂ ಆಡಳಿತ ನಿರ್ವಾಹಕ ಸಿಬ್ಬಂದಿ ನಗರ-ಪಟ್ಟಣಗಳಲ್ಲಿ ಕೇಂದ್ರೀಕೃತವಾಗಿದ್ದು, ಗ್ರಾಮಗಳ ಸ್ಥಿತಿಗತಿ, ಗ್ರಾಮಸ್ಥರ ದೂರು ದುಮ್ಮಾನಗಳ ಬಗ್ಗೆ ಅವರಿಗೆ ಬರುವ ವರದಿಗಳೆಲ್ಲ ಕೆಳದರ್ಜೆ ನೌಕರರ ಖಯಾಲಿಯನ್ನು ಅವಲಂಬಿಸಿರುತ್ತವೆ. ಕೇದ ಗೃಹ ಸಚಿವರೆಂದಿರುವಂತೆ ಇಂದು ಉನ್ನತ ಅಧಿಕಾರದಲ್ಲಿರುವವರೆಲ್ಲ ನಗರ ಪೋಷಿತರಾದವರು. ಅವರಿಗೆ ಹಳ್ಳಿಯ ಸ್ಥಿತಿ ಕಂಡು ಆಸಹ್ಯ ಪಡುವ ಮನೋಭಾವವೆ ಹೆಚ್ಚು. ಇದು ನಿವಾರಣೆ ಆಗಬೇಕಾದರೆ ಗ್ರಾಮಾಂತರ ಸ್ಥಿತಿಗತಿಗಳ ಅಧ್ಯಯನ ನಡೆಸಿದವರನ್ನು ಉನ್ನತಾಧಿಕಾರಗಳಿಗೆ ನೇಮಿಸಬೇಕೆಂಬ ಸಲಹೆ ಭವಿಷ್ಯಕ್ಕೆ ಸಂಬಂಧಿಸಿದ್ದು. ಸದ್ಯದಲ್ಲಿ ಜಿಲ್ಲಾಧಿಕಾರಿಗಳು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಜಿಲ್ಲೆಯ ಒಂದೊಂದು ವಿಭಾಗಕ್ಕೆ ಭೇಟಿಕೊಟ್ಟು ‘ದರ್ಬಾರು‘ ನಡೆಸಿ ಜನತೆಯ ಕುಂದುಕೊರತೆಗಳನ್ನು ಪ್ರತ್ಯಕ್ಷವಾಗಿ ಕಂಡು, ಕೇಳಿ ಪರಿಹಾರ ಒದಗಿಸಬೇಕು ಎಂದಿದ್ದಾರೆ. ಹಿಂದಿನ ಕಾಲದ 'ಜಮಾಬಂದಿ' 'ದರ್ಬಾರು'ಗಳನ್ನು ಅವರು ನೆನಸಿಕೊಂಡು ಆ ಪದ ಬಳಸಿದ್ದಾರಾದರೂ ಅಧಿಕಾರಿಗಳು ವಾಸ್ತವವಾಗಿ ನಡೆಸಬೇಕಾದುದು ‘ದರ್ಬಾರು’ ಅಲ್ಲ, ಗ್ರಾಮಾಂತರ ಜನತೆಯ ಪ್ರತ್ಯಕ್ಷ ಸಂಪರ್ಕ. ರೈತ, ಕೂಲಿಯಾಳುಗಳ ಮನೆ ಬಾಗಿಲಿಗೆ ಹೋಗಿ ಸರ್ಕಾರ ಅವನ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳ ಫಲ ಅವನಿಗೆ ಮುಟ್ಟಿದೆಯೆ ಎಂಬುದನ್ನು ಕಾಣಬೇಕು. ಸಣ್ಣ ಪುಟ್ಟ ನೌಕರರಿಂದ ಅವರಿಗೆ ಆಗಿರುವ ಉಪಕಾರ, ಅಪಕಾರ, ಸಹಕಾರ ಎಷ್ಟು ಎಂಬುದನ್ನು ಕೇಳಿ ತಿಳಿದು ತನಿಖೆ ನಡೆಸಬೇಕು. ಆಗ ಮಾತ್ರವೆ ಹಳ್ಳಿಗಾಡಿನ ಸಾಮಾನ್ಯ, ಜನಕೆ ಆಳುವ ಸರ್ಕಾರದಲ್ಲಿ ನಂಬಿಕೆ, ವಿಶ್ವಾಸಗಳು ದೃಢ ವಾದಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.