ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮರ್ಪಕ ಬಳಕೆಯಾಗಲಿ

Last Updated 21 ಫೆಬ್ರುವರಿ 2019, 20:16 IST
ಅಕ್ಷರ ಗಾತ್ರ

ಜಲ ನಿರ್ವಹಣೆ ಮತ್ತು ಸಮರ್ಪಕ ಬಳಕೆಗೆ ಸಂಬಂಧಿಸಿದ ಯೋಜನೆಗಳಿಗಾಗಿ ಭಾರತ ಮತ್ತು ಐರೋಪ್ಯ ಒಕ್ಕೂಟ ಇತ್ತೀಚೆಗೆ ಸಹಕಾರ ಒಪ್ಪಂದ ಮಾಡಿಕೊಂಡಿವೆ. ಇದರ ಅನುಸಾರ, ಭಾರತದಲ್ಲಿ ಏಳು ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಅದರಲ್ಲಿ ಭಾರತದಲ್ಲಿ ಕುಡಿಯುವ ನೀರಿನ ಗುಣಮಟ್ಟ ಹೆಚ್ಚಳ, ಕೊಳಚೆ ನೀರಿನ ಶುದ್ಧೀಕರಣ ಮತ್ತು ಮರುಬಳಕೆ ಸಾಧ್ಯತೆ, ಕೊಳಚೆ ನೀರಿನ ಸಮರ್ಥ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳುವುದು ಸೇರಿವೆ. ಇದು ಪ್ರಸ್ತುತ ಜಾಗತಿಕ ಸ್ಥಿತಿಗತಿಗೆ ಬಹಳ ಅವಶ್ಯ ಎನಿಸಿದರೂ, ಸ್ಥಳೀಯವಾಗಿ ನೀರಿನ ಸಮರ್ಪಕ ಬಳಕೆ ಕುರಿತು ಯೋಚಿಸಿದಾಗ ನನಗೆ ತಕ್ಷಣ ಗೋಚರಿಸಿದ್ದು ನಮ್ಮ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆ.

ಇದು ಸಾರ್ವಜನಿಕರಿಗೆ ಉಪಯುಕ್ತವಾದ ಯೋಜನೆ. ಆದರೆ ಈ ನೀರಿನ ಘಟಕಗಳಲ್ಲಿ ಎಷ್ಟು ಪ್ರಮಾಣದ ನೀರು ಶುದ್ಧೀಕರಣವಾಗುತ್ತದೋ ಅಷ್ಟೇ ಪ್ರಮಾಣದ ನೀರು ನಿರುಪಯುಕ್ತವಾಗಿ ಚರಂಡಿ ಪಾಲಾಗುತ್ತಿದೆ. ಈ ನೀರನ್ನು ಯಾಕೆ ಮರುಬಳಕೆ ಮಾಡಬಾರದು? ಕುಡಿಯಲು ಬಳಸದಿದ್ದರೂ ಉದ್ಯಾನಗಳ ಪೋಷಣೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಬಳಕೆ ಮಾಡಬಹುದು. ಇದರಿಂದ ಬೇಸಿಗೆಯಲ್ಲಾಗುವ ನೀರಿನ ಬವಣೆಯನ್ನು ಸ್ವಲ್ಪ ಮಟ್ಟಿಗಾದರೂ ನಿಭಾಯಿಸಬಹುದು.

-ಸೋಮಶೇಖರ ಯು.ಟಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT