ಆರು ತಿಂಗಳ ಬಂಧನದ ನಂತರ ಪರಿಸರ ಹೋರಾಟಗಾರ ಸೊನಂ ವಾಂಗ್ಚೂಕ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಿರುವ ಘಟನೆ, ಅವರ ಬಂಧನದ ಸಿಂಧುತ್ವದ ಬಗ್ಗೆ ಅನುಮಾನ ಉಂಟುಮಾಡುವುದರ ಜೊತೆಗೆ, ಸಂಬಂಧಿಸಿದ ಪ್ರಕರಣದಲ್ಲಿ ನಾಗರಿಕರ ಹಕ್ಕುಗಳ ಸೀಮಿತ ಅನ್ವಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡುವುದು, ಸ್ಥಳೀಯ ಜನರ ಹಕ್ಕುಗಳ ರಕ್ಷಣೆ ಹಾಗೂ ಆ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಸಾಂವಿಧಾನಿಕ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು 2025ರ ಸೆಪ್ಟೆಂಬರ್ 26ರಂದು ಬಂಧಿಸಲಾಗಿತ್ತು. ಲೇಹ್ನಲ್ಲಿ ಭುಗಿಲೆದ್ದ ಚಳವಳಿಯಲ್ಲಿ ನಾಲ್ವರು ಮೃತಪಟ್ಟ ಘಟನೆಯನ್ನು ನೆಪ ಮಾಡಿಕೊಂಡು ವಾಂಗ್ಚೂಕ್ ಅವರನ್ನು ಬಂಧಿಸಿ, ಜೋಧಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಲಡಾಖ್ನಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಅವರನ್ನು ಈಗ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ವಾಂಗ್ಚೂಕ್ ಅವರನ್ನು ಬಂಧಿಸಲಾಗಿತ್ತು; ಅವರ ವಿರುದ್ಧ ದೇಶವಿರೋಧಿ ಪ್ರತಿಭಟನೆಯ ಆರೋಪ ಹೊರಿಸಲಾಗಿತ್ತು ಹಾಗೂ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವುದಾಗಿ ಆಪಾದಿಸಿ, ಅವರ ವಿದೇಶಿ ಪ್ರವಾಸಗಳ ಉದ್ದೇಶದ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಹಣಕಾಸು ಅಕ್ರಮವನ್ನೂ ಅವರ ಮೇಲೆ ಹೊರಿಸಲಾಗಿತ್ತು. ಈಗ ಅವರ ಬಿಡುಗಡೆ ಸಂದರ್ಭದಲ್ಲಿ ಈ ಎಲ್ಲ ಆಪಾದನೆಗಳು ಯಾವುದೇ ವಿವರಣೆಯಿಲ್ಲದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಆಂದೋಲನ ವನ್ನು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರಖ್ಯಾತ ಪರಿಸರ ಕಾರ್ಯಕರ್ತನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವು ದಾದರೆ, ಇತರರ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಹೊರಿಸುವ, ಹೊರಿಸಿರುವ ಸಾಧ್ಯತೆ ಇದ್ದೇ ಇದೆ.

ವಾಂಗ್ಚೂಕ್ ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೆ ಬರುವುದಕ್ಕೆ ಮೂರು ದಿನಗಳ ಮೊದಲಷ್ಟೇ ಈ ಬಿಡುಗಡೆ ಆಗಿದೆ. ಕೋರ್ಟ್ ಆದೇಶದ ನಂತರ ಬಿಡುಗಡೆ ಮಾಡಬೇಕಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಇದ್ದಕ್ಕಿ ದ್ದಂತೆ ವಾಂಗ್ಚೂಕ್ ಅವರನ್ನು ಬಿಡುಗಡೆ ಮಾಡಿದೆಯೇ ಎನ್ನುವ ಪ್ರಶ್ನೆ ಉಂಟಾಗುತ್ತದೆ. ಬಂಧನಕ್ಕೆ ಸಂಬಂಧಿಸಿದ ಕಾರ್ಯವಿಧಾನದ ಪಾರದರ್ಶಕತೆಯನ್ನು ಹಾಗೂ ವಾಂಗ್ಚೂಕ್ ಅವರ ಭಾಷಣಗಳ ಪ್ರಚೋದನಕಾರಿ ಸ್ವರೂಪವನ್ನು ಅವುಗಳ ಅನುವಾದದ ಮೂಲಕ ಕೋರ್ಟ್ ಪರಿಶೀಲಿಸಿತ್ತು. ಬಂಧಿತರ ಭಾಷಣಗಳನ್ನು ಸರ್ಕಾರ ‘ಅತಿ’ಯಾಗಿ ಅರ್ಥೈಸಿಕೊಂಡಿರಬಹುದು ಎಂದೂ ಹೇಳಿತ್ತು. ನ್ಯಾಯಾಲಯದ ಅವಲೋಕನಗಳು ಹಾಗೂ ಬಂಧನ ಮತ್ತು ಬಿಡುಗಡೆಯ ಸ್ವೇಚ್ಛೆಯ ಸ್ವರೂಪವನ್ನು ಗಮನಿಸಿದರೆ, ಇಡೀ ಪ್ರಕರಣವನ್ನು ಅತ್ಯಂತ ದುರ್ಬಲ ತಳಹದಿಯಲ್ಲಿ ಕಟ್ಟಿರುವಂತಿದೆ. ವ್ಯಕ್ತಿಯೊಬ್ಬರನ್ನು ಆರು ತಿಂಗಳ ಕಾಲ ಬಂಧನದಲ್ಲಿಡುವುದಕ್ಕೆ ಹಾಗೂ ಯಾವುದೇ ವಿಶ್ವಾಸಾರ್ಹ ವಿವರಣೆಯಿಲ್ಲದೆ ಬಿಡುಗಡೆ ಮಾಡುವುದಕ್ಕೆ ವ್ಯವಸ್ಥೆ ಅವಕಾಶ ಕಲ್ಪಿಸುತ್ತದೆ ಎನ್ನುವುದು ನಾಗರಿಕರಿಗೆ ಆತಂಕಕಾರಿ ಸಂದೇಶವನ್ನು ರವಾನಿಸುವಂತಿದೆ. ಆರೋಪಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲು ನ್ಯಾಯಾಲಯ ಅಥವಾ ಆರೋಪಿಗೆ ಅವಕಾಶವನ್ನೇ ಕೊಡದೆ ಬಹಳ ಸುಲಭವಾಗಿ ಬಂಧಿಸಬಹುದು ಮತ್ತು ಬಿಡುಗಡೆ ಮಾಡಬಹುದು ಎನ್ನುವುದನ್ನು ಈ ಪ್ರಕರಣ ಬಹಿರಂಗಪಡಿಸುವಂತಿದೆ. ನಾಗರಿಕನೊಬ್ಬನ ಜೀವನ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳನ್ನು ಒಳಗೊಂಡಿದ್ದ ಈ ಪ್ರಕರಣದಲ್ಲಿನ ಸುದೀರ್ಘ ವಿಚಾರಣೆಗಳು ನ್ಯಾಯವನ್ನು ಮುಂದೂಡಿದವು ಎನ್ನುವುದು ಗಮನಿಸಬೇಕಾದ ಸಂಗತಿ.

ವಾಂಗ್ಚೂಕ್ ಅವರ ಬಿಡುಗಡೆಯು ಪ್ರಕರಣವನ್ನು ಕೊನೆಗೊಳಿಸುವುದಿಲ್ಲ ಹಾಗೂ ಈ ಪ್ರಕರಣಕ್ಕೆ ಮೂಲವಾಗಿರುವ ಸಮಸ್ಯೆಗಳನ್ನು ಅಪ್ರಸ್ತುತಗೊಳಿಸುವುದಿಲ್ಲ. ಕೋರ್ಟ್ ಮುಂದಿರುವ ಅರ್ಜಿ ತಾಂತ್ರಿಕವಾಗಿ ನಿಷ್ಪ್ರಯೋಜಕವಾಗಿದ್ದರೂ, ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಬಂಧಿತರನ್ನು ಬಿಡುಗಡೆ ಮಾಡುವುದರಿಂದ ಅಕ್ರಮ ಬಂಧನದ ಪ್ರಕರಣ ತನ್ನಷ್ಟಕ್ಕೆ ಕೊನೆಗೊಳ್ಳುವುದಿಲ್ಲ ಎಂದು ಕೋರ್ಟ್ ಈ ಹಿಂದಿನ ತೀರ್ಪುಗಳಲ್ಲಿ ಹೇಳಿದೆ ಹಾಗೂ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಪ್ರಸಕ್ತ ಪ್ರಕರಣದಲ್ಲಿ ವಾಂಗ್ಚೂಕ್ ಅವರ ಬಂಧನವನ್ನು ನ್ಯಾಯಾಂಗದ ಸ್ಪಷ್ಟ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕಾಗಿದೆ. ಈ ಪ್ರಕರಣದ ಆಧಾರದಲ್ಲಿ, ಕಾನೂನುಬಾಹಿರ ಬಂಧನಗಳ ವಿರುದ್ಧ ರಕ್ಷಣೆಯನ್ನು ಖಚಿತಪಡಿಸುವುದು ಹಾಗೂ ಕಾನೂನು ಪರಿಶೀಲನೆಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದರಿಂದ ಸರ್ಕಾರವನ್ನು ತಡೆಯುವುದರ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.