ಸಾಬರಮತಿ ನದಿ ದಂಡೆಯಲ್ಲಿರುವ ಅಹಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ‘ಐಸಿಸಿ ಟಿ20 ವಿಶ್ವಕಪ್’ ಪಂದ್ಯದ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸುವುದರೊಂದಿಗೆ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಗಳು ಸೃಷ್ಟಿಯಾಗಿವೆ. ಚುಟುಕು ಕ್ರಿಕೆಟ್ನಲ್ಲಿ ಭಾರತದ ಯುವ ಕ್ರಿಕೆಟಿಗರು ಸಾಧಿಸಿರುವ ಪಾರಮ್ಯವನ್ನು ಈ ಗೆಲುವು ಸಂಕೇತಿಸುವಂತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡದ ಅಧಿಕಾರಯುತ ಗೆಲುವಿನೊಂದಿಗೆ, ಸುಮಾರು ಎರಡು ದಶಕಗಳ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಪ್ರಶಸ್ತಿ ಗೆದ್ದ ಮೊದಲ ಆತಿಥೇಯ ತಂಡ, ಮೂರನೇ ಬಾರಿ ಪ್ರಶಸ್ತಿ ಗಳಿಸಿದ ಏಕೈಕ ದೇಶ ಮತ್ತು ಸತತ ಎರಡು ವರ್ಷ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯ ದಾಖಲೆಗಳು ಸೃಷ್ಟಿಯಾಗಿವೆ. 2023ರಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತ ಕ್ರೀಡಾಂಗಣದಲ್ಲಿಯೇ ಈ ಸಾಧನೆ ಮೂಡಿಬಂದಿರುವುದು ಗಮನಾರ್ಹ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ಕ್ರೀಡಾಂಗಣವನ್ನು ಸ್ತಬ್ಧಗೊಳಿಸುವುದಾಗಿ ಹೇಳಿದ್ದ ಕಿವೀಸ್ ಬಳಗದ ನಾಯಕ ಮಿಚೆಲ್ ಸ್ಯಾಂಟನರ್ ಮತ್ತು ಅವರ ಬಳಗಕ್ಕೆ ಚೊಚ್ಚಿಲ ಪ್ರಶಸ್ತಿಗೆ ಭಾಜನರಾಗುವುದು ಸಾಧ್ಯವಾಗಿಲ್ಲ. ಭಾರತ ತಂಡದ ಆಡಳಿತ ತನ್ನ ಆಟಗಾರರ ಮೇಲೆ ಇಟ್ಟ ವಿಶ್ವಾಸ ಮತ್ತು ನೀಡಿದ ಪ್ರೋತ್ಸಾಹ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಸ್ಥಿರ ಪ್ರದರ್ಶನದಿಂದ ಟೀಕೆಗೊಳಗಾಗಿದ್ದ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಹಾಗೂ ಹೆಚ್ಚು ರನ್ಗಳನ್ನು ಕೊಟ್ಟು ದುಬಾರಿಯಾಗಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಸಾಕಷ್ಟು ಅವಕಾಶಗಳನ್ನು ಕೊಡಲಾಯಿತು. ತಮ್ಮ ಮೇಲಿನ ನಂಬಿಕೆ ಹುಸಿಗೊಳಿಸದ ಸಂಜು ಅವರಂತೂ, ನಿರ್ಣಾಯಕ ಎಂಟರ
ಘಟ್ಟದ ಪಂದ್ಯದಿಂದ ಫೈನಲ್ವರೆಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಭಿಷೇಕ್ ಫೈನಲ್ನಲ್ಲಿ ತಮ್ಮ ಸಾಮರ್ಥ್ಯ ಮೆರೆದರು. ತಂಡದ ಪರ ಹೆಚ್ಚು ವಿಕೆಟ್ ಗಳಿಸಿದ ಹಿರಿಮೆಯನ್ನು ಬೂಮ್ರಾ ಜೊತೆ ವರುಣ್ ಹಂಚಿಕೊಂಡರು.

ಭಾರತ ತಂಡದ ಯಶಸ್ಸು ಒಬ್ಬಿಬ್ಬರು ಆಟಗಾರರ ಮೇಲೆ ಅವಲಂಬಿತಆಗಿರಲಿಲ್ಲ. ಟೂರ್ನಿಯುದ್ದಕ್ಕೂ ಎಲ್ಲ ಪಂದ್ಯಗಳಲ್ಲಿಯೂ ಸಂದರ್ಭಕ್ಕನುಗುಣವಾಗಿ ಪ್ರತಿಯೊಬ್ಬರೂ ತಮ್ಮ ಕಾಣಿಕೆ ನೀಡಿದ್ದಾರೆ. ಸೂರ್ಯಕುಮಾರ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಅಕ್ಷರ್ ಪಟೇಲ್ ಅವರ ಆಟ ಕ್ರೀಡಾಪ್ರಿಯರ ನೆನಪಿನಲ್ಲಿ ದೀರ್ಘಕಾಲ ಉಳಿಯುವಂತಹದ್ದು. ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಂತೂ ನಿರ್ಣಾಯಕ ಹಂತದಲ್ಲಿ ಭಾರತದ ಗೆಲುವಿಗೆ ದಿಕ್ಸೂಚಿಯಾದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಸೂರ್ಯಕುಮಾರ್ ಅವರು ತಮ್ಮ ತಂಡದ ಪ್ರತಿಭಾನ್ವಿತರನ್ನು ದುಡಿಸಿಕೊಂಡ ರೀತಿ ಗಮನಸೆಳೆಯುವಂತಿತ್ತು. 2024ರಿಂದ ಇಲ್ಲಿಯವರೆಗೆ ಪುರುಷರ ವಿಭಾಗದಲ್ಲಿ ಎರಡು ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, 19 ವರ್ಷದೊಳಗಿನವರ ವಿಶ್ವಕಪ್ ಹಾಗೂ ಮಹಿಳೆಯರ ವಿಭಾಗದಲ್ಲಿ ಏಕದಿನ ಚಾಂಪಿಯನ್ಷಿಪ್ ಮತ್ತು 19 ವರ್ಷದೊಳಗಿನವರ ವಿಶ್ವಕಪ್ ಕಿರೀಟಗಳನ್ನು ಭಾರತ ಜಯಿಸಿದೆ. ಈ ಮೂಲಕ ಜಾಗತಿಕ ಕ್ರಿಕೆಟ್ನ ಶಕ್ತಿಕೇಂದ್ರವಾಗಿ ಹೊರಹೊಮ್ಮಿದೆ.

ಟೂರ್ನಿಯ ಆರಂಭದಿಂದಲೂ ಭಾರತ ಪ್ರಶಸ್ತಿ ಗಳಿಸುವ ನೆಚ್ಚಿನ ತಂಡವಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ತಂಡಗಳ ಪ್ರದರ್ಶನವೂ ಗಮನಾರ್ಹವಾಗಿತ್ತು. ವೆಸ್ಟ್ ಇಂಡೀಸ್ ತಂಡವಂತೂ ತನ್ನ ಗತವೈಭವವನ್ನು ನೆನಪಿಸುವಂತೆ ಪ್ರದರ್ಶನ ನೀಡಿದೆ. ಜಿಂಬಾಬ್ವೆ ತಂಡ ನೀಡಿದ ಪೈಪೋಟಿಯೂ ಗಮನಾರ್ಹ. ಅಫ್ಗಾನಿಸ್ತಾನವೂ ಎದುರಾಳಿಗಳಿಗೆ ಉತ್ತಮ ಪೈಪೋಟಿಯೊಡ್ಡಿತು. ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡ ಗುಂಪು ಹಂತದಲ್ಲಿಯೇ ನಿರ್ಗಮಿಸಿದ್ದು ಅಚ್ಚರಿ ಮೂಡಿಸಿತು. ಉದಯೋನ್ಮುಖ ತಂಡಗಳಾದ ನೇಪಾಳ, ಇಟಲಿ, ನಮೀಬಿಯಾ, ಅಮೆರಿಕ, ನೆದರ್ಲೆಂಡ್ಸ್ ತಂಡಗಳು ತಮ್ಮ ಹೆಜ್ಜೆಗುರುತು ಮೂಡಿಸಿರುವುದು ಜಾಗತಿಕವಾಗಿ ಕ್ರಿಕೆಟ್ ಬೆಳವಣಿಗೆಗೆ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಈ ಟೂರ್ನಿಯೂ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಬಾಂಗ್ಲಾದ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಹೊರಹಾಕಿದ್ದನ್ನು ವಿರೋಧಿಸಿ ಆ ದೇಶವು ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸಿತು. ಬಾಂಗ್ಲಾ ಬೆಂಬಲಕ್ಕೆ ನಿಂತ ಪಾಕಿಸ್ತಾನವು ಭಾರತದ ಎದುರಿನ ಪಂದ್ಯ ಆಡುವುದಿಲ್ಲವೆಂದು ಘೋಷಿಸಿತು. ನಂತರ ನಿಲುವು ಬದಲಿಸಿ ಆಡಿದರೂ, ಗಮನಾರ್ಹ ಸಾಧನೆಯನ್ನು ಮಾಡುವುದು ಪಾಕ್ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿಯೂ ಭಾರತ–ಪಾಕಿಸ್ತಾನ ತಂಡಗಳ ಆಟಗಾರರು ಹಸ್ತಲಾಘವ ಮಾಡದಿರುವ ಮೂಲಕ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ಮತ್ತೊಮ್ಮೆ ನಡೆದುಕೊಂಡರು. ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಅನುಭವಿಸಿದ್ದ ವೈಫಲ್ಯದಿಂದಾಗಿ ಅಪಾರ ಟೀಕೆಗೆ ಒಳಗಾಗಿದ್ದ ಕೋಚ್ ಗೌತಮ್ ಗಂಭೀರ್ ಅವರಿಗೆ ಪ್ರಸಕ್ತ ಗೆಲುವು ಹುಮ್ಮಸ್ಸು ತುಂಬುವಂತಿದೆ. ವಿಶ್ವಕಪ್ ಜಯವನ್ನು ಅವರು ನಿಕಟಪೂರ್ವ ಕೋಚ್ ರಾಹುಲ್ ದ್ರಾವಿಡ್ ಮತ್ತು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ ಅರ್ಪಿಸಿರುವುದು ಅರ್ಥಪೂರ್ಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.