ವಾಸಿಯಾಗದ ‘ವ್ಯಾಧಿ’

7

ವಾಸಿಯಾಗದ ‘ವ್ಯಾಧಿ’

Published:
Updated:

ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವೈದ್ಯೆಗೆ ಕುಡಿಯಲು ನೀರು ಕೊಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಅಧ್ಯಕ್ಷರು ನಿರಾಕರಿಸಿರುವುದು (ಪ್ರ.ವಾ., ಆ. 2) ವರದಿಯಾಗಿದೆ. ದೇಶದಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡಿದ ಮಹಿಳೆ ದಲಿತ ವರ್ಗಕ್ಕೆ ಸೇರಿದವಳು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಊಟವೇ ನಿರಾಕರಿಸಿದ ಉದಾಹರಣೆಗಳು ಸಾಕಷ್ಟಿವೆ. ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಇಂಥ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುವುದನ್ನು ಗಮನಿಸಿದರೆ, ಅಸ್ಪೃಶ್ಯತೆ ಎನ್ನುವುದು ಈ ನೆಲಕ್ಕೆ ಅಂಟಿಕೊಂಡಿರುವ ದೊಡ್ಡ ವ್ಯಾಧಿಯಾಗಿದ್ದು, ಇದು ನಿವಾರಣೆಯಾಗುವ ಸಾಧ್ಯತೆ ಇಲ್ಲವೇನೋ ಎಂದೆನಿಸುತ್ತದೆ. ಅಸೃಶ್ಯತೆಯನ್ನು ಆಚರಿಸುವ ಕೊಳಕು ಮನಸ್ಸುಗಳು ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೂ ಈ ವ್ಯಾಧಿ ವಾಸಿಯಾಗದು.

–ಎಸ್.ಎಸ್. ಭಾವಿಕಟ್ಟಿ, ರೇವೂರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !