ಸೌರ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಿ

7

ಸೌರ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಿ

Published:
Updated:

ವಿದ್ಯುತ್ ಉತ್ಪಾದನೆಗಾಗಿ ನಮ್ಮ ಸರ್ಕಾರ ಬಹಳಷ್ಟು ಹಣ ವ್ಯಯ ಮಾಡುತ್ತಿದೆ. ಆದರೂ ರಾಜ್ಯದ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಸಾಂಪ್ರದಾಯಿಕ ಮಾರ್ಗವನ್ನೇ ಅನುಸರಿಸುವುದನ್ನು ಬಿಟ್ಟು, ವಿದ್ಯುತ್‌ ಉತ್ಪಾದನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಾದ್ದು ಅಗತ್ಯ.

ಸೌರಶಕ್ತಿಯನ್ನು ಬಳಸಿ, ಜನರ ಸಹಭಾಗಿತ್ವದಲ್ಲಿ ವಿದ್ಯುತ್‌ ಉತ್ಪಾದಿಸುವುದು ಈ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಚಿಂತನೆ ಆಗಬಹುದು. ನಗರ, ಹಳ್ಳಿಗಳ ಪ್ರತಿ ಮನೆಯ ಚಾವಣಿ ಮೇಲೆ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಸರ್ಕಾರ ರೂಪಿಸಿದರೆ, ವಿದ್ಯುತ್ ಬರವನ್ನು ನೀಗಿಸಲು ಸಾಧ್ಯ.

ಸೌರವಿದ್ಯುತ್ ಫಲಕಗಳು ಸ್ವಲ್ಪ ದುಬಾರಿ ಆಗಿರುವುದರಿಂದ, ಅವುಗಳ ವೆಚ್ಚದ ಒಂದು ಭಾಗವನ್ನು ಸರ್ಕಾರವು ಸಹಾಯಧನದ ರೂಪದಲ್ಲಿ ನೀಡಿ, ವೆಚ್ಚದ ಉಳಿದ ಭಾಗವನ್ನು ಸ್ಥಳೀಯ ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ಕೊಡಿಸಿ ಸರ್ಕಾರವೇ ಮನೆಗಳ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಬಹುದು. ಅದರಿಂದ ಉತ್ಪಾದನೆಯಾಗುವ ವಿದ್ಯುತ್ತಿನಲ್ಲಿ ಆಯಾ ಮನೆಯವರು ಬಳಸಿಕೊಂಡು ಉಳಿದದ್ದನ್ನು ಸರ್ಕಾರ ಖರೀದಿಸಬಹುದು. ಖರೀದಿಸಿದ ವಿದ್ಯುತ್ತಿನ ಮೊಬಲಗನ್ನು ಮನೆಯವರ ಹೆಸರಿನಲ್ಲಿ ಪಡೆದ ಸಾಲದ ಮರುಪಾವತಿಗೆ ಬಳಸಬಹುದು. ಸಾಲ ತೀರಿದ ಮೇಲೆ ಅವರ ಖಾತೆಗೆ ಹಣವನ್ನು ಜಮೆ ಮಾಡಬಹುದು.

ಹೀಗೆ ಮಾಡುವುದರಿಂದ ಹಲವು ಲಾಭಗಳೂ ಇವೆ. ವಿದ್ಯುತ್‌ ಉತ್ಪಾದನೆಗಾಗಿ ಸರ್ಕಾರ ಬಂಡವಾಳ ಹೂಡಿದರೆ ಸಾಕು, ನಿರ್ವಹಣೆಯನ್ನು ಫಲಾನುಭವಿ ಮಾಡುತ್ತಾನೆ. ಪ್ರತಿ ಕುಟುಂಬಕ್ಕೂ ಆದಾಯದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಆಗುತ್ತದೆ ಮತ್ತು ವಿದ್ಯುತ್ತಿಗಾಗಿ ಸರ್ಕಾರದ ಮೇಲಿನ ಜನರ ಅವಲಂಬನೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವುದೇ?

ಶಿವಕುಮಾರ ಯರಗಟ್ಟಿಹಳ್ಳಿ , ಹೊದಿಗೆರೆ, ಚನ್ನಗಿರಿ ತಾಲ್ಲೂಕು

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !