ದೇಶದ ಅತ್ಯಂತ ಪ್ರಸಿದ್ಧ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಹಾಗೂ ‘ಭಾರತ ಕುಸ್ತಿ ಫೆಡರೇಷನ್’ (ಡಬ್ಲ್ಯುಎಫ್ಐ) ನಡುವಿನ ಸಂಘರ್ಷವು, ರಾಜಕೀಯ ಮತ್ತು ಪುರುಷಪ್ರಾಧಾನ್ಯ ಮನಃಸ್ಥಿತಿ ಮೇಲುಗೈ ಸಾಧಿಸಿರುವ ವ್ಯವಸ್ಥೆಯಲ್ಲಿ ಮಹಿಳಾ ಕ್ರೀಡಾಪಟುಗಳು ಎದುರಿಸಬೇಕಾದ ಸಂಕಷ್ಟಕ್ಕೆ ಮತ್ತೊಂದು ನಿದರ್ಶನವಾಗಿದೆ. ಡಬ್ಲ್ಯುಎಫ್ಐ ಮತ್ತು ಅದರ ಮಾಜಿ ಮುಖ್ಯಸ್ಥ, ಬಿಜೆಪಿ ಮುಖಂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಧ್ವನಿಯೆತ್ತಿದ ನಂತರ, ಎರಡು ಕಡೆಯಿಂದಲೂ ವಿನೇಶ್ ಅವರ ಮೇಲೆ ದಾಳಿ ನಡೆದಿದೆ. ತಾಯ್ತನದ ವಿರಾಮದ ನಂತರ ಸ್ಪರ್ಧಾತ್ಮಕ ಕುಸ್ತಿಕಣಕ್ಕೆ ಮರಳಲು ವಿನೇಶ್ ಪ್ರಯತ್ನಿಸುತ್ತಿದ್ದು, ‘ರಾಷ್ಟ್ರೀಯ ಓಪನ್ ರ್ಯಾಂಕಿಂಗ್ ಟೂರ್ನಿ’ಯಲ್ಲಿ ಭಾಗವಹಿಸಲು ಡಬ್ಲ್ಯುಎಫ್ಐ ಅವರಿಗೆ ಅವಕಾಶ ನಿರಾಕರಿಸಿತು. ನಿವೃತ್ತ ಆಟಗಾರರು ಸ್ಪರ್ಧಾಕಣಕ್ಕೆ ಮರಳಲು ನಿರ್ಧರಿಸಿದಲ್ಲಿ, ಆ ವಿಷಯವನ್ನು ‘ವಿಶ್ವ ಕುಸ್ತಿ ಸಂಸ್ಥೆ’ಗೆ (ಯುಡಬ್ಲ್ಯುಡಬ್ಲ್ಯು) ಆರು ತಿಂಗಳ ಮೊದಲು ತಿಳಿಸಿರಬೇಕು. ಆ ನಿಯಮವನ್ನು ಪಾಲಿಸದೆ ಹೋದುದೇ ವಿನೇಶ್ ಅನರ್ಹತೆಗೆ ಕಾರಣ ಎಂದು ಡಬ್ಲ್ಯುಎಫ್ಐ ಹೇಳುತ್ತಿದೆ. ಆದರೆ, ನಿಯಮಾನುಸಾರ ಯುಡಬ್ಲ್ಯುಡಬ್ಲ್ಯುಗೆ ಸಾಕಷ್ಟು ಮೊದಲೇ ಮಾಹಿತಿ ನೀಡಿರುವುದಾಗಿ ವಿನೇಶ್ ಸ್ಪಷ್ಟಪಡಿಸಿದ್ದಾರೆ. ಶಿಸ್ತು–ನಿಯಮಗಳ ಉಲ್ಲಂಘನೆ ಹಾಗೂ ಡೋಪಿಂಗ್ ಪರೀಕ್ಷಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಡಬ್ಲ್ಯುಎಫ್ಐ ವಿನೇಶ್ ಅವರಿಗೆ ನೋಟಿಸ್ ನೀಡಿದ್ದು, ಅರ್ಹತಾ ಪ್ರಕ್ರಿಯೆಯ ಹೊರತಾಗಿ ಉಳಿದ ಯಾವುದರ ಬಗ್ಗೆಯೂ ಅವರು ಉತ್ತರಿಸಿಲ್ಲ ಎಂದು ಒಕ್ಕೂಟ ಆರೋಪಿಸಿದೆ.

ಉತ್ತರಪ್ರದೇಶದ ಗೊಂಡಾದಲ್ಲಿ ನಡೆದ ‘ರಾಷ್ಟ್ರೀಯ ಓಪನ್ ರ್ಯಾಂಕಿಂಗ್ ಟೂರ್ನಿ’ಯಲ್ಲಿ ಭಾಗವಹಿಸಲು ವಿಧಿಸಿದ ನಿಷೇಧ ಹಾಗೂ ಡಬ್ಲ್ಯುಎಫ್ಐ ನೀಡಿರುವ ನೋಟಿಸ್ ಹಿಂದೆ ದುರುದ್ದೇಶವಿದೆ; ವಿನೇಶ್ ಅವರು ಸ್ಪರ್ಧಾತ್ಮಕ ಕುಸ್ತಿಕಣಕ್ಕೆ ಮರಳುವುದನ್ನು ತಡೆಯುವುದಕ್ಕಾಗಿ ಹಾಗೂ 2028ರ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದನ್ನು ತಪ್ಪಿಸಲಿಕ್ಕಾಗಿ ಪಿತೂರಿ ನಡೆಸಲಾಗುತ್ತಿದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ. ವಿನೇಶ್ ಮತ್ತು ಇತರ ಕುಸ್ತಿಪಟುಗಳು 2023ರಲ್ಲಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು. ಬ್ರಿಜ್ ಭೂಷಣ್ ಸಿಂಗ್ರ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಲ್ಲಿ ತಾವೂ ಒಬ್ಬರು ಎಂದು ಇತ್ತೀಚೆಗಷ್ಟೇ ವಿನೇಶ್ ಹೇಳಿಕೊಂಡಿದ್ದರು. ಈಗಿನ ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ರ ಆಪ್ತವರ್ಗಕ್ಕೆ ಸೇರಿದ್ದಾರೆ. ಪ್ರಸ್ತುತ ವಿನೇಶ್ ಅವರ ಮೇಲೆ ಡಬ್ಲ್ಯುಎಫ್ಐ ತೆಗೆದುಕೊಂಡಿರುವ ಶಿಸ್ತುಕ್ರಮಗಳು ಜನರು ನಂಬುವಂತಿರದೆ, ಆಟಗಾರ್ತಿಯನ್ನು ಗುರಿಯಾಗಿಸಿಕೊಂಡು ಸಂಚು ನಡೆಯುತ್ತಿರುವ ಅನುಮಾನ ಉಂಟುಮಾಡುವಂತಿವೆ. ಡಬ್ಲ್ಯುಎಫ್ಐ ಶಿಸ್ತುಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ಅವರು ಸಿದ್ಧತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೆಲವು ಅಥ್ಲೀಟ್ಗಳು ಒತ್ತಾಯಿಸಿದ್ದಾರೆ. ಆದರೆ, ಮಹಿಳಾ ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟಿಸಿದಾಗಲೇ ತಮ್ಮ ಪಕ್ಷದ ಪ್ರಬಲ ನಾಯಕನ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ ಸರ್ಕಾರ, ಈಗ ಅಥ್ಲೀಟ್ಗಳ ನೆರವಿಗೆ ಬರುತ್ತದೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ.

ಹದಿನೈದು ಅಂತರರಾಷ್ಟ್ರೀಯ ಪದಕಗಳನ್ನು ಜಯಿಸಿರುವ ವಿನೇಶ್ ದೇಶಕ್ಕೆ ಕೀರ್ತಿ ತಂದಿರುವ ಆಟಗಾರ್ತಿ. 2024ರ ಪ್ಯಾರಿಸ್ ಒಲಿಂಪಿಕ್ಸ್ನ 50 ಕೆ.ಜಿ. ವಿಭಾಗದಲ್ಲಿ ಅವರು ಫೈನಲ್ಸ್ ಪ್ರವೇಶಿಸಿದ್ದರು. ವಿಶ್ವದ ಅತ್ಯುತ್ತಮ ಮಹಿಳಾ ಕುಸ್ತಿಪಟುಗಳ ಸಾಲಿನಲ್ಲಿ ಅವರನ್ನು ಗುರ್ತಿಸಲಾಗುತ್ತಿದೆ. ಇಂಥ ಆಟಗಾರ್ತಿ ಸ್ಪರ್ಧಾಕಣಕ್ಕೆ ಮರಳಲು ಬಯಸಿದಾಗ, ಅವರ ಬೆಂಬಲಕ್ಕೆ ಒಕ್ಕೂಟ ನಿಲ್ಲಬೇಕು. ಆದರೆ, ರಾಜಕೀಯ ಹಾಗೂ ವ್ಯಕ್ತಿಗತ ಕಾರಣಗಳಿಗಾಗಿ ಅವರನ್ನು ವಿರೋಧಿಸಲಾಗುತ್ತಿದೆ. ಈ ವಿರೋಧದ ಹಿನ್ನೆಲೆಯಲ್ಲಿ, ಹರಿಯಾಣದಲ್ಲಿ ಅವರು ಕಾಂಗ್ರೆಸ್ನ ಶಾಸಕಿ ಆಗಿರುವುದನ್ನೂ ಗಮನಿಸಬೇಕಾಗಿದೆ. ಯಾವುದೇ ಕ್ರೀಡೆಗೆ ಸಂಬಂಧಿಸಿದ ಆಡಳಿತವು ವೃತ್ತಿಪರವಾಗಿ, ಪಾರದರ್ಶಕವಾಗಿ ಹಾಗೂ ವಿಶ್ವಾಸಾರ್ಹವಾಗಿ ಇರುವುದು ಅಗತ್ಯ. ಆಗಷ್ಟೇ ಅದರ ಬಗ್ಗೆ ಆಟಗಾರರಿಗೆ ನಂಬಿಕೆ ಹಾಗೂ ಸುರಕ್ಷತೆಯ ಭಾವನೆ ಮೂಡುವುದು ಸಾಧ್ಯ. ವಿನೇಶ್ ಫೋಗಟ್ ಅವರಂಥ ವಿಶ್ವದರ್ಜೆಯ ಆಟಗಾರ್ತಿಯನ್ನೇ ಹೀನಾಯವಾಗಿ ನಡೆಸಿಕೊಳ್ಳುವುದಾದರೆ, ಸಾಮಾನ್ಯ ಕ್ರೀಡಾಪಟುಗಳು ಏನನ್ನು ತಾನೆ ನಿರೀಕ್ಷಿಸಬಹುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.