50 ವರ್ಷಗಳ ಹಿಂದೆ: ಇರಾಕಿನಲ್ಲಿ ರಕ್ತರಹಿತ ಕ್ರಾಂತಿ: ಅಧ್ಯಕ್ಷ ಅರೀಫ್‌ರ ಪದಚ್ಯುತಿ

7
ವಾರ

50 ವರ್ಷಗಳ ಹಿಂದೆ: ಇರಾಕಿನಲ್ಲಿ ರಕ್ತರಹಿತ ಕ್ರಾಂತಿ: ಅಧ್ಯಕ್ಷ ಅರೀಫ್‌ರ ಪದಚ್ಯುತಿ

Published:
Updated:

ಇರಾಕಿನಲ್ಲಿ ರಕ್ತರಹಿತ ಕ್ರಾಂತಿ: ಅಧ್ಯಕ್ಷ ಅರೀಫ್‌ರ ಪದಚ್ಯುತಿ

ಬಾಗ್ದಾದ್, ಜು. 17– ಇರಾಕಿನಲ್ಲಿ ಮಂಗಳವಾರ ರಾತ್ರಿ ನಡೆದ ರಕ್ತರಹಿತ ಕ್ಷಿಪ್ರ ಕ್ರಾಂತಿಯಲ್ಲಿ ಅಧ್ಯಕ್ಷ ಅಬ್ದುಲ್ ರಹಮಾನ್ ಅರೀಫ್‌ರವರ ಆಡಳಿತವನ್ನು ಪದಚ್ಯುತಗೊಳಿಸಲಾಯಿತು.

ಹೆಚ್.ಎಂ.ಟಿ.ಯಲ್ಲಿ ಲಾಕೌಟ್ ಘೋಷಣೆ

ಬೆಂಗಳೂರು, ಜು. 17– ಸರ್ಕಾರಿ ಕೈಗಾರಿಕೆಯಾದ ಹಿಂದೂಸ್ತಾನ್ ಮೆಷೀನ್ ಟೂಲ್ಸ್ ಕಾರ್ಖಾನೆಯ ಆಡಳಿತ ವರ್ಗ ಇಂದು ರಾತ್ರಿ ‘ಲಾಕ್ ಔಟ್’ ಘೋಷಿಸಿತು.

ಶ್ರೀ ಹೆಗಡೆಗೆ ಗಡಿ ವಿವಾದ ಖಾತೆ

ಬೆಂಗಳೂರು, ಜು. 17– ಅರ್ಥ ಸಚಿವ ಹಾಗೂ ಯುವಜನ ವಿಚಾರಗಳ  ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರಿಗೆ ಗಡಿ ವಿವಾದ ಖಾತೆಯನ್ನು ವಹಿಸಿಕೊಡಲಾಗಿದೆ. ಸಣ್ಣ ನೀರಾವರಿ ಸ್ಟೇಟ್ ಸಚಿವ ಶ್ರೀ ಎ.ಜಿ. ದೊಡ್ಡಮೇಟಿ ಅವರಿಗೆ ರಾಜಕೀಯ ಸಂತ್ರಸ್ತರ ಮಾಸಾಶನ ವಿಚಾರವನ್ನು ನೋಡಿಕೊಳ್ಳಲು ಅಧಿಕಾರ ನೀಡಲಾಗಿದೆ.

ಇದುವರೆವಿಗೂ ಈ ಎರಡು ಖಾತೆಗಳನ್ನು ಇಟ್ಟುಕೊಂಡಿದ್ದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಖಾತೆಗಳ ಪುನರ್ ವಿಂಗಡಣೆಯನ್ನು ಪ್ರಕಟಿಸಿದರು.

ಪಾಕ್‌ಗೆ ರಷ್ಯ ಶಸ್ತ್ರ: ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆ

ನವದೆಹಲಿ, ಜು. 17– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ರಷ್ಯ ಸರಕಾರದ ನಿರ್ಧಾರ ಕುರಿತು ಇಂದು ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯು ಸಂಕ್ಷಿಪ್ತವಾಗಿ ಚರ್ಚಿಸಿತೆಂದು ತಿಳಿದು ಬಂದಿದೆ. ರಷ್ಯ ಸರಕಾರದ ಈ ನಿರ್ಧಾರದ ಸಾಧಕ– ಬಾಧಕಗಳನ್ನು ಸಭೆಯ ಮೊದಲಲ್ಲಿ ಪ್ರಧಾನಿ ಅವರು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದರೆಂದೂ ಗೊತ್ತಾಗಿದೆ.

ಇನ್ನು ಮೂರು ವರ್ಷಗಳಲ್ಲಿ ಗೋಧಿ ಉತ್ಪಾದನೆಯಲ್ಲಿ ಭಾರತ ಸ್ವಯಂ ಪೂರ್ಣ

ನವದೆಹಲಿ, ಜು. 17– ಇನ್ನು ಮೂರು ವರ್ಷಗಳಲ್ಲಿ ಗೋಧಿಯನ್ನು ವಿದೇಶಗಳಿಂದ ತರಿಸಿಕೊಳ್ಳುವುದನ್ನು
ಭಾರತ ನಿಲ್ಲಿಸಲು ಸಾಧ್ಯ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !