ಶನಿವಾರ, 20–7–1968 : ನಗರ ಡೈರಿ ನೌಕರರ ಮಿಂಚಿನ ಮುಷ್ಕರ

7
ಹಿಂದೆ

ಶನಿವಾರ, 20–7–1968 : ನಗರ ಡೈರಿ ನೌಕರರ ಮಿಂಚಿನ ಮುಷ್ಕರ

Published:
Updated:

ನಗರ ಡೈರಿ ನೌಕರರ ಮಿಂಚಿನ ಮುಷ್ಕರ: ಮತ್ತೆ ಕೆಲಸ ಆರಂಭ

ಬೆಂಗಳೂರು, ಜು. 19– ಬೆಂಗಳೂರು ಡೈರಿಯ ಸುಮಾರು 150 ಮಂದಿ ನೌಕರರು ಇಂದು ಮಧ್ಯಾಹ್ನದಿಂದ ಹೂಡಿದ ಮಿಂಚಿನ ಮುಷ್ಕರವು ರಾಜ್ಯದ ಪಶುಸಂಗೋಪನಾ ಸಚಿವ ಶ್ರೀ ಜೆ.ಬಿ. ಶಂಕರರಾವ್ ಅವರ ಮಧ್ಯಸ್ಥಿಕೆಯಿಂದ ಮಧ್ಯರಾತ್ರಿ ಸಮಯಕ್ಕೆ ಮುಕ್ತಾಯಗೊಂಡಿತು.

12 ಗಂಟೆಗಳ ಕಾಲದ ಮಿಂಚಿನ ಮುಷ್ಕರದ ಪರಿಣಾಮವಾಗಿ ಇಂದು ಸಂಜೆ ಹಾಲು ವಿತರಣೆ ಆಗದೆ ಗ್ರಾಹಕರು ತೊಂದರೆಗೀಡಾದರು.

ಆಂಧ್ರದ ವಾರ್ತಾಮಂತ್ರಿ ರಾಜೀನಾಮೆಗೆ ಒತ್ತಾಯ

ಹೈದರಾಬಾದ್, ಜು. 19– ಪ್ರಚಾರ ಮತ್ತು ಕಾರ್ಮಿಕ ಸಚಿವ ಕೊಂಡ ಲಕ್ಷ್ಮಣ ಬಾಪೂಜಿ ಅವರು ರಾಜೀನಾಮೆ ನೀಡಬೇಕೆಂದು ಇಂದು ಆಂಧ್ರ ವಿಧಾನ ಪರಿಷತ್ತಿನಲ್ಲಿ ಒತ್ತಾಯ ಮಾಡಲಾಯಿತು.

‘ಇಲ್ಲಿಂದ 30 ಮೈಲಿ ದೂರದಲ್ಲಿರುವ ಬಿಬ್‌ನಗರದಲ್ಲಿ ಕಳೆದ ಮಾರ್ಚ್ ತಿಂಗಳು ಸಚಿವರ ಕಾರು ಹುಡುಗನೊಬ್ಬನಿಗೆ ಡಿಕ್ಕಿ ಹೊಡೆಯಿತು. ಬಾಲಕ ಮೃತಪಟ್ಟ. ಆದರೆ ಸಚಿವರು ಅಂಥ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಅನುಸರಿಸದೆ ಕಾನೂನು ಉಲ್ಲಂಘಿಸಿದರು’. ಇದು ಸಚಿವರ ವಿರುದ್ಧ ಪಕ್ಷದ ನಾಯಕರು ಮಾಡಿದ ಆರೋಪ.

ಹೊಡೆದು ಮೂತ್ರ ಮಾಡಿಸಿ, ಕುಡಿಯುವಂತೆ ಮಾಡಿದರು

ಮಧುಗಿರಿ, ಜು. 19– ‘1967ರ ಡಿಸೆಂಬರ್ 2 ರಂದು ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಮಧುಗಿರಿ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಕೂರಿಸಿದ್ದ ಬಂಧಿತರಲ್ಲಿ ನಾನೂ ಒಬ್ಬ. ಔಷಧ ಕುಡಿಸುತ್ತೇವೆ– ಎಂದು ಬೇವಿನ ಮರದ ಬಳಿಗೆ ಪೋಲೀಸರು ನನ್ನನ್ನು ಕರೆದೊಯ್ದರು. ಹೊಡೆದು ಮೂತ್ರ ಮಾಡಿಸಿದರು. ಒದ್ದು ಮೂತ್ರ ಕುಡಿಯುವಂತೆ ಮಾಡಿದರು’ ಎಂಬುದಾಗಿ ತಗ್ಗಿಹಳ್ಳಿಯ ರೈತ ಶ್ರೀ ಬಂಡಪ್ಪನವರು ಇಂದು ಇಲ್ಲಿ ನರೋನಾ ಕಮಿಷನ್ ಮುಂದೆ ಸಾಕ್ಷ್ಯ ನೀಡುತ್ತಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !