ಗುರುವಾರ , ಡಿಸೆಂಬರ್ 5, 2019
22 °C

ಭಾನುವಾರ, 16–11–1969

Published:
Updated:

ಮಧ್ಯಂತರ ಚುನಾವಣೆಗೆ ಲೋಕಸಭೆ ವಿರೋಧ ಪಕ್ಷಗಳ ಅಸಮ್ಮತಿ
ನವದೆಹಲಿ, ನ. 15–
ರಾಷ್ಟ್ರದ ಮತದಾರರಿಗೆ ತಮ್ಮ ನೆಚ್ಚಿನ ನಾಯಕರನ್ನಾರಿಸುವ ಅವಕಾಶ ನೀಡುವ ಮಧ್ಯಕಾಲೀನ ಚುನಾವಣೆ ನಡೆಸುವುದಕ್ಕೆ ವಿರೋಧ ಪಕ್ಷಗಳು ಅಸಮ್ಮತಿ ಸೂಚಿಸಿವೆ.

ಸಂಸತ್ತಿನಲ್ಲಿ ಇಂದಿರಾ ನೇತೃತ್ವದ ಸರ್ಕಾರ ಪರಾಭವಗೊಂಡರೂ ರಾಷ್ಟ್ರಪತಿ ಅವರು ಲೋಕಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಆದೇಶ ನೀಡುವ ಮುನ್ನ ಬೇರೊಂದು ಸರ್ಕಾರವನ್ನು ರಚಿಸುವ ಸಾಧ್ಯತೆಯನ್ನು ಕಂಡುಕೊಳ್ಳಬೇಕು ಎಂದು ಬಹುತೇಕ ವಿರೋಧ ಪಕ್ಷಗಳ ನಾಯಕರು ಪ್ರತ್ಯೇಕವಾದ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.

ಖಾನ್‌ಗೆ ನೆಹರೂ ಪ್ರಶಸ್ತಿ
ನವದೆಹಲಿ, ನ. 15–
‘ಖಾನ್ ಅಬ್ದುಲ್ ಗಫಾರ್ ಖಾನ್‌ರಿಗೆ ಅಂತರರಾಷ್ಟ್ರೀಯ ಅನ್ಯೋನ್ಯತೆಗಾಗಿ ಜವಾಹರಲಾಲ್ ನೆಹರೂ ಪ್ರಶಸ್ತಿಯನ್ನು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ನೀಡಿ ಗೌರವಿಸಿದರು.‌

ವೀರೇಂದ್ರ ಪಾಟೀಲ್ ಸಂಪುಟಕ್ಕೆ ಅಪಾಯ
ನವದೆಹಲಿ, ನ. 15–
ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿದೆ, ಏಕಶಿಲೆಯಂತಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಹೇಳಿಕೊಂಡಿರುವುದಕ್ಕೆ ಸಂಸತ್ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರು ಆಕ್ಷೇಪಿಸಿ, ವೀರೇಂದ್ರ ಪಾಟೀಲರ ಸಂಪುಟಕ್ಕಿರುವ ಬೆದರಿಕೆಯನ್ನು ಇಂದು ತಿಳಿಸಿದರು.

ಪ್ರತಿಕ್ರಿಯಿಸಿ (+)