ಗುರುವಾರ , ಆಗಸ್ಟ್ 22, 2019
27 °C
1969

ಶುಕ್ರವಾರ, 18–7–1969

Published:
Updated:

ಮುರಾರಜಿ ರಾಜೀನಾಮೆ ವಾಪಸಿಲ್ಲ: ಪ್ರಧಾನಿ ಪತ್ರಕ್ಕೆ ಉತ್ತರ

ನವದೆಹಲಿ, ಜುಲೈ 17– ಇಂದು ದಿನವೆಲ್ಲಾ ಸಂಧಾನ, ಸಭೆ, ಸಮಾಲೋಚನೆಗಳು ನಡೆದರೂ ಶ್ರೀ ಮುರಾರಜಿ ದೇಸಾಯಿಯವರು ಕೇಂದ್ರ ಸಂಪುಟಕ್ಕೆ ನಿನ್ನೆ ಕೊಟ್ಟ ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಿಲ್ಲ.

ಆದರೆ, ಶ್ರೀ ಮುರಾರಜಿ ರಾಜೀನಾಮೆ ಕುರಿತ ರಾಜಿ ಪ್ರಯತ್ನ ನಡೆಯುತ್ತಿದೆಯೆಂದೂ ಅದು ಫಲಪ್ರದವಾಗಬಹುದೆಂದೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಮಗಳು ಪ್ರಧಾನಿಯಾಗಬೇಕೆಂದು ತಂದೆ ಇಚ್ಛಿಸಿರಲಿಲ್ಲ: ಇಂದಿರಾ

ನವದೆಹಲಿ, ಜುಲೈ 17– ತಮ್ಮ ಪುತ್ರಿ ಪ್ರಧಾನಿಯಾಗಬೇಕೆಂಬುದು ನೆಹರೂ ಅವರ ಇಚ್ಛೆಯಾಗಿತ್ತೆಂದು ಕುಲದೀಪ್ ನಾಯರ್ ಅವರು ತಮ್ಮ ‘ಬಿಟ್ವೀನ್ ದಿ ಲೈನ್ಸ್’ ಗ್ರಂಥದಲ್ಲಿ ತಿಳಿಸಿರುವುದನ್ನು ಕಂಡು ತಮಗೆ ವಿಸ್ಮಯವುಂಟಾಗಿರುವುದಾಗಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸಂಪರ್ಕಾಧಿಯಾಗಿದ್ದಾಗ, ದಿವಂಗತ ಲಾಲ್‌ಬಹದ್ದೂರ್ ಶಾಸ್ತ್ರಿ ಮತ್ತು ಪಂಡಿತ ಗೋವಿಂದವಲ್ಲಭ ಪಂತ್ ಅವರಿಗೆ ವಕ್ತಾರರಾಗಿದ್ದ ಕುಲದೀಪ್ ನಾಯರ್ ಅವರು, ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ಉತ್ತರಾಧಿಕಾರಿಯಾಗಬೇಕೆಂದು ನೆಹರೂ ಇಚ್ಛಿಸಿದ್ದರೆಂಬ ವಿಷಯವನ್ನು ಶಾಸ್ತ್ರಿಯವರೇ ತಿಳಿಸಿದ್ದರೆಂದು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ.

Post Comments (+)