ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 21–7–1969

1969
Last Updated 20 ಜುಲೈ 2019, 19:23 IST
ಅಕ್ಷರ ಗಾತ್ರ

ಚಂದ್ರನ ಮೇಲೆ ‘ಅಪೊಲೊ–11’ರ ಚಂದ್ರಕೋಶ ಸ್ಪರ್ಶ

ಪ್ಯಾರಿಸ್, ಜುಲೈ 20– ಮಾನವನೀಗ ಚಂದ್ರಗ್ರಹದ ಮೇಲೆ ವಿಜಯ ಸಾಧಿಸಿದ್ದಾನೆ.

ಅಂತರಿಕ್ಷದ ಅಪರಿಮಿತ ವ್ಯಾಪ್ತಿಯ ಅನ್ವೇಷಣೆಯಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿ ನೆರೆಯಲ್ಲಿರುವ ಮತ್ತು ಶತಮಾನಗಳಿಂದ ರಾತ್ರಿ ಕರೆಯುತ್ತಿದ್ದ ಚಂದ್ರ ಗ್ರಹವನ್ನು ಮನುಷ್ಯ ಇಂದು ತಲುಪಿದ. ಆದರೂ ಇದು ಆದಿ ಪುರುಷನ ವೀರಗಾಥದಲ್ಲಿ ಉಜ್ವಲಗಳಿಗೆ. ಖಗೋಳ ಮಂಡಲದ ಗ್ರಹದಿಂದ ಪೃಥ್ವಿಯ ಪ್ರಥಮ ದರ್ಶನ ಪಡೆಯಲು ಅವನು ತನ್ನ ಜನನದಿಂದ ನಿರ್ಬಂಧದಲ್ಲಿಡಲ್ಪಟ್ಟಿದ್ದ ಭೂಮಿಯ ಎಲ್ಲೆಗಳನ್ನು ಭೇದಿಸಿದ್ದ .

ಇಷ್ಟಾದರೂ 10–12 ವರ್ಷಗಳ ಹಿಂದೆ ಪ್ರಾರಂಭವಾದ ಅಂತರಿಕ್ಷ ನಾವಿಕದಲ್ಲಿ ಇದೊಂದು ಉಜ್ವಲ ಅಂಕ. ಅಂತರಿಕ್ಷ ಯುಗದ ನವೀನ ಸಾಹಸಕ್ಕಿಳಿದ ನೀಲ್ ಆಮ್‌ಸ್ಟಾಂಗ್ ಮತ್ತು ಎಡ್ವಿನ್ಆರ್ಲ್ಸ್ಡಿ ಅವರು ಹಳ್ಳಕೊಳ್ಳಗಳಿಂದ ಜಲರಹಿತ ‘ಪ್ರಶಾಂತ ಸಮುದ್ರ’ದಲ್ಲಿ ಇಳಿದು ಅದರ ಮೇಲೆ ಅಡಿಯಿಟ್ಟು ಸುಪ್ರಸಿದ್ಧರಾಗಲು ಅಣಿಯಾಗಿರುತ್ತಾರೆ.

ಯಾವುದೇ ನಿರ್ಬಂಧಕ್ಕೆ ಒಪ್ಪುವುದಿಲ್ಲ: ಇಂದಿರಾ

ನವದೆಹಲಿ, ಜುಲೈ 20– ತಾವು ಪ್ರಧಾನ ಮಂತ್ರಿಯಾಗಿರುವ ತನಕ ಪ್ರಮುಖ ನೀತಿಗಳ ನಿರ್ದೇಶನ ತಮ್ಮಿಂದಲೇ ಆಗಬೇಕೆಂದೂ, ಆ ಬಗ್ಗೆ ತಮ್ಮ ಮೇಲೆ ಯಾವುದೇ ಅಡ್ಡಿ ನಿರ್ಬಂಧಗಳನ್ನು ವಿಧಿಸಲು ತಾವು ಅವಕಾಶ ಕೊಡುವುದಿಲ್ಲವೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಇಂದು ಸಂಸತ್ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಘೋಷಿಸಿದರು.

‘ಪಕ್ಷಕ್ಕೆ ನನ್ನ ನೀತಿ ಒಪ್ಪಿಗೆಯಾಗದೆ ನಾನು ನಿರ್ಗಮಿಸಬೇಕೆಂದು ಇಚ್ಛಿಸಿದರೆ ನಾನು ನಗುತ್ತಾ ನಿರ್ಗಮಿಸುವೆ’ ಎಂದೂ ಪ್ರಧಾನ ಮಂತ್ರಿಗಳು ನುಡಿದರು.

ನಾಮುಂದು.... ತಾಮುಂದು

ಮದರಾಸ್, ಜುಲೈ 20– ಚಂದ್ರ ಲೋಕಕ್ಕೆ ಹೋಗಲು ವಿಮಾನದಲ್ಲಿ ತಮಗೆ ಸ್ಥಳಗಳನ್ನು ಕಾದಿರಿಸುವಂತೆ ಚಿತ್ತೂರಿನ (ಆಂಧ್ರಪ್ರದೇಶ) ಮೂರು ಮಂದಿ ಯುವಕರು ಇಲ್ಲಿಯ ಇಂಡಿಯನ್ ಏರ್‌ಲೈಸ್ಸನ್ನು ಕೋರಿದ್ದಾರೆ. ಅಪೊಲೋ–11 ಚಂದ್ರಗ್ರಹಕ್ಕೆ ಯಾನ ಮಾಡಿರುವುದರಿಂದ ಅವರು ಉತ್ತೇಜಿತರಾಗಿದ್ದಾರೆಂಬುದು ಸುಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT