ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 15–11–1969

Last Updated 14 ನವೆಂಬರ್ 2019, 20:37 IST
ಅಕ್ಷರ ಗಾತ್ರ

ಅಮೆರಿಕದ ಗಗನನೌಕೆ‘ಅಪೊಲೊ–12’ ಚಂದ್ರನತ್ತ ಯಾನ
ಹೂಸ್ಟನ್, ನ. 14–
ಮಳೆ ಮಿಂಚು, ಸಿಡಿಲುಗಳಿದ್ದರೂ ಅದನ್ನು ಲೆಕ್ಕಿಸದೆ ಅಮೆರಿಕವು ಮೂವರು ಗಗನ
ಯಾತ್ರಿಗಳಿಂದ ಕೂಡಿದ ಅಪೊಲೊ–12 ಬಾಹ್ಯಾಕಾಶ ನೌಕೆಯನ್ನು ಇಂದು ರಾತ್ರಿ 9.52ಕ್ಕೆ (ಭಾರತೀಯ ಕಾಲಮಾನ) ಹಾರಿಸಿತು.

**
ನೆಚ್ಚಿನ ನೆಹರೂಗೆ ಶ್ರದ್ಧಾಂಜಲಿ
ನವದೆಹಲಿ, ನ. 14– ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ‘ಭಾರತ ರತ್ನ’ ಜವಾಹರ ಲಾಲ್ ನೆಹರೂರವರ 80ನೇ ಜನ್ಮ ದಿನವಾದ ಇಂದು ನಾಡಿನ ಎಲ್ಲೆಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಡೀ ಜೀವಿತ ಕಾಲವನ್ನೇ ದೇಶಸೇವೆಗಾಗಿ ಮುಡಿಪಿಟ್ಟ ನೆಚ್ಚಿನ ನಾಯಕನನ್ನು ಸ್ಮರಿಸಲಾಯಿತು.

ರಾಷ್ಟ್ರಪತಿ ವಿ.ವಿ. ಗಿರಿ, ಉಪರಾಷ್ಟ್ರಪತಿ ಎಸ್. ಪಾಠ‌ಕ್, ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಗಡಿನಾಡ ಗಾಂಧಿ ಅಬ್ದುಲ್‌ ಗಫಾರ್ ಖಾನ್ ಅವರು ಇಂದು ಬೆಳಿಗ್ಗೆ ಇಲ್ಲಿನ ಶಾಂತಿವನಕ್ಕೆ ಭೇಟಿ ಇತ್ತು ನೆಹರೂ ಸಮಾಧಿ ಮೇಲೆ ಪುಷ್ಪಗುಚ್ಛ
ಗಳನ್ನಿರಿಸಿ, ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರಲ್ಲದೆ ಸಮಾಧಿ ಬಳಿ ಗುಲಾಬಿ ಗಿಡಗಳನ್ನು ನೆಟ್ಟರು.

ನೆಹರೂ ವಾರ್ಸಿಟಿ ಉದ್ಘಾಟನೆ
ನವದೆಹಲಿ, ನ. 14– ರಾಷ್ಟ್ರದ ಅಭಿವೃದ್ಧಿಗೆ ವಿಶೇಷ ಗಮನಹರಿಸುವ ಮೂಲಕ ವೈಶಿಷ್ಟ್ಯ ಪೂರ್ಣ ಶಿಕ್ಷಣ ಕೇಂದ್ರವಾಗುವುದೆಂಬ ಸದಾಶಯದೊಂದಿಗೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಇಲ್ಲಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT