ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಸಾಮಾನ್ಯನಿಗೆ ಸಹನೀಯ ಕರಭಾರ: ಶ್ರೀಮಂತರ ಕಿಸೆಗೆ ಕನ್ನ

Last Updated 29 ಫೆಬ್ರುವರಿ 2020, 19:22 IST
ಅಕ್ಷರ ಗಾತ್ರ

ಶ್ರೀಸಾಮಾನ್ಯನಿಗೆ ಸಹನೀಯ ಕರಭಾರ: ಶ್ರೀಮಂತರ ಕಿಸೆಗೆ ಕನ್ನ

ನವದೆಹಲಿ, ಫೆ.28– ಶ್ರೀಸಾಮಾನ್ಯನ ಮೇಲೆ ಸಹನೀಯ ಕರಭಾರ, ಖೋತ ತುಂಬಲು ಶ್ರೀಮಂತವರ್ಗದಿಂದ ಹೆಚ್ಚು ಹಣ ವಸೂಲಿಗಾಗಿ ನಿಷ್ಠೆಯ ಪ್ರಯತ್ನ, ಪ್ರಧಾನಿ ಹಾಗೂ ಹಣಕಾಸು ಸಚಿವೆ ಇಂದಿರಾಗಾಂಧಿಯವರು ಇಂದು ಮಂಡಿಸಿದ ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿ ಉದ್ದೇಶದ ಬಜೆಟ್‌ನ ಮುಖ್ಯಾಂಶ.

120 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆಯಲ್ಲಿ 125 ಕೋಟಿ ಕೇಂದ್ರ ಬೊಕ್ಕಸಕ್ಕೆ ಸೇರುವುದು ಉಳಿದದ್ದು ರಾಜ್ಯಗಳ ಪಾಲು.

ಆಯವ್ಯಯದಲ್ಲಿ ವ್ಯಾಪಕ ತೆರಿಗೆ ವಿಧಿಸುವ ಸೂಚನೆ ಇದರಂತೆ ಅನೇಕ ವಸ್ತುಗಳ ಮೇಲಿನ ಈಗಿನ ತೆರಿಗೆ ದರಗಳು ಹೆಚ್ಚುವುದು. ಆದರೆ ಈ ಹೆಚ್ಚುವರಿ ಕರಭಾರ ಶ್ರೀಸಾಮಾನ್ಯನ ಮೇಲೆ ತೀವ್ರ ಪರಿಣಾಮ ಬೀರದಂತೆ ಗಾಂಧಿ ಎಚ್ಚರ ವಹಿಸಿದ್ದಾರೆ.

ಏಕಪಕ್ಷೀಯ ತೀರ್ಮಾನ ತೀವ್ರ ಪರಿಣಾಮಕ್ಕೆ ಹಾದಿ

ಬೆಂಗಳೂರು ಫೆ.25– ‘ಮೈಸೂರು– ಮಹಾರಾಷ್ಟ್ರ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ಮಹಾಜನ್‌ ವರದಿಗೆ ಅನುಗುಣವಿಲ್ಲದ ಯಾವುದೇ ಏಕಪಕ್ಷೀಯ ನಿರ್ಧಾಯ ಕೈಗೊಂಡರೆ, ಅದು ತೀವ್ರ ಪರಿಣಾಮಗಳಿಗೆ ಮೂಲವಾದೀತು’ ಎಂದು ವಿಧಾನ ಸಭೆಯು ಇಂದು ಅಂಗೀಕರಿಸಿದ ನಿರ್ಣಯವೊಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ನಾಲ್ಕು ದಿನಗಳ ವ್ಯಾಪಕ ಚರ್ಚೆಯ ಕೊನೆಯಲ್ಲಿ ಎಸ್ಸೆಸ್ಸಿಯ ಎಸ್‌. ಗೋಪಾಲಗೌಡರು ಮಂಡಿಸಿದ ನಿರ್ಣಯವನ್ನು ಅಂಗೀಕರಿಸದ ವಿಧಾನಸಭೆಯು, ತೀವ್ರ ಪರಿಣಾಮವನ್ನು ಕೇಂದ್ರ ನಾಯಕರಿಗೆ ಮತ್ತು ಸಂಶತ್‌ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಸರ್ವಪಕ್ಷಗಳ ನಿಯೋಗವೊಂದವನ್ನು ರಚಿಸಿ ದೆಹಲಿಗೆ ಕಳುಹಿಸಿಕೊಡಲು ನಿರ್ಧರಿಸಿತು.

ಗೋಕಾಕ್‌ನಲ್ಲಿ ಗೋಲಿಬಾರ್‌: ಮೂವರಿಗೆ ಗಾಯ

ಬೆಳಗಾವಿ, ಫೆ. 28– ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಇಂದು ಹಿಂಸಾಕೃತ್ಯದಲ್ಲಿ ತೊಡಗಿದ ಕರ್ನಾಟಕವಾದಿ ಗುಂಪನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂರು ಮಂದಿ ಗಾಯಗೊಂಡರು.

ಗಾಯಗೊಂಡವರಲ್ಲಿ ಇಬ್ಬರನ್ನು ಗೋಕಾಕ್‌ನಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಬ್ಬನನ್ನು ಬೆಳಗಾವಿಯ ಸಿವಿಲ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT