ಸೋಮವಾರ, ಜೂನ್ 1, 2020
27 °C

ಶನಿವಾರ 11–4–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಜೆಟ್‌ ಅಧಿವೇಶನದಲ್ಲೇ ಗಡಿ ವಿಧೇಯಕ?

ನವದೆಹಲಿ, ಏ. 10– ಮೈಸೂರು ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ ಪಡಿಸುವ ಉದ್ದೇಶ ಹೊಂದಿರುವ ವಿಧೇಯಕವೊಂದನ್ನು ಸಂಸತ್ತಿನ ಪ್ರಸಕ್ತ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವುದಾಗಿ ಕೇಂದ್ರ ಸಚಿವರೊಬ್ಬರು ತಮಗೆ ತಿಳಿಸಿದ್ದಾರೆಂದು ಮೈಸೂರು ಶಾಸಕರ ಮೂರನೇ ನಿಯೋಗದ ನಾಯಕ ಶ್ರೀ ಎಸ್‌. ಗೋಪಾಲಗೌಡರು ಹೇಳಿದ್ದಾರೆ.

ವಿಧೇಯಕ ಮಂಡನೆಯ ವಿಷಯವನ್ನು ಕೇಂದ್ರ ಗೃಹಖಾತೆ ಸ್ಟೇಟ್‌ ಸಚಿವ ಶ್ರೀ ವಿ.ಸಿ. ಶುಕ್ಲಾ ಅವರು ಶ್ರೀ ಗೋಪಾಲಗೌಡ ಅವರಿಗೆ ತಿಳಿಸಿದರೆಂದು ತಿಳಿದುಬಂದಿದೆ.

ನಗರಕ್ಕೆ ಚಲನಚಿತ್ರ ಸೆನ್ಸಾರ್‌ ಮಂಡಲಿ ವರ್ಗಾವಣೆ: ಕೇಂದ್ರದ ಪರಿಶೀಲನೆಯಲ್ಲಿ

ನವದೆಹಲಿ, ಏ. 10– ಖೋಸ್ಲಾ ಸಮಿತಿ ಶಿಫಾರಸಿನಂತೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಲಿಯನ್ನು ಬೆಂಗಳೂರು ಅಥವಾ ನಾಗಪುರಕ್ಕೆ ಸ್ಥಳಾಂತರಿಸುವ ಪ್ರಶ್ನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ವಾರ್ತಾ ಮತ್ತು ಪ್ರಸಾರ ಶಾಖೆ ಸಚಿವ ಶ್ರೀ ಐ.ಕೆ ಗುಜ್ರಾಲ್‌ ಅವರು ಗುರುವಾರ ಲೋಕಸಭೆಗೆ ತಿಳಿಸಿದರು.‌

ಭಾರತೀಯ ಚಲನಚಿತ್ರ ತಯಾರಕರ ಸಂಘವು ಇಂತಹ ಸ್ಥಳಾಂತರಕ್ಕೆ ವಿರೋಧವಾಗಿದೆಯೆಂದೂ ಹೇಳಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.