ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 5 ಮೇ, 1970

Last Updated 4 ಮೇ 2020, 19:14 IST
ಅಕ್ಷರ ಗಾತ್ರ

ಏನೀ ಸಚಿವ ಪದವಿ ಸುಖ?

ನವದೆಹಲಿ, ಮೇ 4– ಸಂಸತ್‌ ಸದಸ್ಯರಷ್ಟೇ ಸಂಬಳ, ಭತ್ಯೆಗಳನ್ನು ತೆಗೆದುಕೊಳ್ಳಲು ತಾವು ಸಹ ಸಿದ್ಧವೆಂದು ಕೇಂದ್ರ ಆರೋಗ್ಯ ಸಚಿವ ಕೆ.ಕೆ.ಷಾ ಇಂದು ನುಡಿದರು.

ಒಳ್ಳೇ ಸಂಬಳದ ಜತೆಗೆ ಇತರ ವೆಚ್ಚಗಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ರೂ.ಗಳಷ್ಟು ಹಣವನ್ನು ಸಚಿವರು ಪಡೆಯುತ್ತಾರೆಂದು ಜನಸಂಘದ ಶ್ರೀ ಚಂದ್‌ ಗೋಯಲ್‌ ಆಕ್ಷೇಪಿಸಿದ್ದಕ್ಕೆ ಸಚಿವರು ಈ ಸವಾಲು ಹಾಕಿ ‘ತುಂಬ ಅಪಾರ್ಥ ಮಾಡಿಕೊಳ್ಳಲಾಗಿರುವ ವ್ಯಕ್ತಿ ಎಂದರೆ ಸಚಿವರೇ’ ಎಂದರು.

2,220 ರೂ. ಸಂಬಳದಲ್ಲಿ 600 ರೂ. ವರಮಾನ ತೆರಿಗೆ ತೆರಬೇಕು. ನೀರು, ದೀಪಕ್ಕೆ ಬೇರೆ ಕೊಡಬೇಕು. ಪೀಠೋಪಕರಣ ನೀಡಿಕೆಯಲ್ಲಿ ಸದಸ್ಯರಿಗೂ ಸಚಿವರಿಗೂ ಹೆಚ್ಚು ಭೇದವಿಲ್ಲ. ಹೀಗಿರುವಾಗ ಸದಸ್ಯರ 500 ರೂ. ಸಂಬಳ ಮತ್ತು 51 ರೂ. ದಿನಭತ್ಯೆ ಒಪ್ಪಿಕೊಳ್ಳಲು ತಾವು ಸಿದ್ಧ ಎಂದರು ಕೆ.ಕೆ.ಷಾ. ಆದರೆ ಸಚಿವ ಪದವಿ ವಿನಿಮಯಕ್ಕೆ ಮಾತ್ರ ತಾವು ಸಿದ್ಧರಿಲ್ಲ ಎಂದಾಗ ಸಭೆ ಗೊಳ್ಳೆಂದಿತು.

ಭಾರತಕ್ಕೆ 2–1 ಪಂದ್ಯ ಲೀಡ್‌

ಬೆಂಗಳೂರು, ಮೇ 4– ಎರಡು ಸಿಂಗಲ್ಸ್‌ ಪಂದ್ಯಗಳಲ್ಲೂ ಗೆದ್ದ ಭಾರತದ ಟೀಮಿನವರು ಡಬಲ್ಸ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್‌ ಹಾಗೂ ಸ್ಟೋನ್‌ ಅವರ ಕೈಲಿ ಅಪಜಯ ಅನುಭವಿಸಿ, ಡೇವಿಸ್‌ ಕಪ್‌ ಅಂತರ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಷಿಪ್‌ ಪೂರ್ವವಲಯ ಫೈನಲ್ಸ್‌ ಪಂದ್ಯದ ಮೂರನೇ ದಿನದ ಕಡೆಯಲ್ಲಿ 2–1 ಪಂದ್ಯಗಳಿಂದ ಮುಂದೆ ಇದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT