ಭಾನುವಾರ, ಜೂನ್ 7, 2020
22 °C

50 ವರ್ಷಗಳ ಹಿಂದೆ| ಸೋಮವಾರ, 18–5–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಕಾವೇರಿ ಯೋಜನೆಗಳಿಗೆ 3 ತಿಂಗಳಲ್ಲಿ ಮಂಜೂರಾತಿ?

ಬೆಂಗಳೂರು, ಮೇ 17– ರಾಜ್ಯದ ಕಾವೇರಿ ಯೋಜನೆಗಳಿಗೆ ಮೂರು ತಿಂಗಳಲ್ಲಿ ಮಂಜೂರಾತಿ ಸಿಕ್ಕುವ ಆಶಯವನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ರವರು ಇಂದು ಇಲ್ಲಿ ವ್ಯಕ್ತಪಡಿಸಿದರು.

ಮೈಸೂರಿನ ಯೋಜನೆಗಳಿಗೆ ಕೇಂದ್ರದ ಮಂಜೂರಾತಿ ದೊರಕಿದ ನಂತರ ತಾವು ಒಪ್ಪಂದಕ್ಕೆ ಸಹಿ ಹಾಕುವುದಾಗಿ ಶ್ರೀ ಪಾಟೀಲರು ವರದಿಗಾರರೊಡನೆ ಮಾತನಾಡುತ್ತಾ ತಿಳಿಸಿದರು.

ನಿನ್ನೆ ಮದರಾಸಿನಲ್ಲಿ ನಡೆದ ಕಾವೇರಿ ಜಲ ವಿವಾದ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರು ಇಂದು ನಗರಕ್ಕೆ ಹಿಂತಿರುಗಿದರು.

ಕೋಮುಭಾವನೆ ವಿರುದ್ಧ ಹೋರಾಡಲು ದೇಶದಾದ್ಯಂತ ಸಾಮೂಹಿಕ ಚಳವಳಿ

ನವದೆಹಲಿ, ಮೇ 17– ಕೋಮು ಗಲಭೆಗಳ ಭೀಕರತೆ ಮತ್ತು ಕೆಡುಕಿನ ವಿರುದ್ಧ ಹೋರಾಡುವುದಕ್ಕಾಗಿ ಸರ್ವ ಪಕ್ಷಗಳ ಜಂಟಿ ಸಾಮೂಹಿಕ ಚಳವಳಿಯನ್ನು ಶೀಘ್ರದಲ್ಲೇ ರಾಷ್ಟ್ರದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಈ ತಿಂಗಳು 22ರಂದು ನವದೆಹಲಿಯಲ್ಲಿ ನಡೆಯಲಿರುವ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಕೂಡಿದ ವ್ಯವಸ್ಥಾಪಕ ಸಮಿತಿಯ
ಸಭೆಯಲ್ಲಿ ಚಳವಳಿಯ ವಿವರ ಕುರಿತು ಚರ್ಚಿಸಲಾಗುವುದು. ಪ್ರಧಾನಿ ಇಂದಿರಾ ಗಾಂಧಿ ಅವರು ಈ ಸಭೆಯ ಅಧ್ಯಕ್ಷತೆ ವಹಿಸುವರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.