ಭಾನುವಾರ, ಜೂನ್ 7, 2020
22 °C

50 ವರ್ಷಗಳ ಹಿಂದೆ| ಬುಧವಾರ, 20–5–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬಾರಿ ಫಲದಾನ

ಬೆಂಗಳೂರು, ಮೇ 19– ‘ಮದುವೆ ಮಾಡಿ ನೋಡು’ ಗಾದೆ ಮಾಡಿದವರಿಗೆ ತೆಂಗಿನಕಾಯಿಯ ಭಯವಿರಲಿಲ್ಲ. ಆಗ ಬಹುಶಃ ಮೂರು ಕಾಸಿಗೊಂದು ಕಾಯಿ ಇದ್ದೀತು, ಮದುವೆ ವೆಚ್ಚದಲ್ಲಿ ಕಾಯಿ ಬಾಬತ್ತು ವೆಚ್ಚ ಗೌಣ.

ಈಗ ಮದುವೆ ಮಾಡುವವರಿಗೆ ತೆಂಗಿನಕಾಯಿಯೇ ದೊಡ್ಡ ಸವಾಲು. ಕೇವಲ ಎರಡು ವರ್ಷದ ಹಿಂದೆ ಸಗಟು ವ್ಯಾಪಾರಿಗಳಿಂದ ಕೊಂಡರೆ ಸಾವಿರಕ್ಕೆ 400 ರೂ.ಗಳಲ್ಲಿ ಮುಗಿಯುತ್ತಿದ್ದ ಬಾಬು ಈಗ 650 ರೂ. ತೆತ್ತರೂ ಒಳ್ಳೆಯ ಕಾಯಿ ಸಿಕ್ಕದಂತಾಗಿದೆ. ಇದಕ್ಕೆ ಕಾರಣ ಹಲವಾರು. ತೆಂಗಿನಕಾಯಿ ಉತ್ಪಾದನೆ ಜಾಸ್ತಿ ಇದ್ದರೂ ಬೇಡಿಕೆ ಹತ್ತಾರು ಪಟ್ಟು ಬೆಳೆದಿದೆ. ಮಾರಾಟ ತೆರಿಗೆ, ಸ್ಥಳೀಯ ಆಕ್ಟ್ರಾಯಿ ಸುಂಕ ಮತ್ತು ಸಾಗಾಣಿಕೆ ವೆಚ್ಚವು ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ.

ನಕ್ಸಲೀಯ ಹಾವಳಿ ನಿಗ್ರಹಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ 144ನೇ ಸೆಕ್ಷನ್‌

ನವದೆಹಲಿ, ಮೇ 19– ಪರೀಕ್ಷಾ ಕೇಂದ್ರಗಳಲ್ಲಿ ಬೆಳೆಯುತ್ತಿರುವ ಅನಾಚಾರ ಹಾಗೂ ಉಸ್ತುವಾರಿ ಸಿಬ್ಬಂದಿ ಮೇಲೆ ಮುತ್ತಿಗೆಗಳನ್ನು ತಡೆಗಟ್ಟುವುದಕ್ಕಾಗಿ ಐಪಿಸಿ 144ನೇ ಸೆಕ್ಷನ್‌ ಪ್ರಯೋಗಿಸಲು ಸರ್ಕಾರ ಉದ್ದೇಶಿಸಿದೆ. ಈ ಪ್ರಕರಣಗಳಲ್ಲಿ ಕೆಲವರು ಉಸ್ತುವಾರಿ ಸಿಬ್ಬಂದಿ ಬಲಿಯಾಗಿದ್ದಾರೆ.

ವಿದ್ಯಾರ್ಥಿ ಅಶಾಂತಿ, ಅಶಿಸ್ತು ಮತ್ತು ಹಿಂಸಾಚಾರ ಕುರಿತು ಚರ್ಚಿಸಲು ಶಿಕ್ಷಣ ಸಚಿವ ಪ್ರೊ. ವಿ.ಕೆ.ಆರ್‌.ವಿ ರಾವ್‌ ಹಾಗೂ ಸಂಸತ್ತಿನಲ್ಲಿರುವ ವಿವಿಧ ಪಕ್ಷ ಮತ್ತು ತಂಡಗಳ ನಾಯಕರು ಇಂದು ಇಲ್ಲಿ ಸೇರಿದ್ದ ಸಭೆಯೊಂದರಲ್ಲಿ ಪ್ರಚುರಪಡಿಸಿದ ಶಿಕ್ಷಣ ಶಾಖೆ ಹೇಳಿಕೆಯೊಂದರಲ್ಲಿ ಈ ವಿಷಯ ವ್ಯಕ್ತಪಟ್ಟಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.