ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಶುಕ್ರವಾರ, 22–5–1970

Last Updated 21 ಮೇ 2020, 22:09 IST
ಅಕ್ಷರ ಗಾತ್ರ

ಪರಮಾಣು ಬೇರ್ಪಡೆಯ ಮಹತ್ಸಾಧನೆ

ಷಿಕಾಗೊ, ಮೇ 21– ಅಣುವೊಂದನ್ನೇ ಪ್ರತ್ಯೇಕಪಡಿಸಿ ಅದರ ಛಾಯಾಚಿತ್ರ ತೆಗೆಯುವ ವಿಜ್ಞಾನದ ಸುದೀರ್ಘ ಕನಸೊಂದನ್ನು ನನಸು ಮಾಡಿರುವುದಾಗಿ ಬ್ರಿಟಿಷ್‌ ಸಂಜಾತ ಭೌತವಿಜ್ಞಾನಿಯೊಬ್ಬರು ಪ್ರಕಟಿಸಿದ್ದಾರೆ.

ಈ ವೈಜ್ಞಾನಿಕ ಸಾಧನೆಯ ಕೀರ್ತಿ ಪ್ರೊ. ಆಲ್ಬರ್ಟ್‌ ವಿ. ಕ್ರೂ ಅವರದು. ಹತ್ತು ಲಕ್ಷ ಪಟ್ಟು ದೊಡ್ಡದಾಗಿ ಗೋಚರಿಸುತ್ತಿದ್ದ ಯುರೇನಿಯಂ ಮತ್ತು ಥೋರಿಯಂಗಳ ಒಂದೊಂದೇ ಅಣುವಿನ ಛಾಯಾಚಿತ್ರಗಳನ್ನು ಡಾ. ಕ್ರೂ ಅವರು ನಿನ್ನೆ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರದರ್ಶಿಸಿದರು. ಇದು ಆರು ವರ್ಷಗಳ ಸಂಶೋಧನೆ ಮತ್ತು ಏಳೂವರೆ ಲಕ್ಷದಿಂದ (56.34 ಲಕ್ಷ ರೂ.) 10 ಲಕ್ಷ ಡಾಲರ್‌ಗಳವರೆಗಿನ
(75 ಲಕ್ಷ ರೂ.) ವೆಚ್ಚದ ಫಲ.

ಈ ಪಾಪದ ಮೂಲವೆಲ್ಲಿ?

ಬೆಂಗಳೂರು, ಮೇ 21– ಎಲ್ಲೋ ನಡೆಯುತ್ತಿದೆ, ಯಾರೋ ಮಾಡುತ್ತಿದ್ದಾರೆ. ಯಾರು? ಎಲ್ಲಿ ಅನ್ನುವುದು ‘ಯಾರಿಗೂ ಗೊತ್ತಿಲ್ಲ’. ಆಹಾರ ಮಿಶ್ರಣ ಘೋರಪಾಪ. ದೊಡ್ಡ ಅಪರಾಧ. ಆದರೆ ‘ಇದು ನಡೆಯುತ್ತಿರುವುದು ಸಣ್ಣ ತಂಡವೊಂದರಿಂದ’.

ಈ ಸಣ್ಣ ತಂಡವನ್ನು ಗುರುತಿಸುವುದು ಮಿಶ್ರಿತ ಆಹಾರ ಮಾರುವ ವ್ಯಾಪಾರಿಗಳು, ಆಹಾರ ಮಿಶ್ರಣವನ್ನು ತಡೆಯಬೇಕಾದ ಅಧಿಕಾರಿಗಳು ಇಂದು ಸಂಜೆ ನಡೆಸಿದ 120 ನಿಮಿಷಗಳ ಚರ್ಚೆಯಲ್ಲಿ ಅದು ಸಾಧ್ಯವಾಗಲಿಲ್ಲ. ಮಿಶ್ರ ಆಹಾರದ ಅನಿಷ್ಟಕ್ಕೆ ಚರ್ಚೆಯಲ್ಲಿ ಪ್ರಧಾನವಾಗಿ ಕಂಡುಬಂದ ಪರಿಹಾರ ‘ಬಳಕೆದಾರ ಪ್ರಜ್ಞೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT