ಗುರುವಾರ , ಆಗಸ್ಟ್ 5, 2021
23 °C

50 ವರ್ಷಗಳ ಹಿಂದೆ | ಶನಿವಾರ, 13–6–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಸಂಪತ್ತು ತೆರಿಗೆ ವಿರುದ್ಧ ಪಂಜಾಬ್‌ ರಿಟ್‌
ಚಂಡೀಗಡ, ಜೂನ್‌ 12–
ಜಮೀನಿನ ಮೇಲೆ ಸಂಪತ್ತು ತೆರಿಗೆ ವಿಧಿಸುವುದರ ರಾಜ್ಯಾಂಗ ಬದ್ಧತೆಯನ್ನು ಪ್ರಶ್ನಿಸಿ ಪಂಜಾಬ್‌ ಸರ್ಕಾರ ಇಂದು ಪಂಜಾಬ್‌– ಹರಿಯಾಣ ಹೈಕೋರ್ಟಿನಲ್ಲಿ ರಿಟ್‌ ಅರ್ಜಿಯೊಂದನ್ನು ಸಲ್ಲಿಸಿತು.

ಭಾರತ ಸಂವಿಧಾನದ 226 ಮತ್ತು 227ನೇ ವಿಧಿಗಳ ಪ್ರಕಾರ ಈ ರಿಟ್‌ ಸಲ್ಲಿಸಲಾಗಿದೆ. ಕೃಷಿ ಜಮೀನಿನ ಮೇಲೆ ಸಂಪತ್ತು ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಇರುವ ಸಂಪತ್ತು ತೆರಿಗೆ ಶಾಸನವು ರಾಜ್ಯಾಂಗದ ವಿರುದ್ಧವೆಂದು ಘೋಷಿಸುವಂತೆ ಅರ್ಜಿ ಕೋರಿದೆ.

ಪೊಲೀಸರ ಜೊತೆ ನಕ್ಸಲೀಯರ ಘರ್ಷಣೆ: ಗುಂಡಿಗೆ ಇಬ್ಬರು ಬಲಿ
ಮಚಲೀಪಟ್ಟಣ, ಜೂನ್‌ 12–
ಇಲ್ಲಿಗೆ ಏಳು ಮೈಲಿ ದೂರದಲ್ಲಿರುವ ಮಾಂಗಿನಪುಡಿ ಸಮುದ್ರದಂಡೆ ಪ್ರದೇಶದಲ್ಲಿ ಇಂದು ಮುಂಜಾನೆ ಬಾಂಬ್‌ ಮತ್ತು ಕೋವಿಯಿಂದ ದಾಳಿ ನಡೆಸಿದ ಇಪ್ಪತ್ತೈದು ಮಂದಿ ನಕ್ಸಲೀಯರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ನಕ್ಸಲೀಯರು ಸತ್ತರು.

ಪೊಲೀಸರು ನಕ್ಸಲೀಯರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಈ ಘರ್ಷಣೆ ಸಂಭವಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು