ಶುಕ್ರವಾರ, ನವೆಂಬರ್ 27, 2020
18 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಗುರುವಾರ, 22–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಿ ಹಣದ ಪ್ರಭಾವ ತಡೆಗೆ ಶಾಸನ ಸಿದ್ಧ

ನವದೆಹಲಿ, ಅ. 21– ಸಾಧಾರಣ ವ್ಯವಹಾರಗಳ ವಿನಾ ಮಿಕ್ಕಂತೆ ವಿದೇಶಿ ಸಂಸ್ಥೆಗಳು, ಏಜೆನ್ಸಿಗಳು ಅಥವಾ ವ್ಯಕ್ತಿ ಗಳಿಂದ ಹಣ ಪಡೆಯುವಿಕೆ ವಿರುದ್ಧ ಸೂಕ್ತ ನಿರ್ಬಂಧ ವಿಧಿಸಲು ಕರಡು ಶಾಸನ ಕ್ರಮಗಳನ್ನು ಕೇಂದ್ರ ಗೃಹ ಸಚಿವ ಶಾಖೆ ಸಿದ್ಧಪಡಿಸಿದೆ.

ವಾರ್ತೆ ಹಾಗೂ ಪ್ರಸಾರ ಸಚಿವ ಶಾಖೆಗೆ ಸಂಬಂಧಿಸಿದ ಸಂಸತ್ ಸದಸ್ಯರ ಸಲಹಾ ಸಮಿತಿ ಸದಸ್ಯರ ಸಭೆಗೆ ಇಂದು ಈ ವಿಷಯ ತಿಳಿಸಲಾಯಿತು.

ಕಾಲೇಜು ಶಿಕ್ಷಕರ ಸಂಬಳ: ತುಕೋಳ್ ಶಿಫಾರಸು ಅನ್ವಯದ ಬಗ್ಗೆ ಬೇಗ ನಿರ್ಧಾರ

ಬೆಂಗಳೂರು, ಅ. 21– ರಾಜ್ಯದಲ್ಲಿ ಕಾಲೇಜುಗಳಲ್ಲಿನ ಶಿಕ್ಷಕರಿಗೆ ತುಕೋಳ್ ಆಯೋಗ ಶಿಫಾರಸು ಮಾಡಿರುವ ವೇತನ ಸ್ಕೇಲನ್ನು ಅನ್ವಯಿಸುವ ಬಗ್ಗೆ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಈ ಸಂಬಂಧದಲ್ಲಿ ಹಣಕಾಸು ಇಲಾಖೆಯೊಡನೆ ವ್ಯವಹರಿಸುತ್ತಿರುವುದಾಗಿ ತಿಳಿಸಿದರು.

ಪಕ್ಷೇತರ ಸದಸ್ಯ ಶ್ರೀ ಎಂ. ಸತ್ಯನಾರಾಯಣ ರಾವ್ ಅವರ ಗಮನ ಸೆಳೆಯುವ ಸೂಚನೆ ಸಂಬಂಧದಲ್ಲಿ ಹೇಳಿಕೆ ನೀಡಿದ ಶ್ರೀ ಶಂಕರಗೌಡರು, ತುಕೋಳ್ ಆಯೋಗದ ಶಿಫಾರಸನ್ನು ಕಾರ್ಯಗತ ಮಾಡಿದಾಗ ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ
ವೇತನ ಬರುತ್ತಿರುವವರಿಗೆ ಅದನ್ನು ಉಳಿಸಲಾಗುವುದೆಂದು ಭರವಸೆ ನೀಡಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು