ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಮಗಳವಾರ 15-9-1970

Last Updated 14 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಹಿಂಸಾಕೃತ್ಯಗಳನ್ನು ಎಂದಿಗೂ ಸಹಿಸೆವು: ಇಂದಿರಾ

ತ್ರಿಚೂರು, ಸೆ. 14– ರಾಷ್ಟ್ರದಲ್ಲಿ ಅವ್ಯವಸ್ಥೆಯನ್ನುಂಟು ಮಾಡಿರುವ ಹಿಂಸಾಕೃತ್ಯಗಳನ್ನು ಮತ್ತು ಅನಾಯಕತ್ವವನ್ನು ಎಂದಿಗೂ ಸಹಿಸ
ಲಾಗುವುದಿಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಹೇಳಿದರು.

ಇಲ್ಲಿ ಭಾರಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಅವರು ‘ಹಿಂಸಾಕೃತ್ಯ ಹಾಗೂ ಅನಾಯಕತ್ವದ ನೀತಿಗಳು ಬಡವರಿಗೆ (ಕಾರ್ಮಿಕರಿಗಾಗಲಿ ಅಥವಾ ರೈತರಿಗಾಗಲಿ) ಸಹಾಯ ಮಾಡುವುದಿಲ್ಲ. ಇದರ ಬದಲು ಪ್ರಗತಿ ಹಾಗೂ ಅಭಿವೃದ್ಧಿಗೆ ಅಡ್ಡಿ ಆತಂಕವನ್ನುಂಟು ಮಾಡುತ್ತವೆ. ಅಲ್ಲದೆ ಜನರ ಸಮಸ್ಯೆಗಳನ್ನೂ ಹೆಚ್ಚಿಸುತ್ತವೆ’ ಎಂದರು.

ರಾಜರ ಮನ್ನಣೆ ರದ್ದು: ರಾಷ್ಟ್ರಪತಿ ಆಜ್ಞೆ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

ನವದೆಹಲಿ, ಸೆ. 14– ರಾಜರ ಮಾನ್ಯತೆ ರದ್ದು ಸಂಬಂಧ ರಾಷ್ಟ್ರಪತಿ ಹೊರಡಿಸಿದ ಆಜ್ಞೆಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಕೆಲವು ಮಾಜಿ ಅರಸರು ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ವಿಚಾರಣೆಗಾಗಿ ಇಂದು ಸುಪ್ರೀಂ ಕೋರ್ಟ್‌ ಸ್ವೀಕರಿಸಿತಾದರೂ ರಾಷ್ಟ್ರಪತಿ ಆಜ್ಞೆಗೆ ತಡೆ ನೀಡಬೇಕೆಂಬ ಕೋರಿಕೆಯನ್ನು ತಳ್ಳಿಹಾಕಿತು.

ರಿಟ್‌ ಅರ್ಜಿಗಳ ವಿಚಾರಣೆ ಅಕ್ಟೋಬರ್‌ 14ರಂದು ನಡೆಯುತ್ತದೆ ಎಂದೂ ಈ ನ್ಯಾಯಾಲಯದ ಏಳು ಮಂದಿ ನ್ಯಾಯಾಧೀಶರನ್ನೊಳಗೊಂಡ ವಿಶೇಷ ಪೀಠವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT