ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಸೋಮವಾರ 2–3–1970

Last Updated 1 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಗಡಿ ವಿವಾದ: ಹಿಂಸಾಪ್ರವೃತ್ತಿಗೆ ಮುಖ್ಯಮಂತ್ರಿ ಕಳವಳ

ಬೆಂಗಳೂರು, ಮಾರ್ಚ್‌ 1– ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ರಾಜ್ಯದ ಕೆಲವೆಡೆಗಳಲ್ಲಿ ಹುಟ್ಟಿಕೊಳ್ಳತೊಡಗಿರುವ ಹಿಂಸಾಪ್ರವೃತ್ತಿಯ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಸಮಸ್ಯೆಗೆ ತುರ್ತು ಪರಿಹಾರ ಹುಡುಕಲು ಬದ್ಧರಾಗಿರುವ ಹಿರಿಯರಿಗೆ ಈ ಪ್ರಶ್ನೆಯನ್ನು ಬಿಟ್ಟು, ರಾಜ್ಯದಲ್ಲಿ ಶಾಂತಿ, ಸಮಾಧಾನ ನೆಲೆಸಲು ನೆರವು ನೀಡಬೇಕು’ ಎಂದು ಅವರು ಹೇಳಿಕೆಯೊಂದರಲ್ಲಿ ಜನತೆಯನ್ನು ವಿಜ್ಞಾಪಿಸಿಕೊಂಡಿದ್ದಾರೆ.

ಪುಟಾಣಿಗಳಿಗೆ ಸಮಾಜವಾದದ ವಗ್ಗರಣೆ

ನವದೆಹಲಿ,ಮಾರ್ಚ್‌ 1–ಮಕ್ಕಳಿಗಾಗಿ ಸಮಾಜವಾದಿ ಪ್ರಣಾಳಿಕೆಯೊಂದನ್ನು ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇಡಲಾಗಿದೆ.ಮುಂದಿನ ವರ್ಷ ಮೂರು ವರ್ಷ ವಯಸ್ಸಿನವರೆಗಿನ 20 ಲಕ್ಷ ಮಕ್ಕಳಿಗೆ ಅನ್ವಯಿಸುವ ಪೌಷ್ಟಿಕ ಆಹಾರ ಸರಬರಾಜಿನ ವಿಶೇಷ ಕಾರ್ಯಕ್ರಮವೊಂದು ಜಾರಿಗೆ ಬರುತ್ತದೆ. ಇದರಲ್ಲಿ
10 ಲಕ್ಷ ಮಕ್ಕಳು ಗುಡ್ಡಗಾಡು ಪ್ರದೇಶದವರಾದರೆ ಉಳಿದವರು ಮೆಟ್ರೊಪಾಲಿಟನ್‌ ನಗರಗಳಲ್ಲಿನ ಕೊಳಚೆ ಪ್ರದೇಶದವರು.

ಮಂಗಳೂರು ಬಂದರು ಅಭಿವೃದ್ಧಿಗೆ 4.25 ಕೋಟಿ ರೂ. ಮೀಸಲು

ನವದೆಹಲಿ, ಮಾರ್ಚ್‌ 1– ಹೊಸ ಬಜೆಟ್‌ನಲ್ಲಿ ಮಂಗಳೂರು ಮತ್ತು ತೂತ್ತುಕುಡಿ ಬಂದರುಗಳ ಅಭಿವೃದ್ಧಿಗಾಗಿ ತಲಾ 4.25 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರ ಜತೆಗೆ ಕೇಂದ್ರ ಡ್ರೆಡ್ಜಿಂಗ್‌ ಸಂಸ್ಥೆಯಿಂದ ಎರಡು ಡ್ರೆಡ್ಜರ್‌ಗಳನ್ನು ಕೊಳ್ಳುವುದಕ್ಕಾಗಿ 6.48 ಕೋಟಿ ರೂಪಾಯಿ ಸೌಲಭ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT