ಬುಧವಾರ, 3–7–1968

7
ವರ್ಷ

ಬುಧವಾರ, 3–7–1968

Published:
Updated:

ಮಂಡ್ಯ ಸಕ್ಕರೆ ಕಾರ್ಖಾನೆ ಕೆಲಸ 15 ರೊಳಗಾಗಿ ಪುನಃ ಆರಂಭ

ಬೆಂಗಳೂರು, ಜುಲೈ 2– ಕಬ್ಬಿನ ಬೆಲೆ ವಿಚಾರದಲ್ಲಿ ಉದ್ಭವಿಸಿದ್ದ ವಿವಾದದಿಂದ ಮುಚ್ಚಿದ ಮಂಡ್ಯದ ಸಕ್ಕರೆ ಕಾರ್ಖಾನೆ ಇಂದು ಇಲ್ಲಿ ನಡೆದ ಫಲಪ್ರದ ಸಂಧಾನದಿಂದ ಜುಲೈ 15ರ ಒಳ
ಗಾಗಿ ಪ್ರಾರಂಭವಾಗುವ ಸೂಚನೆ ಇದೆ.

ಕೈಗಾರಿಕಾ ಸಚಿವರ ಕೊಠಡಿಯಲ್ಲಿ ನಡೆದ ರೈತ ಮುಖಂಡರ, ಕಾರ್ಖಾನೆಯ ಆಡಳಿತ ವರ್ಗ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರತಿನಿಧಿಗಳ ಸಭೆಯಲ್ಲಿ ವಿವಾದಕ್ಕೆಡೆಗೊಟ್ಟ ವಿಚಾರಗಳು ಇತ್ಯರ್ಥವಾದುವು.

ಚಳವಳಿಗೆ ದೊರೆತ ಜಯ–ಎಸ್.ಎಂ. ಕೃಷ್ಣ

ಬೆಂಗಳೂರು, ಜು. 3– ಮಂಡ್ಯ ಸಕ್ಕರೆ ಕಾರ್ಖಾನೆ ಬಿಕ್ಕಟ್ಟು ಪರಿಹಾರ ಸಂಬಂಧದಲ್ಲಿ ರಾಜ್ಯದ ಕೈಗಾರಿಕಾ ಸಚಿವ ಶ್ರೀ ರಾಜಶೇಖರ ಮೂರ್ತಿ ಇಂದು ಇಲ್ಲಿ ಸುದ್ದಿಗಾರರಿಗೆ ಕೊಟ್ಟ ಹೇಳಿಕೆಗೆ ಲೋಕ ಸಭಾ ಸದಸ್ಯ
ಶ್ರೀ ಎಸ್.ಎಂ. ಕೃಷ್ಣ ಅವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ‘ಕಳೆದ ಒಂದು ತಿಂಗಳಿನಿಂದ ನಡೆದ ಮಂಡ್ಯ ಜಿಲ್ಲೆ ಕಬ್ಬು ಬೆಳೆಗಾರರ ಚಳವಳಿಗೆ ಮೊದಲ ಸುತ್ತಿನ ಜಯಲಭಿಸಿದೆ’ ಎಂದರು.

ಕಪಿ ಮಾನವನ ಪೂರ್ವ ವಂಶಜ

ಅಟ್ಲಾಂಟ, ಜು. 2– ಪ್ರಾಚೀನ ಕಪಿಮಾನವ ಮತ್ತು ಮಾನವನಿಗೆ ಸಂಬಂಧಿಸಿದ ಪ್ರಾಣಿಯೊಂದರ ದವಡೆಯ ಪಳೆಯುಳಿಕೆ ಉತ್ತರ ಭಾರತದಲ್ಲಿ ದೊರೆತಿದೆ.

ಇಂದು ನಾವು ಕಾಣುವ ಗೊರಿಲ್ಲಾಗಳಿಗಿಂತ ದೊಡ್ಡದಾದ ಪ್ರಾಣಿ ಇದೆಂದು ಗೊತ್ತಾಗಿದೆ.

ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷಕ್ಕೆ ನಾಂದಿ

ವಿಜಯವಾಡ, ಜು. 2– ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷದ ನವ್ಯ ಸುಧಾರಣಾವಾದ ಹಾಗೂ ಕೇಂದ್ರದ ನಾಯಕಗಣದ ವಿನಾಶಕಾರಕ ಮಾರ್ಗದ ವಿರುದ್ಧಹೊಡೆದಾಡಿ ‘ಮಾರ್ಕ್ಸಿಸಂ, ಲೆನಿನರ ಮತ್ತು ಮಾವೋ ದರ್ಶನ’ಗಳ ಆಧಾರದ ಮೇಲೆ ನಿಜವಾದ ಕ್ರಾಂತಿಕಾರಕ ಕಮ್ಯುನಿಸ್ಟ್ ಪಕ್ಷ ಕಟ್ಟುವಂತೆ ಪಕ್ಷದಿಂದ ಉಚ್ಛಾಟಿತರಾಗಿರುವ ಶ್ರೀ ವಿ. ನಾಗಿರೆಡ್ಡಿ ಮತ್ತಿತರ ಮೂವರು ಗಣ್ಯರು ಹಾಗೂ ಅವರ ಬೆಂಬಲಿಗರು ಸದಸ್ಯರಿಗೆ ಕರೆ ಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !