ಸೋಮವಾರ, 8–7–18

7

ಸೋಮವಾರ, 8–7–18

Published:
Updated:
ಕೇಂದ್ರ ಸಂಪರ್ಕ ಮತ್ತು ಸಂಸತ್‌ ವ್ಯವಹಾರಗಳ ಶಾಖೆ ಸಚಿವ ಡಾ. ರಾಂಸುಭಗ್‌ಸಿಂಗ್‌ ಅವರು ಶನಿವಾರ ನವದೆಹಲಿಯಲ್ಲಿ ರಾಷ್ಟ್ರೀಯ ಅಂಚೆಚೀಟಿಗಳ ಸಂಗ್ರಹಾಲಯದ ಉದ್ಘಾಟನೆಯನ್ನು ನೆರವೇರಿಸಿದರು.

ನದೀ ನೀರಿನ ನ್ಯಾಯಸಮ್ಮತ ಹಂಚಿಕೆ: ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಪತ್ರ

ಬೆಂಗಳೂರು, ಜುಲೈ 7– ಕೃಷ್ಣಾ– ಗೋದಾವರಿ ನದಿ ನೀರಿನ ವಿವಾದವನ್ನು ಇತ್ಯರ್ಥಕ್ಕಾಗಿ ಪಂಚಾಯಿತಿಗೆ ಒಪ್ಪಿಸುವಾಗ ನೀರಿನ ಹಂಚಿಕೆ ನ್ಯಾಯಸಮ್ಮತವಾಗಿ ಹಾಗೂ ಶಾಸ್ತ್ರೀಯವಾದ ರೀತಿಯಲ್ಲಿ ಆಗುವುದಕ್ಕೆ ಮೊದಲು ಗಮನ ನೀಡಬೇಕೆಂದು ಮೈಸೂರು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಪ್ರತಿ ರಾಜ್ಯಕ್ಕೆ ಮುಖ್ಯ ನದಿ ಮತ್ತು ಉಪನದಿಗಳಿಂದ ದೊರಕಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸಬೇಕೆಂದು ಟ್ರಿಬ್ಯೂನಲ್‌ಗೆ ಸೂಚಿಸಬೇಕು. ಅದರಿಂದ ತನ್ನ ಪಾಲಿನ ನೀರನ್ನು ಪೂರ್ಣವಾಗಿ ಬಳಸಿಕೊಳ್ಳಲು ಆಯಾ ರಾಜ್ಯಕ್ಕೆ ಸಾಧ್ಯವಾದೀತು ಎಂದು ಪತ್ರದಲ್ಲಿ ತಿಳಿಸಲಾಗಿದೆ.

**

ಕೋಮು– ಪ್ರಾಂತೀಯವಾದದ ವಿರುದ್ಧ ಹೋರಾಡಲು ಜನತೆಗೆ ಪ್ರಧಾನಿ ಕರೆ

ಚಂದ್ರಪುರ, (ಬಿಹಾರ) ಜುಲೈ 7– ಕೋಮುವಾದ ಮತ್ತು ಪ್ರಾಂತೀಯವಾದದ ವಿರುದ್ಧ ಹೋರಾಡಲು ಜನತೆಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಕರೆಕೊಟ್ಟರು.

ಡಿ.ವಿ.ಸಿ.ಯಂತೆ ಅಂತರರಾಜ್ಯ ಯೋಜನೆಗಳಲ್ಲಿ ಜನರು ಒಗ್ಗೂಡಿ ದುಡಿಯಬೇಕೆಂದೂ ಅವರು ಹೇಳಿದರು.

**

ಕಾಂಗ್ರೆಸ್ಸೇತರ ಸರ್ಕಾರ ಪತನ ‘ಒಳ್ಳೆಯದು’

ಮದ್ರಾಸ್‌, ಜುಲೈ 7– ಹಲವು ಕಾಂಗ್ರೆಸ್ಸೇತರ ಸರ್ಕಾರಗಳು ಉರುಳುತ್ತಿರುವುದು ‘ಒಳ್ಳೆಯದು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಎಸ್‌. ನಿಜಲಿಂಗಪ್ಪ ಅವರು ಹೇಳಿದರು.

ವಿವಿಧ ಪಕ್ಷಗಳು ಸೇರಿ ರಚಿಸಿಕೊಂಡ ಈ ಸರ್ಕಾರಗಳಲ್ಲಿ ಬರೀ ಒಳಜಗಳಗಳೇ ನಡೆಯುತ್ತಿದ್ದವು. ಅವು ಬೇರೇನನ್ನೂ ಸಾಧಿಸಲಿಲ್ಲ. ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಕಾಯ್ದೆ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದ ಸರ್ಕಾರಕ್ಕೆ ಅಸ್ತಿತ್ವದಲ್ಲಿರಲು ಹಕ್ಕಿಲ್ಲ. ಅದು ತೀರಾ ನಾಚಿಕೆಗೆಡಿನ ವಿಷಯ ಎಂದರು.

**

ಮಹಾಜನ್‌ ವರದಿ ಇನ್ನೂ ಜೀವಂತ ಪ್ರಶ್ನೆ: ಮಹಾರಾಷ್ಟ್ರ ಸಚಿವ ದೇಸಾಯಿ

ಕೊಲ್ಹಾಪುರ, ಜುಲೈ 7– ಮೈಸೂರು ಮಹಾರಾಷ್ಟ್ರ ಗಡಿ ವಿವಾದವನ್ನು ಕುರಿತ ಮಹಾಜನ್‌ ಆಯೋಗದ ವರದಿಯನ್ನು ಕೈಬಿಡಲಾಗಿದೆ ಎಂಬ ವರದಿಗಳಲ್ಲಿ ಹುರುಳಿಲ್ಲ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಡಿ.ಎಸ್‌. ದೇಸಾಯಿ ಹೇಳಿದರು.

**

ಪಾಕ್‌ಗೆ ಶಸ್ತ್ರ ಮಾರಲು ರಷ್ಯಾ ನಿರ್ಧಾರ: ಭಾರತಕ್ಕೆ ಪೇಚು

ನವದೆಹಲಿ, ಜುಲೈ 7– ಪಾಕಿಸ್ತಾನಕ್ಕೆ ಶಸ್ತ್ರ ಸರಬರಾಜು ಮಾಡಲು ರಷ್ಯಾ ನಿರ್ಧರಿಸಿದೆ.

ರಷ್ಯಾ ವಿದೇಶಾಂಗ ಕಚೇರಿ ಅಧಿಕಾರಿ ಸ್ಮಿರ್ ಸೋವ್‌ ಈ ವಿಷಯವನ್ನು ನಿನ್ನೆ ಪ್ರಧಾನಿ ಇಂದಿರಾಗಾಂಧಿಗೆ ತಿಳಿಸಿದರು.

**

ಪೊಲೀಸ್‌ ದಿಗ್ಬಂಧನ ಧಿಕ್ಕರಿಸಿದ ಮಾಜಿ ಖೈದಿ

ಸಿಡ್ನಿ, ಜುಲೈ 7– ಮನೆಯ ಸುತ್ತ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ಸರ್ಪಗಾವಲು. ಆದರೂ 23ವರ್ಷ ವಯಸ್ಸಿನ ಕಾರುಕಳ್ಳ ವ್ಯಾಲಾಸ್‌ ಮೆಲಿಷ್‌ ಜಗ್ಗುತ್ತಿಲ್ಲ. ಆರು ದಿನಗಳಿಂದ ಪೊಲೀಸ್‌ ಕಾವಲನ್ನು ಆತ ಧಿಕ್ಕರಿಸುತ್ತಿದ್ದಾನೆ.

ವ್ಯಾಲಾಸ್‌ನ ಹದಿನೆಂಟು ವರ್ಷದ ಪತ್ನಿ, ಆರು ವಾರದ ಮಗು ಆತನಿಗೆ ಪೊಲೀಸರಿಂದ ರಕ್ಷೆ. ಒಳಗೆ ಬಂದರೆ ನೂರು ಜನರನ್ನಾದರೂ ಕೊಂದೇನು. ಆದರೆ ಶರಣಾಗುವುದಿಲ್ಲ ಎಂದು ಬಂದೂಕುಧಾರಿಯಾಗಿ ಆರು ಹಗಲು ಇರುಳು ನಿಂತಿದ್ದಾನೆ ವ್ಯಾಲಾಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !